Breaking News

ಭೀಕರ ಬರಗಾಲಕ್ಕೆ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯ ಖಾಲಿ

Spread the love

ಬೀದರ್: ಈ ಬಾರಿ ಗಡಿನಾಡು ಬೀದರ್‌ನಲ್ಲಿ ಭೀಕರ ಬರಗಾಲ ಹಿನ್ನೆಲೆ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯ ಬಹುತೇಕ ಖಾಲಿ ಖಾಲಿಯಾಗಿದೆ. ಜನ, ಜಾನುವಾರುಗಳು, ಪಕ್ಷಿಗಳಿಗೆ ಹನಿ ನೀರಿಗೂ ಹಾಹಾಕಾರ ಶುರುವಾಗಿದ್ದು, ಚಳಿಗಾಲದಲ್ಲೇ ಕಾರಂಜಾ ಜಲಾಶಯ ಖಾಲಿ ಖಾಲಿಯಾಗಿದೆ.

ಕಳೆದ ವರ್ಷ ಈ ಸಮಯದಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದ್ದ 7.69 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯ ಈ ಬಾರಿ ಬಹುತೇಕ ಖಾಲಿ ಖಾಲಿಯಾಗಿದೆ. ಸಂಪೂರ್ಣವಾಗಿ ಮಳೆ ಕೈಕೊಟ್ಟ ಪರಿಣಾಮ ಖಾಲಿ ಖಾಲಿಯಾಗಿದ್ದು, ಕಾರಂಜಾ ಜಲಾಶಯದಲ್ಲಿ ಸದ್ಯ ಕೇವಲ 3.5 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಇದ್ರಲ್ಲಿ 1.5 ಟಿಎಂಸಿ ನೀರು ಡೆಡ್ ಸ್ಟೋರೆಜ್ ಇದ್ದು, ಹೀಗಾಗಿ ಕೇವಲ 2 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ.

ಕಾರಂಜಾ ಜಲಾಶಯದಲ್ಲಿ ದಿನೇ ದಿನೇ ನೀರು ಖಾಲಿಯಾಗುತ್ತಿರುವ ಪರಿಣಾಮ ಔರಾದ್‌ಗೆ ಕುಡಿಯುವ ನೀರು ಬಂದ್ ಮಾಡಿದ್ದು, ಸದ್ಯ ಬೀದರ್, ಭಾಲ್ಕಿ, ಹುಮ್ನಾಬಾದ್, ಚಿಟ್ಟಗುಪ್ಪ ತಾಲೂಕುಗಳಿಗೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಇನ್ನೂ ಕೆಲವೇ ತಿಂಗಳಲ್ಲಿ ನೂರಕ್ಕೆ ನೂರು ಕಾರಂಜಾ ಜಲಾಶಯದ ನೀರು ಖಾಲಿಯಾಗಲಿದ್ದು, ಈಗಾಗಲೇ ಜಿಲ್ಲೆಯ ನೀರಿನ ಮೂಲಗಳಾದ ಕೆರೆಗಳು, ಬಾವಿಗಳು ಬತ್ತಿ ಹೋಗಿ ಹಾಹಾಕಾರ ಶುರುವಾಗಿದೆ. ಹೀಗಾಗಿ ಈ ಬಾರಿ ಬೇಸಿಗೆಯಲ್ಲಿ ಮೊದಲ ಬಾರಿಗೆ ಹನಿ ನೀರಿಗಾಗಿ ಅತಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಮೊದಲ ಬಾರಿಗೆ ಕಾರಂಜಾ ಜಲಾಶಯದಲ್ಲಿನ ತಳಹದಿಯ ಕಲ್ಲುಗಳು ಕಾಣುತ್ತಿವೆ.


Spread the love

About Laxminews 24x7

Check Also

ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಲ್ಪೆಗೆ ಬಂದ ಭೂಗತ ಪಾತಕಿ ರವಿ ಪೂಜಾರಿ

Spread the loveಉಡುಪಿ: ತಾಯಿಯ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿ ಉಡುಪಿಗೆ ಆಗಮಿಸಿದ್ದಾನೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ