Breaking News

ದೌರ್ಜನ್ಯದ ರೂಪದಲ್ಲಿ ನನ್ನ ರಾಜೀನಾಮೆ ಪಡೆದಿದ್ದು ಬಹಳ ನೋವು ತಂದಿದೆ: ಬಸವರಾಜ ಹೊರಟ್ಟಿ

Spread the love

ಗದಗ: ನನ್ನ ರಾಜೀನಾಮೆ ಪಡೆಯಲು ಸ್ವತಃ ಸಿಎಂ ಅವರೇ ಸ್ಪೀಕರ್ ಕಚೇರಿಗೆ ಬಂದು ಬಾಗಿಲು ಹಾಕಿಕೊಂಡು ಒಂದೂವರೆ ಗಂಟೆ ಕುಳಿತು, ದೌರ್ಜನ್ಯದ ರೀತಿಯಲ್ಲಿ ರಾಜೀನಾಮೆ ಪಡೆದರು. ಇದು ನನಗೆ ಬಹಳ ನೋವು ತಂದಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಕಾರ್ಯಕರ್ತರ ಜೊತೆ ಮಾತನಾಡಿದ ಹೊರಟ್ಟಿ, ಸಿಎಂ ಡಿ.ಕೆ. ಶಿವಕುಮಾರ್ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಜುಲೈ 24ರಂದು ರಾತ್ರಿ 11 ಗಂಟೆಗೆ ಸಿಎಂ ಡಿ.ಕೆ. ಶಿವಕುಮಾರ್ ಕರೆ ಮಾಡಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಆದರೆ ಆಗಸ್ಟ್ 14ರಂದು ವಿಧಾನ ಪರಿಷತ್ ಅಧಿವೇಶನ ಕರೆದು, ಸದನದ ಸದಸ್ಯರಿಗೆ ಕೃತಜ್ಞತೆ ಹಾಗೂ ಧನ್ಯವಾದ ಅರ್ಪಿಸಿದ ಬಳಿಕ ರಾಜೀನಾಮೆ ನೀಡಲು ತಾವು ನಿರ್ಧರಿಸಿದ್ದೆ ಎಂದು ಹೇಳಿದರು.

ಆದರೆ ತಮ್ಮ ಆಪ್ತ ಕಾರ್ಯದರ್ಶಿಯಿಂದ ರಾಜೀನಾಮೆ ಪತ್ರ ತರಿಸಿ, ಯಾವುದೇ ಕಾರಣ ನೀಡದೇ ಸಿಎಂ ಅವರೇ ಲೆಟರ್ ಟೈಪ್ ಮಾಡಿಸಿ ತಮ್ಮಿಂದ ಸಹಿ ಮಾಡಿಸಿಕೊಂಡರು ಎಂದು ಹೊರಟ್ಟಿ ಆರೋಪಿಸಿದರು.

ರಾಜೀನಾಮೆ ಪಡೆಯಲು ಸಿಎಂ ಅವರೇ ಕಚೇರಿಗೆ ಬಂದು ಬಾಗಿಲು ಹಾಕಿಕೊಂಡು ಕುಳಿತಿದ್ದರು. ಒಂದೂವರೆ ಗಂಟೆ ಕುಳಿತು ದೌರ್ಜನ್ಯದ ರೀತಿಯಲ್ಲಿ ರಾಜೀನಾಮೆ ಪಡೆದಿದ್ದು ನನಗೆ ಬಹಳ ನೋವುಂಟು ಮಾಡಿದೆ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಬಂಡೆ ತಬ್ಬಿ ಬೆಂಗಳೂರಿಗರ ಪ್ರತಿಭಟನೆ – ಲಾಲ್‌ಬಾಗ್‌ ಉಳಿಸಲು ಬೃಹತ್‌ ಅಭಿಯಾನ

Spread the loveಬೆಂಗಳೂರು: ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಸರ್ಕಾರದ ಕಾಯ್ದೆ ತಿದ್ದುಪಡಿಗೆ ಬೆಂಗಳೂರಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ