Breaking News

ಬಾಗಲಕೋಟೆ: ಹೋಳಿಯಾಟಕ್ಕೆ ಬರಲಿದ್ದಾರೆ ರಷ್ಯನ್ ಬೆಡಗಿ ಮೀನಾ! ಭಾರತದ ಆರಿಯಾ, ಅಕ್ಷಯ್

Spread the love

ಬಾಗಲಕೋಟೆ: ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಮಹಿಳೆಯರಿಗಾಗಿ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ರಂಗ ಸಂಭ್ರಮ ಕಾರ್ಯಕ್ರಮ ನಡೆಸಲಾಗುವುದೆಂದು ಕವಿತಾ ಕೊಣ್ಣೂರ ತಿಳಿಸಿದರು.

ಬನಹಟ್ಟಿಯಲ್ಲಿ ರಂಗ ಸಂಭ್ರಮದ ಕುರಿತಾಗಿ ಮಾತನಾಡಿದ ಅವರು, ಅಂತಾರಾಷ್ಟ್ರಮಟ್ಟದ ಹೆಸರಾಂತ ಡಿಜೆ ಆಪರೇಟರ್ ರಷ್ಯಾದ ಮೀನಾ ಹಾಗೂ ಭಾರತದ ಆರಿಯಾ ಮತ್ತು ಅಕ್ಷಯ ಪ್ರಮುಖರಾಗಿ ಆಗಮಿಸಲಿದ್ದಾರೆ. ರಾಜ್ಯದ ಹೆಸರಾಂತ ಕಲಾ ತಂಡಗಳಾದ ಸಾಧನಾ ಹಾಗೂ ಸಮನ್ವಿ ನೇತೃತ್ವದ ತಂಡಗಳು ಕಾರ್ಯಕ್ರಮ ನೀಡಲಿದ್ದಾರೆ. ರಷ್ಯಾ ದೇಶದ ನರ್ತಕಿಯರ ಜೊತೆಗೆ ರಾಜ್ಯದ ಪ್ರಸಿದ್ಧ ಬೆಳ್ಳಿ ಡ್ಯಾನ್ಸ್ ಕಲಾವಿದರ ತಂಡ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದೆ ಎಂದು ತಿಳಿಸಿದರು.

ರಬಕವಿ-ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ತಾಲೂಕು ಸೇರಿದಂತೆ ವಿವಿಧೆಡೆಯಿಂದ ಆಗಮಿಸುವ ಸಾವಿರಾರು ಮಹಿಳೆಯರಿಗೆ ಬಣ್ಣದೋಕಳಿ ನಿಮಿತ್ತ ನಡೆಯುತ್ತಿರುವ ರಂಗ ಸಂಭ್ರಮಕ್ಕೆ ವಿಶೇಷ ಬಂದೋಬಸ್ತ್‌ನೊಂದಿಗೆ ಹೋಳಿ ಆಚರಣೆ ಕಾರ್ಯಕ್ರಮ ಯಾವುದೇ ಪಕ್ಷಬೇಧವಿಲ್ಲದೇ ಪುರುಷ ಹಾಗೂ ಮಹಿಳಾ ಪ್ರತ್ಯೇಕ ವಿಭಾಗದ ವೇದಿಕೆಯಲ್ಲಿ ಜರುಗಲಿದೆ ಎಂದರು.


Spread the love

About Laxminews 24x7

Check Also

ಬಸವೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ : ಶೇ.88.10%

Spread the loveಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ