Breaking News

ಬೆಳಗಾವಿ

ಬೇನಾಡಿ-ಅಪ್ಪಾಚಿವಾಡಿ ಗ್ರಾಮಗಳ ಅವ್ಯವಸ್ಥೆ; 20 ವರ್ಷವಾದರೂ ಆರಂಭವಾಗದ ಸೇತುವೆ ಕೆಲಸ ಡಿಸಿ ಆದೇಶ ಪಾಲಿಸಿದ್ದರೇ, ಗ್ರಾ.ಪಂ.ಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದ ರಾಜ್ಯ ರೈತ ಸಂಘ

ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಅವ್ಯವಸ್ಥೆ ಹಾಗೂ ಕಾಳಮ್ಮಾವಾಡಿ ಕಾಲುವೆಯ ಸೇತುವೆ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ಇಂದು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸಂಘದವ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಕಚೇರಿಗಳಿಗೆ ಬೀಗ ಹಾಕುವುದಾಗಿ ರೈತ ನಾಯಕರು ಗುಡುಗಿದ್ದಾರೆ. ಇಂದು ಬೆಳಗಾವಿಗೆ ಆಗಮಿಸಿದ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದರು. ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದಲ್ಲಿ ಚರಂಡಿ, …

Read More »

ಬೆಳಗಾವಿಯಲ್ಲಿ ಮಹಾಪಾಲಿಕೆ ಗರ್ಜನೆ: ‘ಆಪರೇಷನ್ ಬೀದಿ ನಾಯಿ’ ಆರಂಭ, ಬೆಚ್ಚಿಬಿದ್ದ ಶ್ವಾನಗಳು!

ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮಹಾನಗರ ಪಾಲಿಕೆ ಕಠಿಣ ಕ್ರಮಕ್ಕೆ ಮುಂದಾಗಿದೆ. ನಗರದ ವಿವಿಧ ಭಾಗಗಳಲ್ಲಿ ನಾಗರಿಕರ ಆತಂಕಕ್ಕೆ ಕಾರಣವಾಗಿದ್ದ ಬೀದಿ ನಾಯಿಗಳ ಸಮಸ್ಯೆಯನ್ನು ನಿಯಂತ್ರಿಸಲು ಶನಿವಾರ “ಆಪರೇಷನ್ ಬೀದಿ ನಾಯಿ” ಹೆಸರಿನಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಕಾರ್ಯಾಚರಣೆಯ ಅಂಗವಾಗಿ ನಗರದ ಶೆಟ್ಟಿಗಲ್ಲಿ ಪ್ರದೇಶದಲ್ಲಿ ಪಾಲಿಕೆ ಸಿಬ್ಬಂದಿ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಹಾಗೂ ಹಿಂಸಾತ್ಮಕವಾಗಿ …

Read More »

ನಾನೂ ಸಿಎಂ ಸ್ಥಾನದ ಆಕಾಂಕ್ಷಿ; ಸಚಿವ ಸತೀಶ್ ಜಾರಕಿಹೊಳಿ

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಶಿವಮೊಗ್ಗದಲ್ಲಿ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ತಾವೂ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸ್ಥಾನದ ಮೇಲೆ ತಮಗೂ ಆಸೆ ಇದೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ ಎಂದು ಹೇಳಿದ ಅವರು, …

Read More »

ಯತ್ನಾಳ್ ಒಬ್ಬ ಹುಚ್ಚ: ಶಾಸಕ ಆಸೀಫ್ ಸೇಠ್ ಆಕ್ರೋಶ

ಮುಸ್ಲಿಂ ಮತ ಬಿಜೆಪಿಗೆ ಬೇಡ ಎನ್ನುವ ಯತ್ನಾಳ್ ಒಬ್ಬ ಹುಚ್ಚ ಎಂದು ಬೆಳಗಾವಿ ಉತ್ತರ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅವರು ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಮೆಗೆ ಮುಸ್ಲಿಂರ ಮತಗಳು ಬೇಡ ಎಂದಿದ್ದಾರೆ. ಹಾಗಾಗಿ ಯತ್ನಾಳ ಒಬ್ಬ ಹುಚ್ಚ. ಅವನ ಮಾತು ಏನ್ ಕೇಳತ್ತಿರಾ. ಇವರ ತಪ್ಪು ಕಲ್ಪನೆಯಿಂದ ದೇಶ ಹಾಳಾಗುತ್ತಿದೆ. ಇವರು ಬೇಡ, ಅವರು ಬೇಡ …

Read More »

ಗ್ರಾ.ಪಂ ಅವ್ಯವಹಾರ: ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ಬೆಳಗಾವಿ : ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಳಗತಾ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆಸಿದ ಗ್ರಾಪಂ ಅಧ್ಯಕ್ಷೆ ಮಾಧುರಿ ಪಾಟೀಲ, ಪಿಡಿಓ ಚಂದ್ರಕಾಂತ ಮುರಗೋಡ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರುದ್ರಮುನಿಸ್ವಾಮಿ ಚಿಕ್ಕಮಠ,ಗ್ರಾಪಂ ಸದಸ್ಯ ಲಕ್ಷ್ಮಣ ಶಿಪ್ಪೂರೆ,ಬಾಳಾಸಾಹೇಬ ಬೇಡಿಕಿಹಾಳ ಮತ್ತು ದಿನಗೂಲಿ ನೌಕರ ವಿಕಾಸ ಹಟ್ಟಿಯವರ ಅಪರಾಧಿಗಳಿಗೆ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಮೂರು ವರ್ಷ ಕಾರಾಗೃಹ ಶಿಕ್ಷೆ,ಮತ್ತು 100100 ರೂ. ದಂಡ ವಿಧಿಸಿ ಈಚೆಗೆ ತೀರ್ಪು ಪ್ರಕಟಿಸಿದೆ. ಗಳತಗಾ …

Read More »

ಡಿಸಿಸಿ ಬ್ಯಾಂಕ್‌ಗೆ 56.25 ಕೋಟಿ ರೂ. ನಿವ್ವಳ ಲಾಭ

ರಾಜ್ಯದಲ್ಲಿಯೇ ಅತಿಹೆಚ್ಚು ಠೇವಣಿ ಹೊಂದಿರುವ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಟ್ಟಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಬಿಡಿಸಿಸಿ) ಪ್ರಸಕ್ತ ಸಾಲಿನಲ್ಲಿ 56.25 ಕೋಟಿ ರೂ. ನಿವ್ವಳ ಲಾಭ ಹೊಂದಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೋಲ್ಲೆ ತಿಳಿಸಿದರು. ನಗರದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ  ಅತಿ ಹೆಚ್ಚು ಬೆಳೆಸಾಲ ವಿತರಿಸಿದ ಬ್ಯಾಂಕ್ ನಮ್ಮದಾಗಿದೆ. 2025-26ನೇ ಸಾಲಿನಲ್ಲಿ ಜಿಲ್ಲೆಯ …

Read More »

ಜಿಲ್ಲೆಯಲ್ಲಿ 8,309 ಬೆಳೆ ವಿಮೆ ಅರ್ಜಿ ತಿರಸ್ಕಾರ

ಬೆಳಗಾವಿ:  ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ವಿಮಾ ಸಂಸ್ಥೆಯಿಂದ 8,309 ಬೆಳೆ ವಿಮೆ ಪ್ರಸ್ತಾವನೆಗಳು ತಿರಸ್ಕೃತವಾಗಿವೆ. ರೈತರ ಬೆಳೆ ವಿಮೆಗೆ ನೋಂದಣಿಯಾದ ಪ್ರಸ್ತಾವನೆ ಬೆಳೆ ಸಮೀಕ್ಷೆಯ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿ ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗೆ ಅಳವಡಿಸಿ ತಾಳೆ ಆಗಿರುವ ಪ್ರಸ್ತಾವನೆಗಳಿಗೆ ಸಂರಕ್ಷಣೆ ತಂತ್ರಾಅಶದಲ್ಲಿ ವಿಮಾ ಪರಿಹಾರಕ್ಕಾಗಿ ಲೆಕ್ಕ ಹಾಕಲಾಗಿದೆ.ಇವುಗಳಲ್ಲಿ ಮುಂಗಾರು …

Read More »

ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಮಹಾನಗರ ನಿರ್ಮಾಣ ಸಂಕಲ್ಪ

ಬೆಳಗಾವಿ:ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಮಹಾನಗರ ನಿರ್ಮಾಣ ಮಾಡಲು ಪ್ರತಿಯೊಬ್ಬರು  ಕೈಜೋಡಿಸಬೇಕು. ಪ್ಲಾಸ್ಟಿಕ್ ಬಳಕೆ ಕೈಬಿಡಲು ಸ್ವಯಂ ಪ್ರೇರಣೆ ಸಂಕಲ್ಪ ಮಾಡಬೇಕು ಎಂದು ಪಾಲಿಕೆ ಆಯುಕ್ತ ಕಾರ್ತಿಕ್.ಎಂ ಹೇಳಿದರು. ನಗರದ ನರಗುಂದಕರ ಬಾವಿ ಚೌಕ್‌ನಲ್ಲಿ ಗುರುವಾರ ವಿಶ್ವ ಜಲದಿನ, ಪ್ಲಾಸ್ಟಿಕ್ ಮುಕ್ತ ಅರಿವು ಹಾಗೂ ಕ್ಲಾಥ್ ಬ್ಯಾಗ್ ವೆಡ್ಡಿಂಗ್ ಯಂತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತಿಯಾದ ಪ್ಲಾಸ್ಟಿಕ್ ಬಳಕೆ ಜನರು ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ, ಪರಿಸರ …

Read More »

ಬೆಳಗಾವಿ: ಗ್ರಾಹಕರ ಹಣ ಮರಳಿಸದ ಸೊಸೈಟಿ ಅಧ್ಯಕ್ಷನಿಗೆ ಒಂದು ವರ್ಷ ಜೈಲು ಶಿಕ್ಷೆ

ಗ್ರಾಹಕರ ಠೇವಣಿ ಮರಳಿಸುವಂತೆ ನೀಡಿದ್ದ ಆದೇಶ ಪಾಲಿಸದ ಬೆಳಗಾವಿಯ ರಿದ್ದಿಸಿದ್ಧಿ ವಿವಿಧೋದ್ದೇಶ ಕೋ-ಆಪ್ ಸೊಸೈಟಿ ಅಧ್ಯಕ್ಷ ಶ್ಯಾಮ ಜಾಧವಗೆ 1 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ಪ್ರಕಟಿಸಿದೆ ಎಂದು ನ್ಯಾಯವಾದಿ ಎನ್.ಆರ್.ಲಾತೂರ್ ತಿಳಿಸಿದರು. ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಠೇವಣಿ ಅವಧಿ ಮುಗಿದರೂ ಹಣ ಮರಳಿಸುತ್ತಿಲ್ಲ ಎಂದು ಸೊಸೈಟಿ ಗ್ರಾಹಕರಾದ ಸ್ನೇಹಾ ನಾದ ಮತ್ತು …

Read More »

ರೈತರ ಏಳಿಗೆಗೆ ಶ್ರಮಿಸುತ್ತಿದೆ ಸರ್ಕಾರ

ಅಥಣಿ ಗ್ರಾಮೀಣ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ರಸ್ತೆ, ನೀರಾವರಿ, ಶಾಲಾ ಕೊಠಡಿ ಸೇರಿದಂತೆ ಹಲವು ಕಾಮಗಾರಿ ಕೈಗೊಂಡು ಹಿಂದುಳಿದವರು, ರೈತರು, ಕೂಲಿ ಕಾರ್ಮಿಕರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅಥಣಿ ತಾಲೂಕಿನ ಅಬ್ಬಿಹಾಳ ಗ್ರಾಮದ ಬಳಿ ೩.೬೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಖಿಳೇಗಾಂವ ಅಥಣಿ, ಸತ್ತಿ ರಾಜ್ಯ ಹೆದ್ದಾರಿ ಡಾಂಬರೀಕರಣ ಹಾಗೂ ೩ ಕೋಟಿ ರೂ. ವೆಚ್ಚದಲ್ಲಿ ದರೂರ ಗ್ರಾಮದಿಂದ ಖವಟಕೊಪ್ಪ …

Read More »