Breaking News

ಬೆಳಗಾವಿ

ಬೆಳಗಾವಿಯ ಯೆಳ್ಳೂರ ಫಲಕ ವಿವಾದ: 10 ವರ್ಷಗಳ ಸುದೀರ್ಘ ಹೋರಾಟಕ್ಕೆ ಸಿಕ್ಕಿತು ಜಯ; ಎಲ್ಲಾ ಆರೋಪಿಗಳು ನಿರ್ದೋಷಿ ಮುಕ್ತ!

ಬೆಳಗಾವಿಯ ಯೆಳ್ಳೂರಿನಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ‘ಮಹಾರಾಷ್ಟ್ರ ರಾಜ್ಯ ಯೆಳ್ಳೂರ’ ಫಲಕ ವಿವಾದಕ್ಕೆ ಸಂಬಂಧಿಸಿದಂತೆ ಈಗ ಮಹತ್ವದ ತೀರ್ಪು ಹೊರಬಿದ್ದಿದೆ. ಅಂದು ಗ್ರಾಮಸ್ಥರ ಮೇಲೆ ದಾಖಲಾಗಿದ್ದ ಎಲ್ಲಾ ಏಳು ಪ್ರಕರಣಗಳಲ್ಲಿಯೂ ಇದೀಗ ನ್ಯಾಯಾಲಯವು ಎಲ್ಲರನ್ನೂ ನಿರ್ದೋಷಿಗಳೆಂದು ಘೋಷಿಸಿದ್ದು, ಮರಾಠಿ ಭಾಷಿಕರ ಕಾನೂನು ಹೋರಾಟಕ್ಕೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಜುಲೈ 27, 2014 ರಂದು ಯೆಳ್ಳೂರಿನಲ್ಲಿ ‘ಮಹಾರಾಷ್ಟ್ರ ರಾಜ್ಯ’ ಎಂಬ ಫಲಕವನ್ನು ತೆರವುಗೊಳಿಸಿದ ಹಿನ್ನಲೆ ದೊಡ್ಡ ಮಟ್ಟದ ಗದ್ದಲ ನಡೆದಿತ್ತು. …

Read More »

ಬೆಳಗಾವಿಯಲ್ಲಿ 107ನೇ ವರ್ಷದ ಶಿವಜಯಂತಿ ಸಂಭ್ರಮ: ಏಪ್ರಿಲ್ 21ಕ್ಕೆ ಭವ್ಯ ರೂಪಕಗಳ ಮೆರವಣಿಗೆ!

ಬೆಳಗಾವಿಯ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಶಿವಜಯಂತಿ ಉತ್ಸವದ ಪೂರ್ವಸಿದ್ಧತೆಗಾಗಿ ಶಹಾಪುರ ಕೇಂದ್ರವರ್ತಿ ಶ್ರೀ ಶಿವಜಯಂತಿ ಉತ್ಸವ ಮಹಾಮಂಡಳದ ಮಹತ್ವದ ಸಭೆ ಜರುಗಿತು. 107 ವರ್ಷಗಳ ಇತಿಹಾಸವಿರುವ ಈ ಬಾರಿಯ ಉತ್ಸವದಲ್ಲಿ ಏಪ್ರಿಲ್ 19 ರಂದು ಶಿವಜಯಂತಿ ಹಾಗೂ ಏಪ್ರಿಲ್ 21 ರಂದು ಭವ್ಯ ರೂಪಕಗಳ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ಶಹಾಪುರದ ಸಾಯಿಗಣೇಶ ಸೊಸೈಟಿ ಸಭಾಂಗಣದಲ್ಲಿ ಅಧ್ಯಕ್ಷ ನೇತಾಜಿ ಜಾಧವ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಈ ವೇಳೆ ಮಾತನಾಡಿದ …

Read More »

ನಂದಗಡ ಆಸ್ಪತ್ರೆಯಲ್ಲಿ ವೈದ್ಯರ ಗೈರು: ರೋಗಿಗಳ ಅಳಲು ಕೇಳುವವರೇ ಇಲ್ಲ!

ಖಾನಾಪೂರ ತಾಲೂಕಿನ ನಂದಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಚಿಕಿತ್ಸೆಗಾಗಿ ಬರುವ ರೋಗಿಗಳು ಗಂಟೆಗಟ್ಟಲೆ ಕಾಯುವಂತಾಗಿದ್ದು, ಕೇಳುವವರು ಯಾರೂ ಇಲ್ಲದಂತಾಗಿದೆ. ಖಾನಾಪೂರ ತಾಲೂಕಿನ ನಂದಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬರುವ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯವಾಗಿ ಇಲ್ಲಿನ ಪೀಡಿಯಾಟ್ರಿಷಿಯನ್ (ಮಕ್ಕಳ ವೈದ್ಯರು) ಲಭ್ಯವಿಲ್ಲದ ಕಾರಣ, ಜ್ವರ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿರುವ ನೂರಾರು ಮಕ್ಕಳು ಸರಿಯಾದ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ, ತಮಗೆ …

Read More »

ವೇದಿಕೆ ಸಜ್ಜಾಗಿದೆ, ಕೆಲವೇ ದಿನಗಳಲ್ಲಿ ಮರಳಿ ಬಿಜೆಪಿಗೆ ಬರಲಿದ್ದಾರೆ ಯತ್ನಾಳ್‌ : ರಮೇಶ್‌ ಜಾರಕಿಹೊಳಿ

ಬೆಳಗಾವಿ: ಬಸನಗೌಡ ಪಾಟೀಲ್‌ ಯತ್ನಾಳ್‌ಕೆಲವೇ ದಿನಗಳಲ್ಲಿ ಮರಳಿ ಬಿಜೆಪಿಗೆ  ಬರುತ್ತಾರೆ ಎಂದು ಅಥಣಿಯಲ್ಲಿ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಉಚ್ಚಾಟನೆಯಾದ ದಿನದಿಂದ ನಾನು ಯತ್ನಾಳ್‌ ಅವರನ್ನು ಮರಳಿ ಬಿಜೆಪಿಗೆ (BJP) ಕರೆತರುವ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ಒಂದು ವೇದಿಕೆ ಸಜ್ಜಾಗಿದೆ ಎಂದರು. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಯತ್ನಾಳ್ ಪ್ರಚಾರ ನಡೆಸಿದ್ದು ಒಳ್ಳೆಯ ಬೆಳವಣಿಗೆ. ಯತ್ನಾಳ್ ಪ್ರಚಾರದಿಂದ ನಮ್ಮ ಅಭ್ಯರ್ಥಿಗೆ ಲಾಭವಾಗಬಹುದು ಎಂದು ಭವಿಷ್ಯ ನುಡಿದರು. …

Read More »

ಪತ್ನಿ ಆತ್ಮಹತ್ಯೆ ಸುದ್ದಿ ತಿಳಿದು ಆಘಾತ – ಗಡಿಬಿಡಿಯಲ್ಲಿ ಬರುವಾಗ ಅಪಘಾತದಲ್ಲಿ ಪತಿಯೂ ಸಾವು

ಬೆಳಗಾವಿ: ಪತ್ನಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದು ಆಸ್ಪತ್ರೆಗೆ ಧಾವಿಸುತ್ತಿದ್ದ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಮಧುರಾ ಕರೆಪ್ಪ ಮಾದರ (30), ಕರೆಪ್ಪ ಗಂಗಪ್ಪ ಮಾದರ (36) ಮೃತ ದಂಪತಿ.‌ ಮಧುರಾ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಇದರಿಂದ ಮನನೊಂದು ವಿಷ ಸೇವಿಸಿದ್ದರು. ತಕ್ಷಣ ಅವರನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ …

Read More »

ವಿಶ್ವೇಶ್ವರಯ್ಯ ಪ್ರಶಸ್ತಿ ಪುರಸ್ಕೃತೆ ಶಾಂತಾ ಶ್ರೀಶೈಲಪ್ಪ ಸೊಬರದ ಲಿಂಗೈಕ್ಯ

ಬೆಳಗಾವಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕದ ಧ್ರುವತಾರೆ ಅಸ್ತಮಿಸಿದೆ. ಬಸವ ಪಥದಲ್ಲಿ ನಡೆದು, ಅಕ್ಕನ ಬಳಗ ಹಾಗೂ ಲಿಂಗಾಯತ ಸಂಘಟನೆಗಳ ಮೂಲಕ ಮನೆಮಾತಾಗಿದ್ದ ಶರಣೆ ಶಾಂತಾ ಶ್ರೀಶೈಲಪ್ಪ ಸೊಬರದ ಅವರು ಇಂದು ನಿಧನರಾದರು. ಬೆಳಗಾವಿಯ ಹಿರಿಯ ಸಮಾಜ ಸೇವಕಿ ಹಾಗೂ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ವಿಶ್ವೇಶ್ವರಯ್ಯ ಪ್ರಶಸ್ತಿ’ ಪುರಸ್ಕೃತೆ ಶಾಂತಾ ಶ್ರೀಶೈಲಪ್ಪ ಸೊಬರದ ಅವರು ಇಂದು ಮಧ್ಯಾನ್ಹ ಲಿಂಗೈಕ್ಯರಾಗಿದ್ದಾರೆ. ಮಹಾಲಕ್ಷ್ಮಿ ಮಹಿಳಾ ಮಂಡಳದ ಅಧ್ಯಕ್ಷರಾಗಿ, ಬಸವ ಸಮಿತಿಯ ಅಕ್ಕನ ಬಳಗದ …

Read More »

ಬೆಳಗಾವಿ ಜೆಎನ್‌ಎಂಸಿ ಆವರಣದಲ್ಲಿ ತಂಬಾಕು ನಿಯಂತ್ರಣ ಕೋಶದ ‘ಸರ್ಜಿಕಲ್ ಸ್ಟ್ರೈಕ್’: 40 ಪ್ರಕರಣ ದಾಖಲು!

ಬೆಳಗಾವಿಯ ಜೆಎನ್‌ಎಂಸಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿವೆ. ಕೋಟ್ಪಾ (COTPA) ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಗುಡುಗಿರುವ ಅಧಿಕಾರಿಗಳು, ಸ್ಥಳದಲ್ಲೇ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ನಗರದ ಜೆಎನ್‌ಎಂಸಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಇಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕೋಟ್ಪಾ-2003 ಕಾಯ್ದೆಯಡಿ ದಿಢೀರ್ ದಾಳಿ ನಡೆಸಲಾಯಿತು. ಜಿಲ್ಲಾ ಜಾರಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ …

Read More »

ಸಾವಿನಲ್ಲಿಯೂ ಒಂದಾದ ಗಂಡ, ಹೆಂಡತಿ,ಬೆಳಗಾವಿ ಜಿಲ್ಲೆಯಲ್ಲಿ ಹ್ರದಯವಿದ್ರಾವಕ ಘಟನೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಮನಸ್ಸು ಕಲುಕುವ ದಾರುಣ ಘಟನೆ ಸಂಭವಿಸಿದ್ದು, ಪತಿ, ಪತ್ನಿ ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ. ಮಧುರಾ ಕರೆಪ್ಪ ಮಾದರ (30) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೊಂದೆಡೆ, ಪತ್ನಿಯ ಸಾವಿನ ಸುದ್ದಿ ತಿಳಿದು ಆತಂಕಗೊಂಡ ಅವರ ಪತಿ ಕರೆಪ್ಪ …

Read More »

ಎರಡು ಬಾರಿ ಶಾಸಕರಾಗಿ ಕುಡುಚಿ ಮತಕ್ಷೇತ್ರವನ್ನ ಅಭಿವೃದ್ಧಿ ಮಾಡಿಲ್ಲಾ 

ಇಟನಾಳ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿ ಮತ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ ನೀವು ಮಾಡಿದ್ದಾದರೂ ಏನು ಪಿ.ರಾಜೀವ್ ಅವರೇ ಹಲವಾರು ಆಶ್ವಾಸನೆಗಳನ್ನು ಕೊಟ್ಟಿದ್ರಿ. ಆಶ್ವಾಸನೆಗಳ ಬದ್ಧವಾಗಿ ಕುಡಚಿ ಮತ ಕ್ಷೇತ್ರ ಜನರಿಗೆ ಯಾವ ಕೊಡುಗೆ ಕೊಡಲಿಲ್ಲ. ತಮಗೆ ಬೇಕಾದ ಚೌಹಾಣ್ ಮತ್ತು ರಾಥೋಡ್ ಎಂಬ ಗುತ್ತಿಗೆದಾರರನ್ನು ಗಳನ್ನು ಬೆಳೆಸಿಕ್ಕೊಂಡು ಇವರಿಗೆ ಗುತ್ತಿಗೆ ಕೆಲಸಗಳನ್ನ ಕೊಟ್ಟು ಅವರನ್ನು ಬೆಳಸಿ ತಾವು ಬೆಳದರಿ ಪಿ. ರಾಜೀವ್ ಅವರು ತಮ್ಮ ಬಕೆಟ್ …

Read More »

ರಾಮದುರ್ಗ ಮಂಡಲದ ನೂತನ ಬಿಜೆಪಿ ಪದಾಧಿಕಾರಿಗಳು ಪದಗ್ರಹಣ ಸಮಾರಂಭ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ ಅವರಿಂದ ಉದ್ಘಾಟನೆ..

ರಾಮದುರ್ಗ ನಗರದ ಶ್ರೀ ವಿಶ್ವೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಲಾದ ರಾಮದುರ್ಗ ಮಂಡಲದ ನೂತನ ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳ ಪದ ಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗೋಕಾಕ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ ಅವರು ಭಾಗವಹಿಸಿ ಪದ ಗ್ರಹಣ ಸಮಾರಂಭ ಉದ್ಘಾಟನೆ ನೆರವೇರಿಸಿ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು ಪಕ್ಷ ಸಂಘಟನೆಗೆ ಕಂಕಣ ಬದ್ಧರಾಗಿ ಕಾರ್ಯ ನಿರ್ವಹಿಸುವಂತೆ ಕಾರ್ಯಕರ್ತರಿಗೆ …

Read More »