Breaking News

ಎಲ್ಲರನ್ನೂ ಮುಗಿಸಿಬಿಟ್ರೆ 3 ಕೋಟಿ ಆಸ್ತಿ ನಮ್ಮದೇ – ಮಗಳ ಬ್ರೈನ್‌ವಾಷ್‌ ಮಾಡಿದ್ದ ಹಂತಕ; ತನಿಖೆಯಲ್ಲಿ ಸಾಬೀತು

Spread the love

ಬೆಂಗಳೂರು: ಪತ್ನಿ ಕುಟುಂಬಸ್ಥರ 7 ಮಂದಿ ಹತ್ಯೆ ಪ್ರಕರಣದ ತನಿಖೆಯನ್ನ ರಾಜಾಜಿನಗರ ಪೊಲೀಸರು ಚುರುಗೊಳಿಸಿದ್ದಾರೆ. ಹಂತಕ ಇಂದುಶೇಖರ್‌ ವಿಚಾರಣೆಯ ವೇಳೆ ಕೊಲೆ ಹಿಂದಿನ ಹಲವು ಸತ್ಯಗಳು ಬಯಲಿಗೆ ಬರುತ್ತಿದೆ.

ಮಗಳಿಗೆ ಕೋಟ್ಯಂತರ ರೂಪಾಯಿ ಆಸ್ತಿಯ ಆಸೆ ತೊರಿಸಿ ಕೃತ್ಯದಲ್ಲಿ ಭಾಗಿಯಾಗಲು ಮಗಳ ಬ್ರೈನ್ ವಾಷ್‌ ಮಾಡಿದ್ದಾನೆ ಅನ್ನೋದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ ಎಂದು ತಿಳಿದುಬಂದಿದೆ.

ಶ್ರೀರಾಂಪುರದಲ್ಲಿ ಅಜ್ಜಿಯ 3-4 ಕೋಟಿ ಬೆಲೆ ಬಾಳುವ ಆಸ್ತಿ ಇದೆ. ಅತ್ತೆ ಮಾವಂದಿರುವ ಇದ್ದರೆ, ಆ ಆಸ್ತಿಯಲ್ಲಿ ಅವರಿಗೂ ಪಾಲು ಕೊಡಬೇಕಾಗುತ್ತೆ. ಅವರು ಎಲ್ಲರನ್ನೂ ಮುಗಿಸಿಬಿಟ್ಟರೆ ಯಾರಿಗೂ ಪಾಲು ಕೊಡುವಂತಿರುವುದಿಲ್ಲ ಎಂದು ಅಂತಾ ಮಗಳಿಗೆ ಬ್ರೈನ್‌ವಾಷ್‌ ಮಾಡಿದ್ದಾನೆ.

ಹಂತಕ ತಂದೆ ಇಂದುಶೇಖರ್ ಮಾತನ್ನ ವೇದವಾಕ್ಯ ಎಂದು ನಂಬಿ ಅಪ್ಪ ಮಾಡುವ ಎಲ್ಲ ಪಾಪದ ಕೈಲಸಕ್ಕೆ ಕೈ ಜೋಡಿಸಿದ್ದಾಳೆ. ಹಂತಕ ತನ್ನ ಮಗಳಿಗೆ ಹೀಗೆ ಇಲ್ಲ ಸಲ್ಲದ ಆಸೆಗಳನ್ನ ಹುಟ್ಟಿಸಿ 7 ಮರ್ಡರ್ ಮಾಡಲು ಹಾಗೂ ಹತ್ಯೆಯ ಬಳಿ ಏಳು ಮಂದಿಯ ಮೃತದೇಹಗಳನ್ನ ಸಾಗಾಟ ಮಾಡಲು ಸಹಾಯ ಮಾಡಿದ್ದಾಳೆ ಅನ್ನೋದು ತನಿಖೆಯಿಂದ ಬಯಲಾಗಿದೆ.

ಸದ್ಯ ಅಪ್ಪ ಮಗಳು ಇಬ್ಬರು ಪೊಲೀಸ್ ಕಸ್ಟಡಿಯಲ್ಲಿದ್ದು ಹತ್ಯೆ ಹಿಂದಿನ ಮತ್ತಷ್ಟು ಸತ್ಯ ಬೆಳಕಿಗೆ ತರಲು ಮುಂದಾಗಿದ್ದಾರೆ.


Spread the love

About Laxminews 24x7

Check Also

ಜಾತ್ರೆ ವೇಳೆ ಕಲ್ಲು ತೂರಾಟ, ಮಗು ಸೇರಿ ನಾಲ್ವರಿಗೆ ಗಾಯ – ರಥೋತ್ಸವ ಅರ್ಧಕ್ಕೆ ಸ್ಥಗಿತ

Spread the loveಮೈಸೂರು: ನಂಜನಗೂಡು  ತಾಲೂಕಿನ ಕಾರ್ಯ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿ ಜಾತ್ರಾ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ