Breaking News

IPSಗೆ ಸೇರಿದ ವಿಲ್ಲಾದಲ್ಲಿ ಅತ್ಯಾಚಾರ: ಬೆಂಗಳೂರು ಕಾರ್ಪೊರೇಟರ್ ಮಗ ಅರೆಸ್ಟ್, ಒಬ್ಬೊಬ್ಬರದ್ದು ಒಂದೊಂದು ಪಾತ್ರ

Spread the love

ಬೆಂಗಳೂರು: ಅಮೃತಹಳ್ಳಿಯ ವಿಲ್ಲಾದಲ್ಲಿ ನಡೆದಿರುವ ಅತ್ಯಾಚಾರ ಕೇಸ್  ಸಂಬಂಧ ಮತ್ತೆ ಮೂವರ ಬಂಧನವಾಗಿದೆ. ಮಾಸ್ಟರ್ ಮೈಂಡ್ ನಿಖಿಲ್ ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ರಾಜಕಾರಣಿ ಮಗ ಸೇರಿದಂತೆ ಮೂವರನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇನ್ನು ಕೃತ್ಯದ ವೇಳೆ ನಿಖಿಲ್ ಬಳಸಿದ್ದ ಕಾರ್​​ನ್ನ ಖಾಕಿ ಸೀಜ್ ಮಾಡಿದೆ.

ಡ್ರಗ್ಸ್ ದಂಧೆ ಜತೆ ಸೆಕ್ಸ್ ದಂಧೆಗೂ ಬಯಲಾಗಿದ್ದ ಕೇಸ್​ನಲ್ಲಿ ಮತ್ತೆ ಮೂವರು ಲಾಕ್ ಆಗಿದ್ದಾರೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ನಿಖಿಲ್, ಡಿಕ್ಸನ್ ಹೆಡೆಮುರಿ ಕಟ್ಟಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಅನಿರುದ್ಧ, ಶ್ರವಣ್, ಮೋಹಿತ್ ಎಂಬ ಮೂವರನ್ನ ಕಸ್ಟಡಿಗೆ ಪಡೆದಿದ್ದಾರೆ. ಈ ಮೂವರು ಕೂಡ ನಿಖಿಲ್ ಕೃತ್ಯಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಾಥ್ ನೀಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ.

ಡ್ರಗ್ಸ್ ನೀಡಿ ರೇಪ್ ಮಾಡಿದ್ದಾನೆ ಎನ್ನುವ ದೊಡ್ಡ ಆರೋಪ ಹೊತ್ತಿರುವ ನಿಖಿಲ್​​ನ ಕೆಲಸಕ್ಕೆಲ್ಲಾ ಈ ನಾಲ್ವರು ಕೂಡ ಬಲಗೈ ಎಡಗೈನಂತಿದ್ದರು. ಯಾವಾಗ ನಿಖಿಲ್ ಮತ್ತು ಡಿಕ್ಸನ್ ಬಂಧನವಾಯ್ತೋ ಈ ಮೂವರದ್ದು ಕೂಡ ಇದರಲ್ಲಿ ಪಾತ್ರವಿದೆ ಅನ್ನೋದು ಗೊತ್ತಾಯ್ತು. ಹೀಗಾಗಿ ಪೊಲೀಸರು ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಈಗ ಬಂಧಿಸಿದ್ದಾರೆ.

ನಿಖಿಲ್- ಪಾರ್ಟಿಯ ಮಾಸ್ಟರ್ ಮೈಂಡ್. ಡಿಕ್ಸನ್ ಸಾಂಡ್ರಾ: ಹುಡುಗಿರನ್ನ ಕರೆತರುವುದು, ಅನಿರುದ್ಧ: ಪಾರ್ಟಿಗೆ ವಿಲ್ಲಾ ಬುಕ್ ಮಾಡಿ, ಹಣದ ವ್ಯವಸ್ಥೆ ಮಾಡಿದ್ದ, ಶ್ರವಣ್‌: ಹುಡುಗಿಯರ ಪಿಕ್ ಮಾಡಿ ಕರೆತರುವುದು, ಮೋಹಿತ್: ಮೂಲತಃ ಗುಜರಾತ್ ಮೂಲದವನಾಗಿದ್ದು ಇವನು ಪಾರ್ಟಿಯಲ್ಲಿದ್ದ.

ಹೀಗೆ ನಿಖಿಲ್ ನಡೆಸುತ್ತಿದ್ದ ಪಾರ್ಟಿಯಲ್ಲಿ ಈ ನಾಲ್ವರು ಒಂದಲ್ಲಾ ಒಂದು ರೀತಿ ಪಾತ್ರದಾರಿಗಳಾಗಿದ್ದರು. ಇನ್ನು ಅನಿರುದ್ಧ ದಾವಣಗೆರೆ ಮೂಲದ ಮಾಜಿ ಕಾರ್ಪೊರೇಟರ್ ಮಗನಾಗಿದ್ದು, ಕಂಟ್ರಾಕ್ಟರ್ ಕೂಡ ಆಗಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಈ ಆರೋಪಿಗಳ ನೀಚತನದ ಬಗ್ಗೆ ತನಿಖೆ ಚುರುಕಾಗಿದೆ.

ಮತ್ತೊಂದು ಕಡೆ ಪ್ರೇಮಿಗಳ ದಿನಾಚರಣೆ ದಿನ ನಡೆದ ಪಾರ್ಟಿ ನಂತರ ನಿಖಿಲ್ ಸಂತ್ರಸ್ಥೆಯನ್ನ ಡ್ರಾಪ್ ಮಾಡಿದ್ದ. ಈ ವೇಳೆ ನಿಖಿಲ್ ಇದೇ KA 05-NC 7299 ನೋಂದಣಿ ಫಾರ್ಚುನರ್ ಕಾರಿನಲ್ಲಿ ಯುವತಿಯನ್ನ ಹತ್ತಿಸಿಕೊಂಡು ಅಲ್ಲು ಕಿರುಕುಳ ನೀಡಿ ಬೆದರಿಕೆ ಹಾಕಿದ್ದ.

ಪಾರ್ಟಿ ಬಳಿಕ ಯುವತಿಯನ್ನ ತನ್ನ ಕಾರಿನಲ್ಲಿ ಕೂರಿಸಿಕೊಂಡಿದ್ದ ನಿಖಿಲ್, ನಡೆದ ವಿಚಾರವನ್ನ ಯಾರಿಗೂ ಹೇಳದಂತೆ ಅಸಭ್ಯವಾಗಿ ವರ್ತಿಸುತ್ತಲೇ ಯುವತಿಗೆ ಬೆದರಿಕೆ ಹಾಕಿದ್ದ ಅಂತನೂ ಯುವತಿ ಆರೋಪಿಸಿದ್ದಾಳೆ. ಸದ್ಯ ಈ ತನಿಖೆಯ ಭಾಗವಾಗಿ ಪೊಲೀಸರು ಈ ಕಾರನ್ನ ವಶಕ್ಕೆ ಪಡೆದಿದ್ದು, ಪ್ರಕರಣದಲ್ಲಿ ಮತ್ತೆ ಯಾರ ಕೈಗೆ ಕೋಳ ಬೀಳುತ್ತೋ ಕಾದು ನೋಡಬೇಕು.


Spread the love

About Laxminews 24x7

Check Also

ಬೆಳಗಾವಿ:ಬಾಯ್ ಪ್ರೇಂಡ್ ಜೊತೆಗೆ ಸೇರಿ ಪತಿಯ ಭೀಕರ ಹತ್ಯೆ ಮಾಡಿಸಿದ ಪತ್ನಿ

Spread the loveಬೆಳಗಾವಿಯ ಟಿಳಕವಾಡಿ ಪೊಲೀಸರಿಂದ ರೋಚಕ ಪ್ರಕರಣ ಬಯಲು ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ ಸೂಪ್ಪಣ್ಣವರ (40) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ