ಬೆಂಗಳೂರು: ಝೆನ್-ಜಿ ಮತದಾರರ ಹಕ್ಕು ಕಸಿಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಆರೋಪಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಅರ್ಹ ಮತದಾರರನ್ನ ಕೈಬಿಡಲಾಗುತ್ತಿದೆ ಎಂದು ಆರೋಪಿಸಿದರು. 2015 ರಿಂದ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಚುನಾವಣಾ ಆಯೋಗ ಅಕ್ರಮ ಮಾಡುತ್ತಿದೆ. ಕರ್ನಾಟಕದಲ್ಲಿ ಸುಮಾರು 1.50 ಕೋಟಿ ಮತದಾರರನ್ನ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅಲ್ಲದೆ, …
Read More »ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳಿಗೆ ಗೇಟ್ ಬಂದ್ – ಜಿ.ಪಂ ಸಿಇಒ ಕ್ಲಾಸ್
ಬೀದರ್: ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೇಟ್ ಬಂದ್ ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಕ್ಲಾಸ್ ತೆಗೆದುಕೊಂಡ ಘಟನೆ ಬೀದರ್‌ನಲ್ಲಿ ನಡೆದಿದೆ. ಜಿಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ಕಚೇರಿಗೆ ದಿಢೀರ್ ಭೇಟಿ ನೀಡಿ, ರಿಯಾಲಿಟಿ ಚೆಕ್ ನಡೆಸಿದ್ದಾರೆ. ಈ ವೇಳೆ ಕಚೇರಿಗೆ ತಡವಾಗಿ ಬಂದ ಅಧಿಕಾರಿಗಳಿಗೆ ಗೇಟ್ ಬಂದ್ ಮಾಡಿ, ಬಿಸಿ ಮುಟ್ಟಿಸಿದ್ದಾರೆ. ಕಚೇರಿ ಒಳಗಡೆ ಹೋಗಿ ರಿಯಾಲಿಟಿ ಚೆಕ್ ಮಾಡಿದಾಗ ಖಾಲಿ ಖಾಲಿ …
Read More »ಬಿಡದಿ ಟೌನ್‌ಶಿಪ್ ಜಟಾಪಟಿ | ಹಳೇ ಹೆದ್ದಾರಿ ತಡೆದು ರೈತರ ಪ್ರತಿಭಟನೆ – ಪೊಲೀಸರೊಂದಿಗೆ ವಾಗ್ವಾದ; ಕಟ್ಟೆಯೊಡೆದ ಆಕ್ರೋಶ
ರಾಮನಗರ: ಬಿಡದಿ ಟೌನ್ ಶಿಪ್ ಜಟಾಪಟಿ ಮುಂದುವರೆದಿದ್ದು, ನಿನ್ನೆ ಸಂಜೆ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡ್ತಿದ್ದ ರೈತರ ಬಂಧನ ಹಿನ್ನಲೆ, ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ರೈತರನ್ನ ಇರಿಸಲಾಗಿತ್ತು. ಇದೀಗ ಬಂಧನದ ಬಳಿಕವೂ ರೈತರ ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು, ಸ್ಥಳಕ್ಕೆ ಡಿಸಿ ಬರಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇತ್ತ ಚನ್ನಪಟ್ಟಣದ ಗಾಂಧಿವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ರೈತ ಸಂಘಟನೆಗಳ ಸಿದ್ಧತೆ ನಡೆಸಿದ್ದು, ಈ ಮಧ್ಯೆ ಭೈರಮಂಗಲ ಗ್ರಾಮದಲ್ಲೂ …
Read More »ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಅನುಮತಿಯಿಲ್ಲದಿದ್ದರೂ ಡಿಜೆ ಬಳಕೆ ಆರೋಪ – 15 ಮಂದಿ ವಿರುದ್ಧ FIR
ಹಾಸನ: ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ವೇಳೆ ಹಾಸನದಲ್ಲಿ ಅನುಮತಿ ನೀಡದಿದ್ದರು ಡಿಜೆ ಬಳಸಿದ ಕಾರಣ ಹದಿನೈದು ಜನರ ಮೇಲೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿರುವ ಪೊಲೀಸರ ವಿರುದ್ಧ ವಿಹೆಚ್‌ಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಮಹಿಪಾಲ್, ಸುಪ್ರೀಂ ಕೋರ್ಟ್ ಗೈಡ್‌ಲೈನ್ಸ್ ನಾವು ಕೂಡ ನೋಡಿದ್ದೇವೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ಕಾರ್ಯಕ್ರಮಗಳು ನಡೆದಾಗ ಅಲ್ಲಿಗೆ ಪರಿಸರ ಇಲಾಖೆ ಅಧಿಕಾರಿಗಳನ್ನು …
Read More »ಒಂದೇ ತಿಂಗಳಲ್ಲಿ ಬರಿದಾದ ಹೇಮಾವತಿ ಒಡಲು – ಮುಂಗಾರು ಪೂರ್ವಕ್ಕೂ ಮುನ್ನವೇ ನೀರು ಖಾಲಿ!
ಹಾಸನ: ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯ ಜೀವನದಿ ಹೇಮಾವತಿಯ ಒಡಲು ಬರಿದಾಗಿದೆ. ಮುಂಗಾರು ಪೂರ್ವದಲ್ಲೇ ಕನಿಷ್ಠ ಮಟ್ಟಕ್ಕೆ ಜಲಾಶಯದ ನೀರು ಕುಸಿದಿದೆ. ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ಒಂದು ತಿಂಗಳಲ್ಲೇ 18 ಟಿಎಂಸಿ ನೀರು ಖಾಲಿಯಾಗಿದ್ದು, ಹೇಮಾವತಿ ಜಲಾಶಯದ ನೀರು ಬಹುತೇಕ ಕೆಆರ್‌ಎಸ್ ಮೂಲಕ ತಮಿಳುನಾಡಿಗೆ ಹರಿದಿದೆ. ಇದರ ಜೊತೆಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸಲು ಕಾಲುವೆಗಳಿಗೂ ಸಹ ನೀರು ಹರಿಸಲಾಗಿದೆ. ನದಿಗೂ ಹೆಚ್ಚಿನ ಪ್ರಮಾಣದ …
Read More »ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಕೇಸ್ – ಕಲ್ಲಡ್ಕ ಪ್ರಭಾಕರ್ ಭಟ್ಗೆ ನೋಟಿಸ್
ಮಂಗಳೂರು: ಬಂಟ್ವಾಳ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. ಕಳೆದ ವರ್ಷ ಮೇ 25 ರಂದು ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ನಡೆದಿತ್ತು. ಈ ಹತ್ಯೆ ವೇಳೆ ಆರೋಪಿಗಳ ಜೊತೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಿರಂತರ ಫೋನ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. …
Read More »ಕಂದು ಬಣ್ಣಕ್ಕೆ ತಿರುಗಿದ ಮಳೆ ನೀರು – ಸ್ಥಳೀಯರ ಆತಂಕ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಆರಂಭಗೊಂಡ ಮಳೆ ಇಂದು (ಸೆ.25) ಸಹ ಮುಂದುವರೆದಿದೆ. ಇದರ ನಡುವೆಯೇ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆ ನೀರು ಕಂದು ಬಣ್ಣಕ್ಕೆ ತಿರುಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮಡಿಕೇರಿ ತಾಲೂಕಿನ ಎಮ್ಮೆಮಾಡು, ಮರುಗೋಡು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂದು ಬಣ್ಣದ ಮಳೆನೀರು ಕಂಡುಬಂದಿದೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಸ್ಥಳೀಯರಲ್ಲಿ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಪಾರದರ್ಶಕವಾಗಿ ಕಾಣುವ ಮಳೆನೀರು ಕೆಲವೆಡೆ ಕಂದು ಬಣ್ಣಕ್ಕೆ ತಿರುಗಿರುವುದು …
Read More »ವಜ್ರಕ್ಕಿಂತ ಕಠಿಣ ವಕ್ತಿತ್ವ ಇದ್ದರೂ, ಡಿಕೆಶಿ ಹೃದಯ ಮೃದು ಸ್ವಭಾವದ್ದು: ನೂಣವಿನಕೆರೆ ಶ್ರೀ
ತುಮಕೂರು: ಸಿಎಂ ಡಿ.ಕೆ ಶಿವಕುಮಾರ್ ಅವರ ವಕ್ತಿತ್ವ ವಜ್ರಕ್ಕಿಂತ ಕಠಿಣವಾಗಿದ್ದರೂ, ಹೃದಯದಿಂದ ಮೃದು ಸ್ವಭಾವದವರು ಎಂದು ನೂಣನವಿನಕೆರೆಯ ಶಿವಯೋಗಿಶ್ವರ್ ಶ್ರೀಗಳು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರು ಮಠದ ಆರ್ಶಿವಾದದಿಂದ ಬೆಳೆದಿದ್ದಾರೆ. ತಮಗೆ ಕಷ್ಟಗಳು ಬಂದ ಸಮಯದಲ್ಲೂ ಮಠದ ಆರ್ಶಿವಾದ ಪಡೆದಿದ್ದಾರೆ. ಅವರು ಮಠದ ಮಗನಾಗಿ ಬಂದಿದ್ದಾರೆ ಎಂದರು. ಪ್ರಜೆಗಳನ್ನು, ಸೈನಿಕರನ್ನು ಒಳ್ಳೆಯ ಉದ್ದೇಶಕ್ಕೆ ಕಂಡ್ಯೂಯುತ್ತಿದ್ದಾರೆ. ತಮ್ಮ ಹಿಂದಿನ ವ್ಯಕ್ತಿತ್ವದ ಬದಲಿಸಿಕೊಂಡು ಸರ್ವ ಜನರ ಆತ್ಮೀಯ …
Read More »ಆಸ್ತಿ ವಿವಾದಕ್ಕೆ ತಾಯಿ, ಮಗನ ಬರ್ಬರ ಹತ್ಯೆ – ಕೊಲೆ ಬಳಿಕ ಶವಗಳ ಮುಂದೆಯೇ ಕುಳಿತು ಊಟ ಮಾಡಿದ ಆರೋಪಿಗಳು!
ಹಾವೇರಿ: ಮನೆ ಖಾಲಿ ಮಾಡಿಸಲು ಬಂದ ತಾಯಿ – ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ. ಪ್ರೇಮಾ ಬಡಿಗೇರ್ (55) ಹಾಗೂ ಅವಿನಾಶ್ ಬಡಿಗೇರ್ (35) ಕೊಲೆಯಾದ ದುರ್ದೈವಿಗಳು. ತಿರಕಯ್ಯ ಹೀರೆಮಠ ಹಾಗೂ ಬಸವರಾಜ್ ಹೊಸಮಠ ಕೊಲೆ ಆರೋಪಿಗಳಾಗಿದ್ದಾರೆ. ಈ ಎರಡೂ ಕುಟುಂಬದ ನಡುವೆ ಆಸ್ತಿ ವಿಚಾರಕ್ಕೆ ಬರೋಬ್ಬರಿ 20 ವರ್ಷಗಳಿಂದ ವ್ಯಾಜ್ಯ ಇತ್ತು. ಈ ಬಗ್ಗೆ ಕೋರ್ಟ್‌ನಲ್ಲಿ ತಮ್ಮ ಪರ ತೀರ್ಪು …
Read More »ಭಯೋತ್ಪಾದನೆಗೆ ಪಿತೂರಿ ಪ್ರಕರಣ – ಚಿಕ್ಕಬಳ್ಳಾಪುರ ಪೊಲೀಸರಿಂದ ಮತ್ತೋರ್ವನ ಬಂಧನ
ಚಿಕ್ಕಬಳ್ಳಾಪುರ: ಭಯೋತ್ಪಾದನೆಗೆ ಪಿತೂರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಹಾಸನದ ಅರಕಲಗೂಡಿನಲ್ಲಿ ಬಂಧಿಸಿದ್ದಾರೆ. ಬಿಹಾರ ಮೂಲದ ಸಲಾಮಿನ್ (25) ಬಂಧಿತ ಆರೋಪಿ. ಈತ ಹಾವೇರಿಯಲ್ಲಿ ಅಣ್ಣನೊಂದಿಗೆ ರಸ್ತೆ ನಿರ್ಮಾಣ ಕೆಲಸ ಮಾಡುತ್ತಿದ್ದ. ಹಾವೇರಿಯಲ್ಲಿ ಕೆಲಸ ಮುಗಿದಿದ್ದು, ಅರಕಲಗೂಡಿಗೆ ಕೆಲಸಕ್ಕೆ ತೆರಳುವಂತೆ ಗುತ್ತಿಗೆದಾರ ಹೇಳಿದ್ದ. ಸೆ.24 ರಂದು ಅರಕಲಗೂಡಿಗೆ ಬಂದು ತಂಗಿದ್ದ. ಶಬ್ಬೀರ್ ನೀಡಿದ ಮಾಹಿತಿ ಆಧಾರದ ಮೇಲೆ ಸಲಾಮಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಅರಕಲಗೂಡು …
Read More »
Laxmi News 24×7