Breaking News

12 ಸ್ಥಾನಗಳಿಗೆ ಕಾಂಗ್ರೆಸ್​ ಬೆಂಬಲಿಗರ ಗೆಲುವು

Spread the love

ಚಿಂತಾಮಣಿ: ತಾಲೂಕಿನ ವೈಜಕೂರು ರೇಷ್ಮೇ ಬೆಳೆಗಾರರ, ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್​ ಬೆಂಬಲಿತ ಕಾಂಗ್ರೆಸ್​ ಬೆಂಬಲಿಗರು ಗೆಲುವು ಸಾಧಿಸುವ ಮೂಲಕ ವಿರೋಧ ಪಕ್ಷಕ್ಕೆ ಮುಖಭಂಗ ಮಾಡಿದ್ದಾರೆ.
ಆಡಳಿತ ಮಂಡಳಿ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ವನಿತಾ ಫಲಿತಾಂಶ ಘೋಷಿಸಿದರು.
ಸಹಕಾರ ಸಂಘದ ಸಾಲಗಾರರ ಕ್ಷೇತ್ರದಲ್ಲಿ 10 ನಿರ್ದೇಶಕರು, ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ, ಠೇವಣೆದಾರರ ಕ್ಷೇತ್ರದಲ್ಲಿ ತಲಾ ಒಂದೊಂದು ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಒಟ್ಟು 12 ಸ್ಥಾನಗಳು ಸಚಿವ ಡಾ.ಎಂ.ಸಿ.ಸುಧಾಕರ್​ ಬೆಂಬಲಿಗರು ಗೆಲುವು ಸಾಧಿಸುತ್ತಿದ್ದಂತೆ ವಿಜಯೋತ್ಸವ ಆಚರಿಸಿದರು.
ಆಯ್ಕೆಯಾದ ನಿರ್ದೇಶಕರು:
ನಾಗರಾಜಪ್ಪ, ಮಂಜುನಾಥ್​, ವಿ.ರಾಧಾಕೃಷ್ಣಾ, ಶ್ರೀನಿವಾಸ್​ ಮೂರ್ತಿ, ಹಿಂದುಳಿದ ವರ್ಗ ಎ.ಟಿ.ಮುನಿನಾರಾಯಣಪ್ಪ, ಹಿಂದುಳಿದ ವರ್ಗ ಬಿ ಎಂ.ಸುರೇಶ, ಮಹಿಳಾ ಮೀಸಲು ಕ್ಷೇತ್ರ ಎಚ್​.ಸಿ.ಆಶಾ, ಎನ್​.ಭಾಗ್ಯಮ್ಮ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ವಿ.ಶ್ರೀನಿವಾಸ್​ 250, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ ಎಂ.ವಿನೋದ್​, ಠೇವಣಿದಾರರ ಕ್ಷೇತ್ರ 1 ಹರೀಶ್​, ಸಾಲಗಾರರಲ್ಲದ ಕ್ಷೇತ್ರ ನರಸಿಂಹಮೂರ್ತಿ ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ.
ಮುಖಂಡರಾದ ಎಚ್​.ನಾರಾಯಣಸ್ವಾಮಿ, ಮಹೇಶ್​, ಮೂರ್ತಿ, ಲೋಕೇಶ್​, ಸೇರಿದಂತೆ ಕೈವಾರ ಹೋಬಳಿಯ ಮುಖಂಡರು ಇದ್ದರು.

Spread the love

About Laxminews 24x7

Check Also

ವಾಲ್ಮೀಕಿ ಸಮಾಜದ ಬಗ್ಗೆ ಗೌರವವಿದ್ದರೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಕೊಡಲಿ: ವಿಜಯೇಂದ್ರ

Spread the loveಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿ ಹಾಗೂ ಸಚಿವ ಬಿ. ನಾಗೇಂದ್ರ  ಅವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ