Breaking News

ಹರಿದ ನೆತ್ತರು – ರೌಡಿಶೀಟರ್ ಭೀಕರ ಹತ್ಯೆ

Spread the love

ಶಿವಮೊಗ್ಗ: ತಾಲೂಕಿನ ರಾಮಿನಕೊಪ್ಪದಲ್ಲಿ ರೌಡಿಶೀಟರ್‌ ಭೀಕರ ಹತ್ಯೆಯಾಗಿರುವ ಘಟನೆ ನಡೆದಿದೆ.

ಕಿರಣ್ ಅಲಿಯಾಸ್ ಕುಳ್ಳಿ ಕಿರಣ್‌ (32) ಕೊಲೆಯಾದ ರೌಡಿಶೀಟರ್. ಶಿವಮೊಗ್ಗ ನಗರದ ಸಿಗೇಹಟ್ಟಿ- ಭಾರತಿ ಕಾಲೋನಿ ನಿವಾಸಿ.

ರಾಮಿನಕೊಪ್ಪ ಬಳಿ ಸ್ನೇಹಿತರ ಜೊತೆಯಿದ್ದ ಕಿರಣ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಗಂಭೀರ ಗಾಯಗೊಂಡ ಕಿರಣ್ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದಾರೆ.

ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರೌಡಿಶೀಟರ್ ಕಿರಣ್ ಮೃತದೇಹ ರವಾನಿಸಲಾಗಿದೆ. ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೈಯಕ್ತಿಕ ಹಣಕಾಸು ವ್ಯವಹಾರದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳು

Spread the loveಗದಗ: ತಗಡಿನ ಮನೆಗೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ