Breaking News

ಸಸಿ ನೆಡುವ ಶಿಕ್ಷೆ ನೀಡಿದ ಚಿಕ್ಕೋಡಿ ನ್ಯಾಯಾಲಯ

Spread the love

ಚಿಕ್ಕೋಡಿ: ತಾಲೂಕಿನ ಯಕ್ಸಂಬಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವಿಸಿ ಅವಾಚ್ಚ ಶಬ್ದಗಳಿಂದ ಸಾರ್ವಜನಿಕರನ್ನು ನಿಂದಿಸಿದ ಅನಿಲ ಪೂಜಾರಿ ಚಿಕ್ಕೋಡಿ ಪ್ರಥಮ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಸಸಿ ನೆಡುವ ವಿನೂತನ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿ, ತಾನು
ಸಾರ್ವಜನಿಕ ಸ್ಥಳದಲ್ಲಿ ಏರು ಧ್ವನಿಯಲ್ಲಿ ಮಾತನಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಒಪ್ಪಿಕೊಂಡಿದ್ದ ಅನಿಲ ಪೂಜಾರಿಗೆ 1 ಸಾವಿರ ರೂ. ದಂಡದ ಜತೆಗೆ 
ಸದಲಗಾ ಪೊಲೀಸ್ ಠಾಣಾ ಮತ್ತು
ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ ತಲಾ 25 ಸಸಿ ನೀಡುವ ಶಿಕ್ಷೆ ನೀಡಿದೆ.ಸಸಿ ನೆಡಲು ವಿಫಲವಾದರೆ 30 ದಿನಗಳ ಕಾರಾಗೃಹ ಶಿಕ್ಷೆಯ ಎಚ್ಚರಿಕೆ ನೀಡಿದೆ.

Spread the love

About Laxminews 24x7

Check Also

ಮಮತಾ ಬ್ಯಾನರ್ಜಿ ಸೋದರ ಸಂಬಂಧಿ ಪುತ್ರಿ ಶವವಾಗಿ ಪತ್ತೆ

Spread the loveಕೋಲ್ಕತ್ತಾ: ಪಶ್ಚಿಮ ಬಂಗಾಳದ  ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಅವರ ಸೋದರ ಸಂಬಂಧಿಯ ಪುತ್ರಿ ಬೃಷ್ಟಿ ಮುಖರ್ಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ