Breaking News

Laxminews 24x7

ಹುಕ್ಕೇರಿ ಶಾಸಕರೇ, ಗೃಹಲಕ್ಷ್ಮಿ ಹಣ ಕೂಡಿಟ್ಟು ಕೊಟ್ಟರೆ ಮಾತ್ರ ನಮ್ಮ ಕ್ಷೇತ್ರಕ್ಕೆ ನೀರಾವರಿ ಯೋಜನೆ ಮಾಡ್ತೀರಾ?

ನಿಖಿಲ್ ಕತ್ತಿಯವರರೇ.. ಹಾಗಿದ್ದರೆ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ಹುಕ್ಕೇರಿ ಕ್ಷೇತ್ರಕ್ಕೆ ನೀರಾವರಿ ಯೋಜನೆ ಮಾಡೋ ವಿಷಯ ಬಂದಾಗ ಜನರ ಹತ್ತಿರ ಗೃಹಲಕ್ಷೀ ಹಣ ಕೇಳ್ತಿದ್ದಿರಿ. ನೆಪ ಹೇಳುತ್ತಿದ್ದೀರಿ. ಹಾಗಿದ್ದರೆ ಗೃಹಲಕ್ಷ್ಮಿ ಯೋಜನೆ ಇಲ್ಲದೇ ಇದ್ದಾಗ ಉಳಿದ 45 ವರ್ಷದ ಹಿಂದೆ ಈ ಕ್ಷೇತ್ರಕ್ಕೆ ನೀರಾವರಿ ಯೋಜನೆ ಮಾಡೋದಕ್ಕೆ ನಿಮ್ಮ ಕುಟುಂಬಕ್ಕೆ ಏನು ಸಮಸ್ಯೆ ಇತ್ತು ಹೇಳುತ್ತೀರಾ.. ಹುಕ್ಕೇರಿ ತಾಲೂಕಿನಲ್ಲಿ ಹಿಡಕಲ್ ಜಲಾಶಯ, ಮಾರ್ಕಂಡೇಯ ಜಲಾಶಯ ಸೇರಿದಂತೆ ಒಟ್ಟು 2 …

Read More »

51 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 51,000 ಕ್ಕೂ ಹೆಚ್ಚು ಯುವಕರಿಗೆ ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೇಮಕಾತಿ ಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಿದರು. ಈ ಸಂದರ್ಭದಲ್ಲಿ, ತಮ್ಮ ಇತ್ತೀಚಿನ ಐದು ದೇಶಗಳ ಪ್ರವಾಸದ ಮಹತ್ವವನ್ನು ವಿವರಿಸಿದ ಅವರು, ನೆದರ್‌ಲ್ಯಾಂಡ್ಸ್‌ನ ASML, ಟಾಟಾ ನಡುವೆ ಸೆಮಿಕಂಡಕ್ಟರ್ ಒಪ್ಪಂದ, ಸ್ವೀಡನ್-ಇಟಲಿಯೊಂದಿಗೆ ಹಸಿರು ಇಂಧನ, AI, ರಕ್ಷಣಾ ಪಾಲುದಾರಿಕೆ, ಯುಎಇ-ನಾರ್ವೆಯೊಂದಿಗೆ ಹಡಗು ನಿರ್ಮಾಣ, ಸೂಪರ್‌ಕಂಪ್ಯೂಟಿಂಗ್ …

Read More »

ಅಕಾಲಿಕ ಮರಣ ಹೊಂದಿದ ರೈತ ಬೀರಪ್ಪ ನಾಗರಾಳ ಕುಟುಂಬ ಸದಸ್ಯರಿಗೆ ಆರ್ಥಿಕ ಸಹಾಯ ವಿತರಣೆ

ಚಿಕ್ಕೋಡಿ:ಜೋಡಟ್ಟಿಯ ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಸದಸ್ಯರಾದ ರೈತ ಬೀರಪ್ಪ ನಾಗರಾಳಿ ಅವರು ಅಕಾಲಿಕ ಮರಣ ಹೊಂದಿರುವುದರಿಂದ ಅವರ ಕುಟುಂಬಕ್ಕೆ ಸಹಕಾರ ಸಂಸ್ಥೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಮಹಾದೇವ ಮಂಟೂರೆ ಹಾಗೂ ಶಂಕರ ನೆರ್ಲಿ 50 ಸಾವಿರ ರೂಪಾಯಿ ಚೆಕ್ ವಿತರಿಸಿದರು. ಬಳಿಕ ಮಾಧ್ಯಮಗಳ ಜೊತೆಗೆ ‌ಮಾತನಾಡಿ ಸಂಸ್ಥೆಯ ಸಂಸ್ಥಾಪಕ ಬಸವರಾಜ ಮಹಾದೇವ ಮಂಟೂರೆ ಹಾಗೂ ನಾಗರಮುನ್ನೂಳಿ ಸಂಸ್ಥೆಯ‌ ಅಧ್ಯಕ್ಷರಾದ ಶಂಕರ ನೇರ್ಲಿ ಮಾತನಾಡಿ ನಾಗರಮುನ್ನೂಳಿ ಶಾಖೆಯಲ್ಲಿ …

Read More »

ಸಚಿವ ಸತೀಶ್ ಜಾರಕಿಹೊಳಿ ಮನಸ್ಸು ಮಾಡಿದರಷ್ಟೇ ಹುಕ್ಕೇರಿ ತಾಲೂಕು ನೀರಾವರಿ ಸಾಧ್ಯ: ಚೂನ್ನಪ್ಪಾ ಪೂಜಾರಿ

ಹುಕ್ಕೇರಿ: ದಶಕಗಳಿಂದ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಹುಕ್ಕೇರಿ ತಾಲೂಕಿನ ಅಭಿವೃದ್ಧಿ ಕೇವಲ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪಾ ಪೂಜಾರಿ ಪ್ರತಿಪಾದಿಸಿದ್ದಾರೆ. ಕಳೆದ 60 ವರ್ಷಗಳಿಂದ ತಾಲೂಕಿನಲ್ಲಿ ಯಾವುದೇ ಪ್ರಮುಖ ನೀರಾವರಿ ಯೋಜನೆಗಳು ಜಾರಿಯಾಗಿಲ್ಲ. ಕತ್ತಿ ಕುಟುಂಬಸ್ಥರು ಸತತ 45 ವರ್ಷಗಳ ಕಾಲ ಈ ಭಾಗದ ಶಾಸಕರಾಗಿದ್ದರೂ ರೈತರ ಹಿತರಕ್ಷಣೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಹೀಗಾಗಿ, ಪ್ರಭಾವಿ ನಾಯಕರಾದ …

Read More »

ಹಿಂದೂಗಳ ಮೇಲಿನ ದಾಳಿ ಕೇಸ್ ವಾಪಸ್ – ಸರ್ಕಾರ ಯಾವ ಸಂದೇಶ ಕೊಡ್ತಿದೆ: ಸಿ.ಟಿ ರವಿ ಪ್ರಶ್ನೆ

ಚಿಕ್ಕಮಗಳೂರು: ಹಿಂದೂಗಳ ಮೇಲಿನ ದಾಳಿ ಕೇಸ್ ವಾಪಸ್ ಪಡೆದು ರಾಜ್ಯ ಸರ್ಕಾರ ಯಾವ ಸಂದೇಶ ಕೊಡುತ್ತಿದೆ ಎಂದು ಎಂಎಲ್‌ಸಿ ಸಿ.ಟಿ ರವಿ  ಪ್ರಶ್ನಿಸಿದರು. ಚಿಕ್ಕಮಗಳೂರಿನಲ್ಲಿ  ಅವರು ಮಾಧ್ಯಮಗಳ ಜೊತೆ ಮಾತಾಡಿದರು. ಈ ವೇಳೆ. ಲಾಡ್ಲೆ ಮಶಾಕ್ ದರ್ಗಾ  ಕೇಸ್ ವಾಪಸ್ ವಿಚಾರವವಾಗಿ ಮಾತಾಡಿ, ರಾಘವ ಚೈತನ್ಯ ಬೃಂದಾವನದ ಪೂಜೆಗೆ ಹೋದಾಗ ದಾಳಿ ಮಾಡಿದ್ದರು. ಬಂದೋಬಸ್ತ್‌ಗೆ ಇದ್ದ ಪೊಲೀಸರು, ಎಸ್ಪಿ, ಸಂಸದ ಖೂಬಾ ಅವರ ಕಾರಿನ ಮೇಲೆ ದಾಳಿ ಮಾಡಿದವರ ಕೇಸ್ …

Read More »

ಕುಡಿದ ಮತ್ತಲ್ಲಿ ಟ್ರಾಫಿಕ್‌ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಯುವಕರು – ವಿಡಿಯೋ ವೈರಲ್‌

ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಇಬ್ಬರು ಯುವಕರು ಟ್ರಾಫಿಕ್ ಪೊಲೀಸರ  ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ  ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ವಾಹನ ತಪಾಸಣೆ ವೇಳೆ ಇಬ್ಬರು ಯುವಕರನ್ನು ಟ್ರಾಫಿಕ್ ಪೊಲೀಸರು ತಡೆದಿದ್ದರು. ಈ ವೇಳೆ ಮದ್ಯಪಾನ ಮಾಡಿರುವ ಬಗ್ಗೆ ಪ್ರಶ್ನಿಸಿದ್ದರು. ಇದರಿಂದ ಸಿಟ್ಟಿಗೆದ್ದ ಯುವಕರು ಪೊಲೀಸರ ಮೇಲೆ ದರ್ಪ ತೋರಿದ್ದಾರೆ. ಮೈಕೈ ಮುಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ. ಯುವಕರ ವರ್ತನೆ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ಸೆರೆಯಾಗಿದೆ. …

Read More »

ಎಲ್ಲಾ ಹೊರೆ ಜನರ ಮೇಲೆ ಹಾಕ್ತಿದ್ರೆ, ಮೋದಿ ಯಾವಾಗ ಜವಾಬ್ದಾರಿ ತಗೋತಾರೆ: ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ಬೆಂಗಳೂರು: ಎಲ್ಲಾ ಹೊರೆಯನ್ನು ಜನರ ಮೇಲೆ ಹಾಕುತ್ತಿದ್ದರೆ ಮೋದಿ  ಯಾವಾಗ ಜವಾಬ್ದಾರಿ ತೆಗೆದುಕೊಳ್ತಾರೆ ಅಂತ ಕೇಂದ್ರ ಸಚಿವ ಪ್ರಿಯಾಂಕ್‌ ಖರ್ಗೆ  ಪ್ರಶ್ನೆ ಮಾಡಿದರು. ಬೆಂಗಳೂರಿನಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 10 ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ 5 ರೂ. ಹೆಚ್ಚಿಸಿರುವ ಕೇಂದ್ರದ ನಡೆಯನ್ನು ತೀವ್ರವಾಗಿ ಖಂಡಿಸಿದರು. ಬೆಲೆ ಏರಿಕೆಗೆ ಉತ್ತರ ನೀಡಬೇಕಾದವರು ಕೇಂದ್ರ ಸರ್ಕಾರ. ಉಳಿದ ಎಲ್ಲ ಕಡೆ ಬಿಜೆಪಿ ನಾಯಕರು ಮಾತನಾಡ್ತಾರೆ ಇದಕ್ಕೆ ಯಾಕೆ ಯಾರು ಮಾತನಾಡುತ್ತಿಲ್ಲ? …

Read More »

ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ

ಬೆಂಗಳೂರು: ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಶೋಕ್ ನಗರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ವಿಲ್ಸನ್ ಗಾರ್ಡನ್ ನಿವಾಸಿ ಗೌತಮ್ (28) ಎಂದು ಗುರುತಿಸಲಾಗಿದೆ. ಶುಕ್ರವಾರ ಮುಂಜಾನೆ ಅಶೋಕ್ ನಗರದ ಖಾಲಿ ಜಾಗದಲ್ಲಿ ಈ ಘಟನೆ ನಡೆದಿತ್ತು. ಈತ ಪುನರ್ವಸತಿ ಕೇಂದ್ರದಿಂದ ಬಂದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.    ಮೇಲ್ನೋಟಕ್ಕೆ ಕೊಲೆ ಆಗಿರಬಹುದೆಂಬ ಅನುಮಾನ ಇತ್ತು. ಆದರೆ ತನಿಖೆ ವೇಳೆ ಯುವಕ ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. …

Read More »

ಆರ್‌ಡಿಪಿಆರ್ ಕಚೇರಿಯಲ್ಲಿ ಗುಂಡು, ತುಂಡು ಪಾರ್ಟಿ: ಎಇಇ ಸೇರಿ ಮೂವರು ಅಮಾನತು

ರಾಯಚೂರು: ಜಿಲ್ಲೆಯ ಲಿಂಗಸುಗೂರಿನ  ಆರ್‌ಡಿಪಿಆರ್  ಕಚೇರಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು, ಎಇಇ  ಸೇರಿ ಮೂವರನ್ನ ಅಮಾನತು ಮಾಡಲಾಗಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ ಕಚೇರಿಯಲ್ಲಿ ಆರ್‌ಡಿಪಿಆರ್ ಎಇಇ ಹನುಮಪ್ಪ ಆದವಾನಿ, ಎಫ್‌ಡಿಎ ರಾಮಣ್ಣ ಪೂಜಾರಿ ಹಾಗೂ ಕಾವಲುಗಾರ ಹನುಮಂತ ಮೂವರು ಗುಂಡು, ತುಂಡು ಪಾರ್ಟಿ ನಡೆಸಿದ್ದರು. ಇದೀಗ ಮೂವರು ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಕರ್ತವ್ಯಲೋಪ …

Read More »

ಯಾವ ಪುರುಷಾರ್ಥಕ್ಕೆ ಮತ್ತೊಂದು ಸ್ಟೇಡಿಯಂ? ಯಾವ ಆಟಗಾರ ಕೇಳಿದ್ರು? – ಆರ್.ಅಶೋಕ್ ಕಿಡಿ

ಬೆಂಗಳೂರು: ಯಾವ ಆಟಗಾರ ಸ್ಟೇಡಿಯಂ ಕೇಳಿದ್ದರು ಅಂತ ಬೆಂಗಳೂರಲ್ಲಿ ಸ್ಟೇಡಿಯಂ ಮಾಡುತ್ತಿದ್ದೀರಿ? ಯಾವ ಪುರುಷಾರ್ಥಕ್ಕೆ ಆನೇಕಲ್‌ನಲ್ಲಿ ಮತ್ತೊಂದು ಸ್ಟೇಡಿಯಂ ಮಾಡುತ್ತಿದ್ದೀರಿ? ಕಮಿಷನ್‌ಗಾಗಿ ದುಡ್ಡು ಹೊಡೆಯಲು ಮಾಡುತ್ತಿರುವ ಸ್ಟೇಡಿಯಂ ಇದು ಎಂದು ವಿಪಕ್ಷ ನಾಯಕ ಆರ್.ಅಶೋಕ್  ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಆನೇಕಲ್ ಬಳಿ ಸ್ಟೇಡಿಯಂ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರ ಕೋಟಿ-ಕೋಟಿ ಹಣ ಬರುವ ಯೋಜನೆಗಳನ್ನು ಮಾಡಲು ಮುಂದಾಗುತ್ತಿದೆ. ನಾನು …

Read More »