Breaking News

ಪ್ರಮೋಷನ್ ನೀಡುವುದಾಗಿ 50 ಸಾವಿರ ರೂ. ಲಂಚ – ಸೆಲ್ಫಿ ವೀಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ

Spread the love

ದಾವಣಗೆರೆ: ಪ್ರಮೋಷನ್  ನೀಡುವುದಾಗಿ 50 ಸಾವಿರ ರೂ. ಲಂಚ ಪಡೆದು ಪ್ರಮೋಷನ್ ನೀಡದ ಹಿನ್ನೆಲೆ ಸೆಲ್ಫಿ ವೀಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ  ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾದನಬಾವಿ ಗ್ರಾಮದ ಬಳಿ ನಡೆದಿದೆ.

ಮೋಹನ್ ಕುಮಾರ್ ಮೃತ ಬ್ಯಾಂಕ್ ಸಿಬ್ಬಂದಿ. ಮೋಹನ್ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಪ್ರಮೋಷನ್ ನೀಡುವುದಾಗಿ ಹೇಳಿ ಅಧಿಕಾರಿಗಳು ಮೋಹನ್ ಬಳಿ ನಕಲಿ ಅಂಕಪಟ್ಟಿಗೆ 50 ಸಾವಿರ ಲಂಚ ಪಡೆದಿದ್ದರು. ಮೋಹನ್ ಸಾಲ ಮಾಡಿ ನಕಲಿ ಅಂಕಪಟ್ಟಿಗೆ ಹಣ ಕೊಟ್ಟಿದ್ದರು. ಕೊನೆಗೆ ಯಾವುದೇ ಪ್ರಮೋಷನ್ ನೀಡದೇ, ಇತ್ತ ಸಾಲ ಬಾಧೆ ಹೆಚ್ಚಾಗಿ ಮೋಹನ್ ನೊಂದಿದ್ದರು. ನನ್ನ ಸಾವಿಗೆ ಬ್ಯಾಂಕ್ ಸಿಬ್ಬಂದಿ ತಿಪ್ಪೇaಸ್ವಾಮಿ, ನಕಲಿ ಅಂಕಪಟ್ಟಿ ಮಾಡಿಕೊಟ್ಟ ಕೊಟ್ರೇಶ್ ಕಾರಣ ಎಂದು ಸೆಲ್ಫಿ ವೀಡಿಯೋದಲ್ಲಿ ಮೋಹನ್ ಹೇಳಿದ್ದಾರೆ. aನನಗೆ ನ್ಯಾಯ ಒದಗಿಸುವಂತೆ ಸೆಲ್ಫಿ ವೀಡಿಯೋ ಮುಖಾಂತರ ಮಾಜಿ ಸಚಿವ ಎಂಪಿ ರೇಣುಕಾಚಾರ್ಯಗೆ ಮನವಿ ಕೂಡ ಮಾಡಿದ್ದಾರೆ. ಬಳಿಕ ಬೈಕ್ ಸಹಿತ ತುಂಗಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸದ್ಯ ತುಂಗಾ ನಾಲೆಯಲ್ಲಿ ಮೋಹನ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಾಲೆಯಲ್ಲಿ ಬೈಕ್ ಪತ್ತೆಯಾಗಿದ್ದು, ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

ಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Spread the loveನವದೆಹಲಿ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಶುಕ್ರವಾರ ತಡರಾತ್ರಿ ಸಮಸ್ಯೆ ಕಾಣಿಸಿಕೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ