ಬಿಗ್ಬಾಸ್ ಕನ್ನಡ 13ರ ಈ ಸೀಸನ್ನಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂಬ ವಿಶೇಷ ಥೀಮ್ ನೀಡಿ, ಮನುಷ್ಯನಲ್ಲಿರುವ ಎರಡು ಗುಣಗಳನ್ನು ಹೊರಹಾಕುವ ರೀತಿಯ ಟಾಸ್ಕ್ ಕೊಟ್ಟಿದ್ದರು. ಅದರಂತೆ ಗಂಧರ್ವರಾಗಿದ್ದ ಮಂಜ ರಾಕ್ಷಸರ ಆಟವನ್ನೂ ತಾಳಲಾಗದೇ ಅತಿರೇಕಕ್ಕೇರಿ ಮಾತುಗಳನ್ನು ಆಡಿದ್ದಾರೆ. ವಾರದ ಆರಂಭದಲ್ಲಿ ಮಂಜು ನೇತೃತ್ವದ ತಂಡ ರಾಕ್ಷಸರಾಗಿ ಹಾಗೂ ಗಾನವಿ ನೇತೃತ್ವದ ತಂಡ ಗಂಧರ್ವರಾಗಿದ್ದರು. ಗಗನ್ ಚಿನ್ನಪ್ಪ, ಪ್ರಶಾಂತ್, ಜಗ್ಗಿ, ಸೌಂದರ್ಯ, ಸಂಗೀತಾ ಕೂಡ ರಾಕ್ಷಸರಾಗಿ ಅಬ್ಬರಿಸಿ, ಗಂಧರ್ವ ಲೋಕದಲ್ಲಿದ್ದ …
Read More »Yearly Archives: 2026
ಆನ್ಲೈನ್ ಗೇಮ್ನಲ್ಲಿ ಹಣ ಹೂಡಿಕೆಗೆ ಸ್ನೇಹಿತರಿಂದ ಕಿರುಕುಳ, ಕೊಲೆ ಬೆದರಿಕೆ – 13ರ ಬಾಲಕ ಆತ್ಮಹತ್ಯೆ
ದಾವಣಗೆರೆ: ಆನ್ಲೈನ್ ಗೇಮ್ನಲ್ಲಿ ಹಣ ಹೂಡಿಕೆ ಮಾಡಲು ಸ್ನೇಹಿತರು ನೀಡಿದ ನಿರಂತರ ಕಿರುಕುಳ, ಜೀವ ಬೆದರಿಕೆ ಹಾಗೂ ಹಲ್ಲೆಗೆ ಬೇಸತ್ತು 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾಲೂಕಿನ ಪಾಂಡೊಮಟ್ಟಿ ಗ್ರಾಮದಲ್ಲಿ ನಡೆದಿದೆ. ಮಾಚನಾಯಕನಹಳ್ಳಿಯ ಬಸವ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ 8ನೇ ತರಗತಿ ಓದುತ್ತಿದ್ದ ಮನೋಜ್ ಟಿ.ಆರ್. (13) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಫ್ರೀ ಫೈರ್ ಗೇಮಿಂಗ್ ಆಪ್ನಲ್ಲಿ ಹಣ ಹಾಕುವಂತೆ …
Read More »ಸಕಲ ಸರ್ಕಾರಿ ಗೌರವಗಳೊಂದಿಗೆ ನಾನಾ ಪಾಟೇಕರ್ ಅಂತ್ಯಕ್ರಿಯೆ – ಪುಣೆಯ ಸ್ವಗ್ರಾಮದಲ್ಲಿ ಅಂತಿಮ ವಿಧಿವಿಧಾನ
ಪುಣೆ: ಬಾಲಿವುಡ್ ದಿಗ್ಗಜ ನಟ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯನ್ನು ಗುರುವಾರ ಪುಣೆಯ ಗ್ರಾಮೀಣ ಭಾಗದಲ್ಲಿರುವ ಡೊಂಜೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು 75 ವರ್ಷದ ನಟ ನಾನಾ ಪಾಟೇಕರ್ ಅವರಿಂದು ಗೋವಾದಲ್ಲಿ ನಿಧನರಾಗಿದ್ದರು. ಬಳಿಕ ಅವರ ಪಾರ್ಥಿವ ಶರೀರವನ್ನ ಅಂತಿಮ ವಿಧಿವಿಧಾನಗಳಿಗಾಗಿ ಅವರ ಸ್ವಗ್ರಾಮಕ್ಕೆ ತರಲಾಯಿತು. ನಾನಾ ಪಾಟೇಕರ್ ಅವರ ನಿಧನಕ್ಕೆ ಇಡೀ ಬಾಲಿವುಡ್ ಚಿತ್ರರಂಗವೇ ಕಂಬನಿ ಮಿಡಿಯಿತು. ಅವರೊಂದಿಗೆ ಕೆಲಸ ವಿವಿಧ ಕ್ಷೇತ್ರಗಳಲ್ಲಿ ಜೊತೆಯಾಗಿದ್ದ ನಟರು, …
Read More »ಬೆಳಗಾವಿಯ ಖಡಕ್ ಅಕ್ಕ-ತಂಗಿ ಏಕಕಾಲಕ್ಕೆ ಬಿಎಸ್ಎಫ್ಗೆ: ಕುಂದಾನಗರಿ ವೀರ ವನಿತೆಯರಿಗೆ ಸಲಾಂ!
ಬೆಳಗಾವಿ: ಕಠಿಣ ತರಬೇತಿ, ಶಿಸ್ತು ಮತ್ತು ಪರಿಶ್ರಮದ ಮೂಲಕ ಬೆಳಗಾವಿ ಅಕ್ಕ-ತಂಗಿ ಒಂದೇ ಭರ್ತಿಯಲ್ಲೇ ಬಿಎಸ್ಎಫ್ಗೆ ಆಯ್ಕೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ದೇಶದ ಗಡಿ ಕಾಯುತ್ತಿದ್ದಾರೆ. ಈ ಮೂಲಕ ಹೆಣ್ಣುಮಕ್ಕಳು ಗಡಿ ಕಾವಲು ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ. ಇದು ಕೇವಲ ಅವರ ಕುಟುಂಬಕ್ಕೆ ಅಷ್ಟೇ ಅಲ್ಲದೇ ಇಡೀ ಬೆಳಗಾವಿಗೆ ಹೆಮ್ಮೆಯ ಸಂಗತಿ. ರಜೆಗೆ ಆಗಮಿಸಿದ್ದ ವೇಳೆಈ ಕುರಿತಂತೆ ಸಹೋದರಿಯರು ಮಾತನಾಡಿದ್ದಾರೆ. ಬೆಳಗಾವಿ ಖಡಕ್ ಗಲ್ಲಿಯ ಸ್ವರಾಂಜಲಿ ಜಾಧವ(25) ಮತ್ತು ಗೀತಾಂಜಲಿ …
Read More »ಪಿಡಿಒ ವರ್ಗಾವಣೆ ಮಾಡುವವರೆಗೆ ಮಂಗೇನಕೊಪ್ಪ ಗ್ರಾ.ಪಂ. ಸಿಬ್ಬಂದಿ ಅಸಹಕಾರ ಚಳುವಳಿ
ಬೆಳಗಾವಿ: ತಮಗೆ ಅನಗತ್ಯವಾಗಿ ತೊಂದರೆ ನೀಡುತ್ತಿರುವ ಗ್ರಾಪಂ ಪಿಡಿಒ ಉತ್ತಮ ಬನಸೋಡೆ ಅವರನ್ನು ಬೇರೆಡೆ ವರ್ಗಾವಣೆ ಮಾಡುವವರೆಗೆ ಗ್ರಾಮ ಪಂಚಾಯತಿಯ ದೈನಂದಿನ ಕೆಲಸಗಳಿಂದ ಹೊರಗುಳಿಯುವ ಮೂಲಕ ಅಸಹಕಾರ ಚಳುವಳಿ ನಡೆಸುವುದಾಗಿ ತಾಲ್ಲೂಕಿನ ಮಂಗೇನಕೊಪ್ಪ ಗ್ರಾಮ ಪಂಚಾಯತಿಯ ಸಿಬ್ಬಂದಿ ಗುರುವಾರ ತಾ.ಪಂ ಇ.ಒ ಅವರಿಗೆ ಪತ್ರ ನೀಡಿದ್ದಾರೆ. ತಾ.ಪಂ ಇ.ಒ ಅವರಿಗೆ ನೀಡಿರುವ ಪತ್ರದಲ್ಲಿ ತಮ್ಮ ಸಮಸ್ಯೆ ಉಲ್ಲೇಖಿಸಿರುವ ಗ್ರಾಪಂ ಸಿಬ್ಬಂದಿ, “ಮಂಗೇನಕೊಪ್ಪ ಗ್ರಾಪಂಗೆ ಈಚೆಗೆ ನಿಯುಕ್ತಿಗೊಂಡ ಪಿಡಿಒ ಉತ್ತಮ ಅವರು …
Read More »ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ
ಬೆಳಗಾವಿ: ನವೆಂಬರ್ 1ರಂದು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಹಾಗೂ ಮಾದರಿಯಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯೋತ್ಸವ ದಿನದಂದು ಲಕ್ಷಾಂತರ ಜನರು ನಗರಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರಿಗೆ …
Read More »ನಾನಾ ಪಾಟೇಕರ್ ಅವರ ಪಾರ್ಥಿವ ಶರೀರಕ್ಕೆ ಮೃಣಾಲ್ ಹೆಬ್ಬಾಳ್ಕರ್ ಅಂತಿಮ ನಮನ
ಗೋವಾ: ಖ್ಯಾತ ನಟ, ಹಿರಿಯ ಕಲಾವಿದ ದಿವಂಗತ ನಾನಾ ಪಾಟೇಕರ್ ಅವರ ಪಾರ್ಥಿವ ಶರೀರಕ್ಕೆ ಬೆಳಗಾವಿಯ ಯುವ ಕಾಂಗ್ರೆಸ್ ನಾಯಕ ಮೃಣಾಲ್ ಹೆಬ್ಬಾಳ್ಕರ್ ಅವರು ಅಂತಿಮ ನಮನ ಸಲ್ಲಿಸಿ, ಗೌರವ ಅರ್ಪಿಸಿದರು. ಗೋವಾದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿದ್ದ ನಾನಾ ಪಾಟೇಕರ್ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಮೃಣಾಲ್ ಹೆಬ್ಬಾಳ್ಕರ್ ಅವರು, ಅಗಲಿದ ಹಿರಿಯ ಕಲಾವಿದರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ನಾನಾ ಪಾಟೇಕರ್ ಅವರ ಪುತ್ರ ಮಲ್ಹಾರ್ ಪಾಟೇಕರ್ …
Read More »ಅಡವಿ ದೇವರ ಮೊರೆ ಹೋದ ಮಾವುತರು, ಕಾವಾಡಿಗರು – ದಸರಾ ನಿರ್ವಿಘ್ನವಾಗಿ ನಡೆಯಲಿ ಎಂದು ವಿಶೇಷ ಪೂಜೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಿರ್ವಿಘ್ನವಾಗಿ ನಡೆಯಲಿ ಎಂದು ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿಗರು ಅಡವಿ ದೇವರ ಮೊರೆ ಹೋಗಿದ್ದಾರೆ. ನಾಗರಹೊಳೆ ಅರಣ್ಯದಲ್ಲಿರುವ ಅಜ್ಜಯ್ಯ, ಅಜ್ಜಮ್ಮ ಹಾಗೂ ಮಾಸ್ತಮ್ಮ ದೇವರ ಗುಡಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜಂಬೂಸವಾರಿಯನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಪ್ರಾರ್ಥಿಸಿದ್ದಾರೆ. ಹುಣ್ಣಿಮೆ ದಿನದಂದು ದಸರಾ ಗಜಪಡೆಯ 12 ಆನೆಗಳ ಮಾವುತರು ಹಾಗೂ ಕಾವಾಡಿಗರು ಮೂರು ಪ್ರತ್ಯೇಕ ದೇವರ ಗುಡಿಗಳಿಗೆ ತೆರಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಹೂವು, …
Read More »ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಡಿಕೆಶಿ ಬಾಂಬ್
ನವದೆಹಲಿ: ರಾಜ್ಯ ರಾಜಕೀಯದಲ್ಲಿ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ ಎಂಬ ಚರ್ಚೆಗಳ ಬೆನ್ನಲ್ಲೇ, ಖುದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಬಳಿಗೂ ಕೆಲವರು ಜಿಎಸ್ಟಿ ಇತ್ಯಾದಿ ಬೇರೆ ಬೇರೆ ವಿಚಾರಗಳನ್ನು ಮಾತನಾಡಲು ಬಂದಿದ್ದರು. ನನ್ನಿಂದಲೇ ಈ ಸ್ಟಿಂಗ್ ಆಪರೇಷನ್ ಆರಂಭಿಸಲು ಯತ್ನಿಸಿದ್ದರು ಎಂದು ತಿಳಿಸಿದರು. ನನಗೆ …
Read More »ಬೆಂಗ್ಳೂರಿಂದ ಸಾಗರಕ್ಕೆ ತೆರಳುತ್ತಿದ್ದ ಸ್ಲೀಪರ್ ಬಸ್ಗೆ ಬೆಂಕಿ – ತಪ್ಪಿದ ಭಾರೀ ಅನಾಹುತ
ಶಿವಮೊಗ್ಗ: ಬೆಂಗಳೂರಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಹೊತ್ತಿ ಉರಿದ ಘಟನೆ ಆನಂದಪುರ ಬಳಿಯ ಮುಂಬಾಳು ಗ್ರಾಮದಲ್ಲಿ ನಡೆದಿದೆ. ಬೆಂಗಳೂರು – ಹೊನ್ನಾವರ NH-206 ಮಾರ್ಗದಲ್ಲಿ ಬಸ್ ಸಂಚರಿಸುತ್ತಿತ್ತು. ಈ ವೇಳೆ ಬಸ್ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬಸ್ ಸುಟ್ಟು ಕರಕಲಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ನಲ್ಲಿದ್ದ ಪ್ರಯಾಣಿಕರನ್ನು ಚಾಲಕ, ಹಾಗೂ ಕ್ಲೀನರ್ ತಕ್ಷಣ ಕೆಳಗಿಳಿಸಿದ್ದಾರೆ. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಹುತೇಕ ಪ್ರಯಾಣಿಕರು …
Read More »
Laxmi News 24×7