Breaking News

ಸಾವಿರಾರು ದಾಳಿಗಳ ನಡುವೆ ಹಿಂದೂ ಸಮಾಜ ಅಳಿಸಲು ಸಾಧ್ಯವಾಗಿಲ್ಲ: ನರೇಂದ್ರ ಜೀ

Spread the love

ಗದಗ: ಎರಡು ಸಾವಿರ ವರ್ಷಗಳಿಂದ ಹಿಂದೂಗಳ ಮೇಲೆ ಅನೇಕ ದಾಳಿಗಳು ನಡೆಯುತ್ತಾ ಬಂದಿವೆ. ಆದರೆ, ಇಂದಿಗೂ ನಮ್ಮ ಧರ್ಮ-ಪರಂಪರೆ ಅಳಿಸಲು ಯಾರಿಗೂ ಸಾಧ್ಯವಾಗಿಲ್ಲ ಎಂದು ಉತ್ತರ ಕರ್ನಾಟಕ ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕ ನರೇಂದ್ರ ಜೀ ಹೇಳಿದರು.
ಬೆಟಗೇರಿಯ ರಂಗಪ್ಪಜ್ಜನ ಮಠದ ಹತ್ತಿರದ ಬಯಲು ಜಾಗೆಯಲ್ಲಿ ನಡೆದ ಹಿಂದೂ ಸಮ್ಮೇಳನ ಉದ್ದೇಶಿಸಿ ಮಾತನಾಡಿ, ಹಿಂದೂ ಸಮ್ಮೇಳನ ಅನ್ಯಧರ್ಮದ ವಿರುದ್ದ ಮಾತನಾಡುವುದಲ್ಲ. ಇದು ಭಾರತ ಮಾತೆಯ ಜಾತ್ರೆಯಾಗಿದೆ. ಬೆಟಗೇರಿಯಲ್ಲಿ ನಮ್ಮ ೪೫ ಸಮುದಾಯಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂಗಳೆಲ್ಲರೂ ಒಂದೇ ಅಂತ ಸಾರಿ ಹೇಳಿದ್ದಾರೆ ಎಂದರು.
ನಮ್ಮ ದೇಶ ಜಗತ್ತಿನ ವಿಶಿಷ್ಠ ದೇಶವಾಗಿದೆ. ಜಗತ್ತಿಗೆ ಬಟ್ಟೆ ತೋಡುವ ಪದ್ದತಿ, ಊಟದ ವ್ಯವಸ್ಥೆಯನ್ನು ಕಲಿಸಿದ್ದು ಭಾರತೀಯರು. ಜೊತೆಗೆ ಪರಾಕ್ರಮದ ಇತಿಹಾಸ ವಿಶ್ವದಾಧ್ಯಂತ ಪಸರಿಸಿದ್ದೇವೆ. ನಮ್ಮನ್ನು ತುಳಿಯಲು ಬಂದವರ ಸಮಾದಿಯನ್ನು ಮಾಡಿದ್ದೇವೆ. ಜಗತ್ತನ್ನೆ ಗೆಲ್ಲಲು ಬಂದ ಅಲೆಗ್ಸಾಂಡರ್ ನನ್ನು ಹಿಮ್ಮೆಟ್ಟಿಸಿ ಪರಾಕ್ರಮದಲ್ಲಿ ನಾವೇ ನಂಬರ್ ಒನ್ ಅಂತ ತೋರಿಸಿದ್ದೇವೆ. ಜ್ಞಾನ, ಸಂಪತ್ತು, ಪರಾಕ್ರಮದಲ್ಲಿ ಕಡಿಮೆ ಇಲ್ಲದಿದ್ದರೂ ೨೦೦ ವರ್ಷಗಳ ಕಾಲ ಬ್ರೀಟಿಷರು ನಮ್ಮನ್ನು ಆಳಿದ್ದು ದುರಂತದ ಸಂಗತಿ ಅಂತ ಬೇಸರ ವ್ಯಕ್ತಪಡಿಸಿದರು.
ಪರಿಸರದ ರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆ, ಶಿಸ್ತು, ವ್ಯಕ್ತಿಯ ನಡುವಳಿಕೆ, ನಾಗರಿಕ ಕರ್ತವ್ಯ, ಸಾಮರಸ್ಯ, ಬಂಧುತ್ವದ ಭಾವನೆ ಕಲಿಸುವುದು ಹಿಂದೂ ಸಮ್ಮೇಳನದ ಇನ್ನೊಂದು ಪ್ರಮುಖ ಉದ್ದೇಶವಾಗಿದೆ. ಮುಂದಿನ ೫೦ ವರ್ಷಗಳಲ್ಲಿ ಭಾರತ ವಿಶ್ವಗುರುವಾಗಿ ಬೆಳೆಯಲಿದೆ. ಹಿಂದೂ ಸಮಾಜ ಬಲಿಷ್ಠವಾದಾಗ ಭಾರತ ಬಲಿಷ್ಠ ಆಗಲಿದೆ. ಭಾರತ ಬಲಿಷ್ಠವಾದರೇ ಜಗತ್ತು ಸುಭದ್ರವಾಗಿರುತ್ತದೆ ಎಂದು ಹೇಳಿದರು.
ಸಾನ್ನಿಧ್ಯ ನಾಲ್ವಡಿ ನೀರಕಂಠ ಪಟ್ಟಾದೀಶ್ವರರು, ಡಾ.ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಜಗನ್ನಾಥ ಮಹಾರಾಜರು ವಹಿಹಿಕೊಂಡಿದ್ದರು.
ಸಮ್ಮೇಳನದ ಅಧ್ಯಕ್ಷ ಕೆ.ಬಿ. ಹೊಳಿ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಮಾಧುಸಾ ಮೇರವಾಡೆ, ಲಕ್ಷ್ಮೀ ಶಂಕರ್ ಖಾಕಿ, ರವಿ ಗಂಜಿ, ಅಜ್ಜನಗೌಡ ಹಿರೇಮನಿಪಾಟೀಲ, ರಾಮಕ್ರಷ್ಣ ಪಾಂಡ್ರೆ, ರಾಘವೇದ್ರ ಆರಿ, ಮಾಯಪ್ಪ ಭಜಂತ್ರಿ, ಶಿವು ಪೂಜಾರ, ಶ್ರೀಧರ್ ಕೊಣ್ಣೂರ, ಪ್ರಶಾಂತ ಸಾಗರ, ದತ್ತು ಪವಾರ, ದೇವೆಂದ್ರಪ್ಪ ಗೋಟೂರು, ವಾಯ್.ಜಿ ಗಡಾದ, ಚಂದ್ರಶೇಖರ ಕರಿಸೋಮನಗೌಡ್ರ ಇದ್ದರು.

Spread the love

About Laxminews 24x7

Check Also

ಇಂಡೋ – ಪಾಕ್‌ ವಿವಾದದ ನಡುವೆ ಚುಟುಕು ಕ್ರಿಕೆಟ್‌ ಕದನ – ಇಂದಿನಿಂದ ವಿಶ್ವಕಪ್‌ ಹಬ್ಬ

Spread the love ಮುಂಬೈ: ಕ್ರಿಕೆಟ್‌ ಪ್ರೇಮಿಗಳ ನೆಚ್ಚಿನ ಟಿ20 ʻವಿಶ್ವಕಪ್‌ ಹಬ್ಬ ಇಂದಿನಿಂದ ಶುರುವಾಗುತ್ತಿದೆ. ಈ ಬಾರಿ ವಿವಾದಗಳಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ