Breaking News

ಗಿಗ್ ಕಾರ್ಮಿಕರಿಗೆ ರಾಹುಲ್ ಗಾಂಧಿ ಬಂಪರ್ ಗಿಫ್ಟ್ – 15 ಲಕ್ಷದವರೆಗೆ ವಿಮೆ ಘೋಷಣೆ

Spread the love

ಹೈದರಾಬಾದ್: ತೆಲಂಗಾಣದ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹತ್ವದ ಯೋಜನೆಗೆ ಶನಿವಾರ ಚಾಲನೆ ನೀಡಿದ್ದಾರೆ. ‘ತೆಲಂಗಾಣ ಗಿಗ್ ವರ್ಕರ್ಸ್ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆ’ಯನ್ನ ಉದ್ಘಾಟಿಸಿದ ಅವರು, ರಾಜ್ಯದ ಗಿಗ್ ಕಾರ್ಮಿಕರಿಗೆ ಒಟ್ಟು 15 ಲಕ್ಷ ರೂ.ವರೆಗಿನ ಅಪಘಾತ ಮತ್ತು ಆರೋಗ್ಯ ವಿಮೆ ಸೌಲಭ್ಯ ಘೋಷಿಸಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾರ್ಮಿಕರೇ ದೇಶದ ಆರ್ಥಿಕತೆಯ ಅಡಿಪಾಯ ಮತ್ತು ಅಭಿವೃದ್ಧಿಯ ಪಾಲುದಾರರು. ಹೀಗಾಗಿ ಗಿಗ್ ಕಾರ್ಮಿಕರಿಗೆ  ಸಾಮಾಜಿಕ ಭದ್ರತೆ ಮತ್ತು ರಕ್ಷಣೆ ಒದಗಿಸುವ ಭರವಸೆಯನ್ನ ತೆಲಂಗಾಣ ಸರ್ಕಾರ ಈಡೇರಿಸಿದೆ ಎಂದು ಹೇಳಿದರು.

5 ಲಕ್ಷ ಅಪಘಾತ ವಿಮೆ, 10 ಲಕ್ಷ ಆರೋಗ್ಯ ವಿಮೆ!
ಹೊಸ ಯೋಜನೆಯಡಿ ತೆಲಂಗಾಣದ ಪ್ರತಿಯೊಬ್ಬ ಗಿಗ್ ಕಾರ್ಮಿಕನಿಗೆ 5 ಲಕ್ಷ ರೂ. ಅಪಘಾತ ವಿಮೆ ಹಾಗೂ 10 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ದೊರೆಯಲಿದೆ. ಅಪಘಾತ ಅಥವಾ ಅನಾರೋಗ್ಯದಿಂದ ಕಾರ್ಮಿಕರು ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅವರ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಇಂತಹ ಸಂದರ್ಭಗಳಲ್ಲಿ ವಿಮೆ ನೆರವಾಗಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಇದರ ಜೊತೆಗೆ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ಸಾಮಾಜಿಕ ಭದ್ರತೆ ಹಾಗೂ ಭವಿಷ್ಯಕ್ಕಾಗಿ ಉಳಿತಾಯ ವ್ಯವಸ್ಥೆಯೂ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿ ವಹಿವಾಟಿನ ಮೌಲ್ಯದ 1% ಹಣ ಕಾರ್ಮಿಕರ ಕಲ್ಯಾಣಕ್ಕೆ!
ಈ ಯೋಜನೆಯ ವಿಶೇಷತೆ ಏನು ಅಂದ್ರೆ, ಪ್ರತಿ ವಹಿವಾಟಿನ ಮೌಲ್ಯದ ಶೇ.1ರಷ್ಟು ಮೊತ್ತವನ್ನ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಡುವುದು. ಉಬರ್, ಬ್ಲಿಂಕಿಟ್ ಸೇರಿದಂತೆ ವಿವಿಧ ಡೆಲಿವರಿ ಮತ್ತು ರೈಡ್ ಸೇವೆಗಳ ಪ್ರತಿಯೊಂದು ವಹಿವಾಟಿನಿಂದ ಶೇ.1ರಷ್ಟು ಹಣವನ್ನ ಕಾರ್ಮಿಕರ ಭವಿಷ್ಯ ಮತ್ತು ಸಾಮಾಜಿಕ ಭದ್ರತೆಗಾಗಿ ನೀಡಲಾಗುತ್ತದೆ. ಈ ಮೊತ್ತವನ್ನ ಕಂಪನಿಗಳು ತೆಲಂಗಾಣದ ಗಿಗ್ ವರ್ಕರ್ಸ್ ಕಲ್ಯಾಣ ಮಂಡಳಿಗೆ ಪಾವತಿಸಬೇಕಾಗುತ್ತದೆ. ಬಳಿಕ ಮಂಡಳಿಯು ಆ ಹಣವನ್ನು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ವ್ಯವಸ್ಥೆ ಮಾಡಲಿದೆ ಎಂದು ಮಾಹಿತಿ ನೀಡಿದರು.

ವೈ-ಫೈ ಸೌಲಭ್ಯದ ವಿಶ್ರಾಂತಿ ಕೇಂದ್ರ
ಗಿಗ್ ಕಾರ್ಮಿಕರಿಗಾಗಿ ವೈ-ಫೈ ಸೌಲಭ್ಯ ಹೊಂದಿರುವ ವಿಶ್ರಾಂತಿ ಕೇಂದ್ರಗಳನ್ನ ಸ್ಥಾಪಿಸುವುದು ಹಾಗೂ ಕೆಲಸಕ್ಕೆ ಸಂಬಂಧಿಸಿದ ಮಾಹಿತಿಯನ್ನ ಪಡೆಯಲು ಅವಕಾಶ ಕಲ್ಪಿಸುವುದೂ ಯೋಜನೆಯ ಭಾಗವಾಗಿದೆ. ಕಾರ್ಮಿಕರ ಸಮಸ್ಯೆಗಳನ್ನ ಆಲಿಸಿದ ಬಳಿಕ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೊಂದಿಗೆ ಚರ್ಚಿಸಿ ಈ ಯೋಜನೆ ರೂಪಿಸಲಾಗಿದೆ. ಇಂದು ಆ ಭರವಸೆಯನ್ನು ಈಡೇರಿಸುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.


Spread the love

About Laxminews 24x7

Check Also

ಅಕ್ರಮ ಮರಳು ಮಾಫಿಯಾ ತಡೆಯುವಲ್ಲಿ ವಿಫಲ, ಪರೋಕ್ಷ ಬೆಂಬಲ ಆರೋಪ – ನಂಗಲಿ ಪಿಎಸ್‌ಐ, ಕಾನ್ಸ್‌ಟೇಬಲ್ ಅಮಾನತು

Spread the loveಕೋಲಾರ: ಬರ ಎದುರಾಗಿ ಕೋಲಾರದಲ್ಲಿ ಕೆರೆಗಳು ಖಾಲಿಯಾಗುತ್ತಿದ್ದಂತೆ ಅಕ್ರಮ ಫಿಲ್ಟರ್ ಮರಳು ಮಾಫಿಯಾ ಜೋರಾಗಿದೆ. ಪರಿಣಾಮ ತಡೆಯುವಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ