Breaking News

Yearly Archives: 2026

ಬೆಳಗಾವಿ ನಗರದ ‘ಸ್ವಚ್ಛ ಶನಿವಾರ’ ಅಭಿಯಾನಕ್ಕೆ ಜಿಪಂ ಆವರಣದಲ್ಲಿ ಚಾಲನೆ

ಬೆಳಗಾವಿ : ಜಿಲ್ಲೆಯಾದ್ಯಂತ ‘ಸ್ವಚ್ಛ ಶನಿವಾರ’ ಅಭಿಯಾನಕ್ಕೆ ಜಿಪಂ, ತಾಪಂ ಹಾಗೂ ಗ್ರಾಪಂ ವ್ಯಾಪ್ತಿಯ ವಿವಿಧ ಇಲಾಖೆಯ ಕಚೇರಿ ಆವರಣದಲ್ಲಿ  ಅಧಿಕಾರಿ, ಸಿಬ್ಬಂದಿ ವಗರ್ಷ ಸ್ವಯಂ ಪ್ರೇರಿತವಾಗಿ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಉತ್ತಮ  ಸ್ಪಂದನೆ ವ್ಯಕ್ತವಾಯಿತು. ಶನಿವಾರ ಜಿಲ್ಲೆಯಾದ್ಯಂತ ಆರಂಭಗೊಂಡ ಸ್ವಚ್ಛತಾ ಅಭಿಯಾನದಲ್ಲಿ  ಅಧಿಕಾರಿ, ಸಿಬ್ಬಂದಿ ವರ್ಗ ಕೈಯಲ್ಲಿ ಜಾಡು ಹಿಡಿದುಕೊಂಡು ಸರ್ಕಾರಿ  ಕಚೇರಿ ಪರಿಸರವನ್ನು ಸ್ವಚ್ಛಗೊಳಿಸಿದರು. ಕಚೇರಿಯ ದಾಖಲೆಗಳನ್ನು ಸಮರ್ಪಕವಾಗಿ ಜೋಡಿಸುವುದು, ನೋಟಿಸ್ ಬೋರ್ಡ್ ಸ್ವಚ್ಛತೆ, ನೀರಿನ ಟ್ಯಾಂಕ್ ನಿರ್ವಹಣೆ ಹಾಗೂ …

Read More »

ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವು

ಮಂಗಳೂರು: ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್‌ ಕುಸಿದು ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ  ಕುಂಟಿಕಾನ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ಬೆಳಲು ನಿವಾಸಿ ನೌಫಾಲ್ (28) ಸಾವನ್ನಪ್ಪಿದ್ದಾರೆ. ಇನ್‌ಸ್ಟಾ ಮಾರ್ಟ್‌ ಸಪ್ಲೈ ಪಾಯಿಂಟ್‌ನಲ್ಲಿ ದಿನಸಿ ವಸ್ತುಗಳನ್ನು ಲಿಫ್ಟ್‌ನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ದುರ್ಘಟನೆಯಾಗಿದೆ. ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಏಕಾಏಕಿ ಲಿಫ್ಟ್ ಕುಸಿದಿದೆ. ಲಿಫ್ಟ್‌ನಲ್ಲಿ ಸಿಲುಕಿ ನೌಫಾಲ್ ಸಾವಿಗೀಡಾಗಿದ್ದಾರೆ. ದುರಂತದ ದೃಶ್ಯ ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ. ಕದ್ರಿ ಪೊಲೀಸರು ಸ್ಥಳಕ್ಕೆ …

Read More »

ಕರ್ನಾಟಕ ಹೈಕೋರ್ಟ್‌ನಲ್ಲಿ ಬೃಹತ್ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ!

ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಡಿ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 93 ರಿಂದ 100 ಹುದ್ದೆಗಳು ಖಾಲಿ ಇದ್ದು, ಇದೊಂದು ಸರ್ಕಾರಿ ಮತ್ತು ಕಾಯಂ (ಶಾಶ್ವತ) ಉದ್ಯೋಗವಾಗಿದೆ. ಯಾವೆಲ್ಲಾ ಹುದ್ದೆಗಳಿವೆ ಮತ್ತು ಅರ್ಹತೆ ಏನು? ಈ ನೇಮಕಾತಿಯಡಿ ಪಿಯೋನ್ (Peon), ವಾಚ್‌ಮನ್ (Watchman), ಸ್ವೀಪರ್ (Sweeper) ಮತ್ತು …

Read More »

ಪೊಲೀಸ್ ಠಾಣೆಯಲ್ಲೇ ಪ್ರೇಮಿಗಳ ಕುಟುಂಬದ ಮಧ್ಯೆ ಗಲಾಟೆ, ಗರ್ಭಿಣಿ ಮೇಲೂ ಹಲ್ಲೆ!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಶ್ವಾಪುರ ಪೊಲೀಸ್ ಠಾಣೆಯ ಒಳಗೇ ಎರಡು ಕುಟುಂಬಗಳ ಮಧ್ಯೆ ಭೀಕರ ಗಲಾಟೆ ನಡೆದಿದ್ದು, ಪೊಲೀಸರ ಕಣ್ಣೆದುರಲ್ಲೇ ಗರ್ಭಿಣಿ ಮಹಿಳೆ ಸೇರಿದಂತೆ ಯುವಕನ ಕುಟುಂಬಸ್ಥರ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈಶ್ವರ ತಾಳಂಬರಿ ಮತ್ತು ನಿಖಿತಾ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಇವರ ಪ್ರೇಮ ಸಂಬಂಧಕ್ಕೆ ಯುವತಿ …

Read More »

ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ ಇಬ್ಬರು ಬಲಿ: ಮೈಸೂರಲ್ಲಿ ರೈತ ಮಹಿಳೆ, ಬಳ್ಳಾರಿಯಲ್ಲಿ ಯುವಕ ಸಿಡಿಲಿಗೆ ಸಾವು!

ಮೈಸೂರು: ರಾಜ್ಯಾದ್ಯಂತ ಹವಾಮಾನ ವೈಪರೀತ್ಯದ ಬೆನ್ನಲ್ಲೇ ಮಳೆರಾಯನ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇಂದು (ಮೇ.16) ಸಂಜೆ ಸಂಭವಿಸಿದ ಪ್ರತ್ಯೇಕ ಸಿಡಿಲು ಬಡಿತದ ದುರಂತಗಳಲ್ಲಿ ಓರ್ವ ರೈತ ಮಹಿಳೆ ಹಾಗೂ ಯುವಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಸಿಡಿಲು ಬಡಿದು ಆಲನಹಳ್ಳಿ ನಿವಾಸಿಯಾದ ವಿನೋದಾ ಎಂಬ ರೈತ ಮಹಿಳೆ ಮೃತಪಟ್ಟಿದ್ದಾರೆ. ಇಂದು ಸಂಜೆ ಜಮೀನಿನಲ್ಲಿ ಕಟ್ಟಿಹಾಕಿದ್ದ ಹಸುಗಳನ್ನು ಮಳೆಯಿಂದಾಗಿ ವಾಪಸ್ …

Read More »

ಬೆಂಗ್ಳೂರು – ಮೈಸೂರು ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ 26 ಲಕ್ಷ ದೋಚಿದ ಖದೀಮರು

ಮಂಡ್ಯ: ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಕಾರನ್ನು ದುಷ್ಕರ್ಮಿಗಳ ಗ್ಯಾಂಗ್‌ ಅಡ್ಡಗಟ್ಟಿ 26 ಲಕ್ಷ ರೂ. ದರೋಡೆ ಮಾಡಿದ ಘಟನೆ ಮದ್ದೂರು  ಪಟ್ಟಣದ ಹೊರ ವಲಯದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೈಸೂರಿನ  ಖಾಸಗಿ ಕಂಪನಿ ಉದ್ಯೋಗಿ ಗೋವಿಂದರಾಜು ಅವರು ತೆರಳುತ್ತಿದ್ದ ಐ-20 ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಹಣ ದೋಚಿ ಪರಾರಿಯಾಗಿದ್ದಾರೆ. ರಾತ್ರಿ 7 ಗಂಟೆ ಸುಮಾರಿಗೆ ಬೇರೆ ಕಂಪನಿಯಿಂದ ತಮ್ಮ ಕಂಪನಿಗೆ ಹಣ ವಿತರಣೆ ಮಾಡಲು ಮೈಸೂರಿನಿಂದ – ಬೆಂಗಳೂರಿಗೆ …

Read More »

ಚನ್ನಗಿರಿಯಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆ

ದಾವಣಗೆರೆ: ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ಅತಾವುಲ್ಲಾ (46) ಎಂದು ಗುರುತಿಸಲಾಗಿದೆ. ಭದ್ರಾವತಿಯ ಶೇಖ್ ದಸ್ತುಗಿರಿ, ಜಬೀವುಲ್ಲಾ ಸಹಚರರಿಂದ ಕೊಲೆ ನಡೆದಿದೆ. ಈ ಹಿಂದೆ ಇಬ್ಬರ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಕಾರಣದಿಂದಾಗಿ ದುಷ್ಕರ್ಮಿಗಳು ಶುಕ್ರವಾರ (ಮೇ 15) ತಡರಾತ್ರಿ ಏಕಾಏಕಿ ಬೈಕ್‍ನಲ್ಲಿ ಬಂದು ದಾಳಿ ನಡೆಸಿ, ಕತ್ತಿ ಹಾಗೂ ಮಚ್ಚುಗಳಿಂದ ಹಲ್ಲೆ …

Read More »

ಡಿಕೆಶಿ ಮುಂದಿನ ಸಿಎಂ ಬ್ಯಾನರ್, ಕಾರ್ಯಕರ್ತರ ಅಭಿಮಾನ ತಡಿಯೋಕೆ ಸಾಧ್ಯವಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಆದರೆ ಕಾರ್ಯಕರ್ತರ ಅಭಿಮಾನ ತಡಯೋಕೆ ಸಾಧ್ಯವಿಲ್ಲ. ಅವರಿಗೆ ನಾವು ಹೇಳಿ ಬ್ಯಾನರ್ ಹಾಕಿಸಲು ಸಾಧ್ಯಾನಾ? ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು. ಉಡುಪಿಯಲ್ಲಿ  ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಬೆಳಗಾವಿಯಲ್ಲಿ  ಅವರ ಹಾಗೂ ಪುತ್ರನ ಫೋಟೋ ಜೊತೆ ಡಿಕೆಶಿ  ಮುಂದಿನ ಸಿಎಂ ಬ್ಯಾನರ್ ರಾರಾಜಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿ, ನಾನು ಹೇಳಿ ಬ್ಯಾನರ್ ಹಾಕಿಸಲು ಸಾಧ್ಯಾನಾ? ಕಾರ್ಯಕರ್ತರ ಅಭಿಮಾನ ತಡೆಯಲು …

Read More »

ಟ್ರ‍್ಯಾಕ್ಟರ್-ಲಾರಿ ಅಪಘಾತದಲ್ಲಿ ಏಳು ಮಂದಿ ದುರ್ಮರಣ – ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಕೊಪ್ಪಳ: ಟ್ರ‍್ಯಾಕ್ಟರ್ ಮತ್ತು ಟ್ಯಾಂಕರ್ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸಿಎಂ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ ಭಕ್ತಾದಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಒಂದು ತುಂಗಭದ್ರಾ ಸೇತುವೆಯ ಮೇಲಿಂದ ಕೆಳಗೆಬಿದ್ದ ಪರಿಣಾಮ ಚಿಕ್ಕ ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.  ದುರ್ಘಟನೆಯ …

Read More »

ಮಕ್ಕಳಾಗಲಿಲ್ಲ ಅಂತ ಮನನೊಂದು ಮಹಿಳೆ ಆತ್ಮಹತ್ಯೆ ಶಂಕೆ

ಚಿಕ್ಕಬಳ್ಳಾಪುರ: ಮಕ್ಕಳಾಗಲಿಲ್ಲ ಅಂತ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ  ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿದೆ. 24 ವರ್ಷದ ರುಚಿತಾ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಚಿಕ್ಕಬಳ್ಳಾಪುರ ತಾಲೂಕಿನ ದರಬೂರು ಗ್ರಾಮದ ರುಚಿತಾಗೆ ದೊಡ್ಡಬಳ್ಳಾಪುರ  ತಾಲೂಕಿನ ವೀರಾಪುರ ಗ್ರಾಮದ ಕೇಶವ ಜೊತೆ 4 ವರ್ಷಗಳ ಹಿಂದೆ ಮದುವೆಯಾಗಿದ್ದರು. ಗಂಡ-ಹೆಂಡತಿ ನಡುವೆ ಬೇರೆ ಮನೆ ಮಾಡುವ ವಿಚಾರದಲ್ಲಿ ವೈಮನಸ್ಸು ಮಾಡಿದ್ದು, ಮಂಚನಬಲೆಯ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವೇಳೆ ಮನನೊಂದು ರುಚಿತಾ …

Read More »