Breaking News

ಈರುಳ್ಳಿ ಬೆಳೆಗಾರರಿಗೆ ಬಂಪರ್ – ಬೆಳಗಾವಿ ಎಪಿಎಂಸಿಯಲ್ಲಿ ದರ ದಿಢೀರ್ ಏರಿಕೆ

Spread the love

ಬೆಳಗಾವಿ: ಕಳೆದ ಎರಡು-ಮೂರು ವರ್ಷಗಳಿಂದ ನಿರಂತರ ನಷ್ಟ ಅನುಭವಿಸುತ್ತಿದ್ದ ಈರುಳ್ಳಿ ಬೆಳೆಗಾರರಿಗೆ ಈ ಬಾರಿ ಬಂಪರ್ ಬೆಲೆ ಸಿಕ್ಕಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಬೆಳಗಾವಿ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಣನೀಯವಾಗಿ ಏರಿಕೆಯಾಗಿದೆ.

ಕಳೆದ 15 ದಿನಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ 2,000 ದಿಂದ 2,500 ರೂಪಾಯಿ ಇದ್ದ ದರ, ಸದ್ಯ ಕ್ವಿಂಟಾಲ್‌ಗೆ 3,500 ರಿಂದ 4,500 ರೂಪಾಯಿವರೆಗೆ ಜಿಗಿದಿದೆ. ಇದರೊಂದಿಗೆ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ 35 ರಿಂದ 45 ರೂಪಾಯಿಗೆ ತಲುಪಿದೆ.

ಬೆಳಗಾವಿ ಸೇರಿದಂತೆ ದೇಶಾದ್ಯಂತ ಮಳೆ ಕೊರತೆ ಎದುರಾದ ಹಿನ್ನೆಲೆಯಲ್ಲಿ ಈರುಳ್ಳಿ ಇಳುವರಿ ಕುಸಿದಿದ್ದು, ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಆವಕವಾಗುತ್ತಿಲ್ಲ. ಬೆಳಗಾವಿ ಎಪಿಎಂಸಿಯಿಂದ ರಾಜ್ಯದ ನಾನಾ ಭಾಗಗಳು ಹಾಗೂ ನೆರೆಯ ಗೋವಾ ರಾಜ್ಯಕ್ಕೂ ಈರುಳ್ಳಿ ಸರಬರಾಜಾಗುವುದರಿಂದ ಇಲ್ಲಿ ಬೇಡಿಕೆ ಹೆಚ್ಚಾಗಿದೆ.

ಮಾರುಕಟ್ಟೆಯಲ್ಲಿ ದರ ಗಗನಕ್ಕೇರುತ್ತಿದ್ದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ್ದು, ಒಂದೇ ವಾರದಲ್ಲಿ ಕ್ವಿಂಟಾಲ್‌ಗೆ ಸುಮಾರು 500 ರೂಪಾಯಿವರೆಗೆ ದರ ಇಳಿಕೆಯಾಗಿದೆ. ನಿರಂತರವಾಗಿ ಏರಿಳಿತ ಕಾಣುತ್ತಿರುವ ಬೆಲೆಯಿಂದ ನಷ್ಟ ತಪ್ಪಿಸಲು ಈರುಳ್ಳಿಗೂ ಕನಿಷ್ಠ ಬೆಂಬಲ ಬೆಲೆ ಅಥವಾ ಗರಿಷ್ಠ ಮಾರಾಟ ದರ  ನಿಗದಿಪಡಿಸಬೇಕು ಎಂದು ಬೆಳೆಗಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Spread the love

About Laxminews 24x7

Check Also

ಜೈಲಿನೊಳಗೆ ಕೈದಿಗಳ ನಡುವೆ ಮಾರಾಮಾರಿ; ಜಗಳ ಬಿಡಿಸಲು ಹೋದ ಸಿಬ್ಬಂದಿ ಮೇಲೆಯೇ ಹಲ್ಲೆ

Spread the loveಹಾಸನ: ಜೈಲಿನೊಳಗೇ ವಿಚಾರಣಾಧೀನ ಕೈದಿಗಳ ನಡುವೆ  ಮಾರಾಮಾರಿ ನಡೆದಿದ್ದು, ಜಗಳ ಬಿಡಿಸಲು ಹೋದ ಜೈಲು ಸಿಬ್ಬಂದಿ ಮೇಲೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ