Breaking News

ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಹತ್ಯೆಗೈದ ಪ್ರಿಯಕರ

Spread the love

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಹೊರವಲಯದ ಜಮೀನಲ್ಲಿ ಯುವಕ ಫಾರೂಕ್ ಸನದಿ  ಎನ್ನುವಾತನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿಶ್ವಿತಾರ್ಥ ಮಾಡಿಕೊಂಡಿದ್ದ ಹುಡುಗಿ ಪ್ರಿಯಕರನೇ ಫಾರೂಕ್ ಸನದಿಯನ್ನು ಕೊಲೆ ಮಾಡಿರುವುದು ಎಂದು ಗೊತ್ತಾಗಿದೆ. ಪ್ರಿಯಕರ ದಾವಲಸಾಬ್ ಹಾಗೂ ಸ್ನೇಹಿತ ಮಕ್ಕಬೂಲ್ ಸಾಬ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿಕೊಂಡು ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಹತ್ಯೆ ನಡೆದ 24 ಗಂಟೆಯಲ್ಲಿ ನಾಲ್ಕು ಜನರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ಹಂತಕರನ್ನು ವಿಚಾರಣೆಗೊಳಪಡಿಸಿದಾಗ ತನ್ನ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಫಾರೂಕ್ ಸನದಿ ಕೊಲೆ ಮಾಡಿದ್ದಾಗಿ ದಾವಲಸಾಬ್ ಬಾಯ್ಬಿಟ್ಟಿದ್ದಾನೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ಶಿಗ್ಲಿ ಗ್ರಾಮದ ನಿವಾಸಿಯಾದ‌ 25 ವರ್ಷದ ಫಾರೂಕ್ ಸನದಿ ಎನ್ನುವಾತ ಮೂರು ತಿಂಗಳ ಹಿಂದೆ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಆದ್ರೆ ಯುವತಿ ಹಾಗೂ ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ನಿವಾಸಿಯಾದ ದಾವಲಸಾಬ್ ಮಕಂದಾರ್ ಲವ್ ಮಾಡುತ್ತಿದ್ದಳು. ಹೀಗಾಗಿ ದಾವಲಸಾಬ್, ನಿಶ್ವಿತಾರ್ಥ ಮಾಡಿಕೊಡಿದ್ದ ಫಾರೂಕ್ ಸನದಿಯನ್ನು ಮಾತನಾಡಲೆಂದು ಜಮೀನಿಗೆ ಕರೆಯಿಸಿಕೊಂಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಗಲಾಟ ವಿಕೋಪಕ್ಕೆ ತಿರುಗಿದ್ದು, ಇದೇ ಕೋಪದಲ್ಲಿ ಕೊಡಲಿಯಿಂದ ಫಾರೂಕ್ ಸವದಿಯನ್ನು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಜಮೀನುವೊಂದರಲ್ಲಿ ನಿನ್ನೆ (ಫೆಬ್ರವರಿ 28) ಫಾರೂಕ್ ಸನದಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಕತ್ತು ಕೊಯ್ದು ಬಳಿಕ ಹತ್ಯೆ ಮಾಡಿದ್ದರು. ಕೊಲೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ಹಂತಕರ ಸುಳಿವಿಗಾಗಿ ತೀವ್ರ ಶೋಧ ನಡೆಸಿದ್ದರು. ಸ್ಥಳಕ್ಕೆ ಗದಗ ಎಸ್ಪಿ ರೋಹನ‌್ ಜಗದೀಶ್, ಡಿವೈಎಸ್ಪಿ ಮುರ್ತುಜ ಖಾದ್ರಿ ಸೇರಿ ಅಧಿಕಾರಿಗಳು ದೌಡಾಯಿಸಿ ಹಂತಕರ ಪತ್ತೆಗೆ ತಂಡಗಳು ರಚನೆ ಮಾಡಿದ್ದರು. ಬಳಿಕ ಪೊಲೀಸರು ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಸಿ ಅಂತಿಮವಾಗಿ ಘಟನೆ ನಡೆದ 24 ಗಂಟೆಗಳಲ್ಲಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದುವೆಯಾಗಿ ಸುಂದರ ಜೀವನ ಮಾಡಬೇಕು ಎಂದು ಕನಸು ಕಂಡಿದ್ದ ಫಾರೂಕ್ ಸಾವಿನ ಮನೆ ಸೇರಿದ್ದಾನೆ. ಏನು ತಪ್ಪು ಮಾಡದ ಯುವಕ ಹತ್ಯೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


Spread the love

About Laxminews 24x7

Check Also

ಮದುವೆಗೆ ನಿರಾಕರಿಸಿದ್ದಕ್ಕೆ ವ್ಯಕ್ತಿಯಿಂದ HIV ಪಾಸಿಟಿವ್‌ ರಕ್ತ ಇಂಜೆಕ್ಟ್‌ – ಆಘಾತಗೊಂಡು ಯುವತಿ ಆತ್ಮಹತ್ಯೆ

Spread the loveಹೈದರಾಬಾದ್:‌ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಹೆಚ್‌ಐವಿ ಪಾಸಿಟಿವ್‌ ರಕ್ತ  ಇಂಜೆಕ್ಟ್‌ ಮಾಡಿದ್ದ. ಘಟನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ