Breaking News

ಇಪೌತಿ’ ವಾರಸುದಾರರ ಮನವೊಲಿಸಿ: ಕಂದಾಯ ಸಚಿವ ಕೃಷ್ಣಬೈರೇಗೌಡ

Spread the love

ಗದಗ: ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಜರುಗಿತು. ಇಪೌತಿ, ಕಂದಾಯ ಗ್ರಾಮ, ಹಕ್ಕುಪತ್ರ ವಿತರಣೆ, ಆಕಾರಬಂಧ, ಅನುಬಂಧ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರ ಸಚಿವರು ಇಲಾಖೆ ಪ್ರಗತಿ ಬಗ್ಗೆ ಸಿಬ್ಬಂದಿಗಳು ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಮೃತರ ಹೆಸರಿನಲ್ಲಿ ಯಾವುದೇ ಯೋಜನೆ, ವಿಮೆ ಪಡೆಯುವಂತಿಲ್ಲ. ವಾರಸುದಾರರಿದ್ದು, ಅವರ ಹೆಸರು ಪಹಣಿಯಲ್ಲಿ ಸೇರ್ಪಡೆ ಆಗದಿದ್ದರೆ ವಾರಸುದಾರರೂ ಸಹ ಯೋಜನೆಗಳ ಫಲಾನುಭವಿ ಆಗಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದಿಂದ ಸ್ಪಷ್ಟ ಸೂಚನೆಯಿದೆ. ಹಾಗಾಗಿ ಮೃತರ ಹೆಸರು ಫಲಾನುಭವಿಗೆ ಗಣನೆಗೆ ತೆಗೆದುಕೊಳ್ಳಬಾರದು. ಅದು ಅಕ್ರಮ ವಾಗುತ್ತದೆ ಎಂದು ಕಂದಾಯ ಸಚಿವ ಹೇಳಿದರು.
ಇಪೌತಿ ಮಾಡಲು ನಾನಾ ಸಮಸ್ಯೆಗಳು ಇಲಾಖಾ ಅಧಿಕಾರಿಗಳಿಗೆ ಎದುರಾಗುವುದು ಸಾಮಾನ್ಯ. ಕೆಲ ಸಂದರ್ಭದಲ್ಲಿ ಕೌಟುಂಬಿಕ ಸಮಸ್ಯೆ ಹಿನ್ನೆಲೆ ವಾರಸುದಾರರು ಖುದ್ದಾಗಿ ತಾವೇ ಹೆಸರು ಸೇರ್ಪಡೆಗೆ ಆಸಕ್ತಿ ವಹಿಸುವುದಿಲ್ಲ. ಕಾರಣಗಳು ಏನೇ ಇದ್ದರೂ ಇಪೌತಿ ಕ್ರಮಬದ್ಧವಾಗಿ ಮಾಡಬೇಕು. ಕುಟುಂಬಸ್ಥರ ಮನವೊಲಿಸಬೇಕು. ಜಿಲ್ಲೆಯಲ್ಲಿ ಇನ್ನೂ 19000 ಇಪೌತಿ ಬಾಕಿ ಇದೆ. ಕೆಲ ಪ್ರಕರಣಗಳಲ್ಲಿ ಮಾಲೀಕರು ಇಲ್ಲದಿದ್ದರೂ ಇಪೌತಿ ಆಗಿರುವ ಪ್ರಕರಣ ಬೆಳಕಿಗೆ ಬಂದಿವೆ. ಅಂತಹ ಅಕ್ರಮಗಳಲ್ಲಿ ಕಡಿವಾಣ ಹಾಕಬೇಕು ಎಂದರು.
ವಂಶವೃಕ್ಷ ಮಾಹಿತಿ ಆಧಾರದಲ್ಲಿ ಇಪೌತಿಗೆ ಇಕೆವೈಸಿ ಮಾಡಿಸಬೇಕು. ಆದರೆ, ಭೂಮಿ ಸಂಬಂಧಿತ ವಿಷಯವಾಗಿ ಅಣ್ಣತಮ್ಮಂದಿರು. ಸಹೋದರ ಸಹೋದರಿಯರ ನಡುವೆ ವೈಮನಸ್ಸು ಇರುತ್ತದೆ. ಅದಕ್ಕಾಗಿ ಇಕೆವೈಸಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಸಹೋದರ ಅಥವಾ ಸಹೋದರಿಯರು ಇಕೆವೈಸಿ ಮಾಡುತ್ತಿಲ್ಲ. ಹಾಗಾಗಿ ಇಪೌತಿ ಸಮಸ್ಯೆ ಮುಂದುವರಿಯುತ್ತಿದೆ. ಅದಕ್ಕಾಗಿ ಇಕೆವೈಸಿ ಕಡ್ಡಾಯ ನೋಂದಣಿಯನ್ನು ಕೈಬಿಡಬೇಕು ಎಂದು ಗ್ರಾಮ ಲೆಕ್ಕಿಗರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವರು, ಇಕೆವೈಸಿ ಕೈಬಿಟ್ಟರೆ ನಿಯಮಬಾಹಿರ ಎಂಟ್ರಿಗಳಿಗೆ ಅವಕಾಶ ನೀಡಿದಂತಾಗುತ್ತದೆ. ಅದಕ್ಕಾಗಿ ಇಕೆವೈಸಿ ಕಡ್ಡಾಯ ಎಂಬುದನ್ನು ತಿಳಿ ಹೇಳಿದರು.
ಇಪೌತಿ ಮಾಡದೇ ಮೃತರ ಹೆಸರಲ್ಲಿ ಕಂದಾಯ ಕಟ್ಟಿಸಿಕೊಳ್ಳುವುದು ಅಕ್ರಮವಾಗಿದೆ. ಹೀಗೆ ಕಂದಾಯ ಕಟ್ಟಿಸಿಕೊಳ್ಳುತ್ತಿದ್ದರೆ, ಈಗಲೇ ವಾರಸುದಾರ ಹೆಸರನ್ನು ಇಪೌತಿ ಮೂಲಕ ಹೆಸರು ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇಪೌತಿ ಪ್ರಗತಿ ಅಸಾಧ್ಯ ಎಂದು ಹೇಳಿದರು.
ಹಕ್ಕುಪತ್ರ ವಿತರಣೆ:
ಹಕ್ಕುಪತ್ರ ವಿತರಣೆಯಿಂದ ಇಸ್ವತ್ತು ನೀಡುವ ವರೆಗೂ ಕೆಲಸ ಸಮರ್ಪಕ ಆಗಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಕಂದಾಯ ಗ್ರಾಮ ಮತ್ತು ಹಕ್ಕು ಪತ್ರ ಕುರಿತು ಸಭೆಯಲ್ಲಿ ಚರ್ಚಿಸಿ ಒಟ್ಟು 1679 ಅರ್ಜಿಗಳು ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಕೆ ಆಗಿವೆ. ಅದರಲ್ಲಿ 122 ಅರ್ಜಿಗಳ ಎಂಟ್ರಿ ಆಗಿಲ್ಲ. 1138 ಅರ್ಜಿಗಳು ತಹಸೀಲ್ದಾರ ಲಾಗಿನ್ ನಲ್ಲಿ ಪೆಂಡಿಂಗ್ ಇವೆ. ಇದರಲ್ಲಿ ಕೇವಲ 477 ಇಸ್ವತ್ತು ನೀಡಲಾಗಿದೆ ಎಂದರು. ಮುಂದುವರಿದು ಜಿಲ್ಲೆಯಲ್ಲಿ  36 ಗ್ರಾಮಗಳನ್ನು ಹಕ್ಕುಪತ್ರ ವಿತರಣೆಗೆ ಗುರುತ್ತಿಸಲಾಗಿದೆ. ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಅಂತಿಮ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಶಾಸಕರಾದ ಎಸ್.ವಿ. ಸಂಕನೂರು, ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೆ.ಆರ್. ದುರಗೇಶ, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ, ತಹಸೀಲ್ದಾರರು. ಗ್ರಾಮ ಲೆಕ್ಕಿಗರು, ಕಂದಾಯ ಸಿಬ್ಬಂದಿ ಇತರರು ಇದ್ದರು.
ಪ್ರಮುಖ ಚರ್ಚೆಗಳು:
* ಗ್ರಾಮ ಲೆಕ್ಕಿಗರಿಗೆ ಮಾರ್ಚ ತಿಂಗಳ ಕೊನೆಗೆ ಲ್ಯಾಪ್‌ಟಾಪ್ ವಿತರಿಸಲು ತಿರ್ಮಾನ.
* ಇಪೌತಿ ಸಮರ್ಪಕವಾಗಿ ನಿರ್ವಹಿಸಿದ ಸಿಬ್ಬಂದಿಗೆ ಇನ್ಸೆಂಟಿವ್ ಕೊಡಲು ಸರ್ಕಾರ ತೀರ್ಮಾನ.
* ರಾಜ್ಯದಲ್ಲಿ 6 ಲಕ್ಷ ಆಸ್ತಿಗಳು ಕೃಷಿಯೇತರ ಎಂದು ದಾಖಲೆ ಪಡೆದಿವೆ. ಆದರೆ, 72 ಲಕ್ಷ ಆಸ್ತಿಗಳು ಕೃಷಿಯೇತರ ಎಂದು ನಮೂದಾಗಿದೆ. ಹೀಗೆ ಕೃಷಿಯೇತರ ಆಗಿಯೂ ಕೃಷಿಯೇತರ ಎಂದು ನೋಂದಣಿ ಮಾಡಿಲ್ಲ. ಈ ಸಮಸ್ಯೆ ಬಗೆ ಹರಿಸಲು ಉನ್ನತಮಟ್ಟದ ಸಭೆ ನಡೆಸುವ ಬಗ್ಗೆ ಚರ್ಚೆ.
* ರಾಜ್ಯದಲ್ಲಿ ಮೃತರ ಹೆಸರಿನಲ್ಲಿ ಅಂದಾಜು 12 ಲಕ್ಷಕ್ಕೂ ಅಧಿಕ ಹೆಸರಿನಲ್ಲಿ ಪಹಣಿಗಳಿವೆ. ಅಂತವರ ವಾರಸುದಾರ ಹೆಸರನ್ನು ಪಹಣಿಗೆ ಸೇರ್ಪಡೆ ಮಾಡಲು ಗ್ರಾಮ ಲೆಕ್ಕಿಗರು ವೇಗವಾಗಿ ಕೆಲಸ ಮಾಡಬೇಕು.
* ಜಿಲ್ಲೆಯಲ್ಲಿ ಒಟ್ಟು 108 ಅರ್ಜಿಗಳು ಆಕಾರಬಂಧ ಸಮಸ್ಯೆ ಇವೆ

Spread the love

About Laxminews 24x7

Check Also

ಐತಿಹಾಸಿಕ ಲಕ್ಕುಂಡಿಯಲ್ಲಿ 7 ಹೆಡೆಯ ನಾಗರಕಲ್ಲಿನ ಮೂರ್ತಿ ಪತ್ತೆ

Spread the loveಗದಗ: ಗದಗದ  ಐತಿಹಾಸಿಕ ಲಕ್ಕುಂಡಿಯಲ್ಲಿ  9ನೇ ದಿನದ ಉತ್ಖನನ ಕಾರ್ಯ ಮುಂದುವರಿದಿದೆ. ಬಗೆದಷ್ಟು ಪ್ರಾಚ್ಯಾವಶೇಷಗಳು ಬಯಲಾಗುತ್ತಲೇ ಇವೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ