ಬಿಗ್ಬಾಸ್ ಕನ್ನಡ 13ರ ಈ ಸೀಸನ್ನಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂಬ ವಿಶೇಷ ಥೀಮ್ ನೀಡಿ, ಮನುಷ್ಯನಲ್ಲಿರುವ ಎರಡು ಗುಣಗಳನ್ನು ಹೊರಹಾಕುವ ರೀತಿಯ ಟಾಸ್ಕ್ ಕೊಟ್ಟಿದ್ದರು. ಅದರಂತೆ ಗಂಧರ್ವರಾಗಿದ್ದ ಮಂಜ ರಾಕ್ಷಸರ ಆಟವನ್ನೂ ತಾಳಲಾಗದೇ ಅತಿರೇಕಕ್ಕೇರಿ ಮಾತುಗಳನ್ನು ಆಡಿದ್ದಾರೆ.
ವಾರದ ಆರಂಭದಲ್ಲಿ ಮಂಜು ನೇತೃತ್ವದ ತಂಡ ರಾಕ್ಷಸರಾಗಿ ಹಾಗೂ ಗಾನವಿ ನೇತೃತ್ವದ ತಂಡ ಗಂಧರ್ವರಾಗಿದ್ದರು. ಗಗನ್ ಚಿನ್ನಪ್ಪ, ಪ್ರಶಾಂತ್, ಜಗ್ಗಿ, ಸೌಂದರ್ಯ, ಸಂಗೀತಾ ಕೂಡ ರಾಕ್ಷಸರಾಗಿ ಅಬ್ಬರಿಸಿ, ಗಂಧರ್ವ ಲೋಕದಲ್ಲಿದ್ದ ಗಾನವಿ, ತಾಂಡವ್, ಕಾವ್ಯ, ಯಶಸ್, ಕಿರಣ್ ಶಾಸ್ತ್ರಿಗೆ ಟಾರ್ಚರ್ ನೀಡಿದ್ದರು.
ಮಂಜನ ಟಾರ್ಚರ್ಗೆ ಬೇಸತ್ತಿದ್ದ ಗಂಧರ್ವರ ತಂಡವಂತೂ ರಾಕ್ಷಸರಾಗಲು ಕಾಯ್ದು ಮಂಜನಿಗೆ ತಕ್ಷ ಶಿಕ್ಷೆ ನೀಡಲು ನಿರ್ಧರಿಸಿದ್ದರು. ಅವರಿಚ್ಛೆಯಂತೆ ಎರಡು ತಂಡಗಳು ಬದಲಾಗಿ ಗಂಧರ್ವರಾಗಿದ್ದವರು ರಾಕ್ಷಸರಾಗಿ ಹಾಗೂ ರಾಕ್ಷಸರಾಗಿದ್ದವರು ಗಂಧರ್ವರಾದರು. ಆದರೆ ಮಂಜನಿಗೆ ಟಾರ್ಚರ್ ನೀಡಲು ಸಾಧ್ಯವಾಗಲೇ ಇಲ್ಲ.
ಬಿಗ್ಬಾಸ್ ಎರಡು ತಂಡಗಳಿಗೆ ಟಾಸ್ಕ್ವೊಂದನ್ನು ನೀಡಿದ್ದರು. ಅದರಂತೆ ಗಂಧರ್ವರು ತಮ್ಮ ಬಳಿ ಇರುವ ಬಿಳಿ ಬಣ್ಣದ ಬೋರ್ಡ್ನ್ನು ಯಾವುದೇ ಬಣ್ಣ ತಾಕದಂತೆ ಕಾಪಾಡಿಕೊಳ್ಳಬೇಕಿತ್ತು. ಹಾಗೆಯೇ ರಾಕ್ಷಸರು ಗಂಧರ್ವರ ಬಳಿಯಿರುವ ಬೋರ್ಡ್ಗೆ ಸಂಪೂರ್ಣವಾಗಿ ಬಣ್ಣ ಹಚ್ಚಬೇಕು. ಅದರಂತೆ ಕೊನೆಯಲ್ಲಿ ರಾಕ್ಷಸರ ತಂಡಕ್ಕೆ ಗೆಲುವಾಗುತ್ತದೆ.
ಟಾಸ್ಕ್ನಲ್ಲಿ ಸೋತ ಗಂಧರ್ವರ ನಾಯಕ ಮಂಜ ಹಾಗೂ ಗೆದ್ದ ರಾಕ್ಷಸರ ತಂಡದ ಯಶಸ್ ನಡುವೆ ವಾಕ್ಸಮರವೇ ಏರ್ಪಟ್ಟಿತ್ತು. ಮಂಜ ರೊಚ್ಚಿಗೆದ್ದು ಮಾತನಾಡಿದ್ರೆ, ಇತ್ತ ನಿಜಕ್ಕೂ ಯಶಸ್ ಅವರನ್ನು ಇದು ಕುಗ್ಗುವಂತೆ ಮಾಡಿತ್ತು. ಗಂಧರ್ವರು ಹಾಗೂ ರಾಕ್ಷಸರ ಆಟದಲ್ಲಿ ಮಂಜ ಗಂಧರ್ವನಾಗದೇ ನಿಜಕ್ಕೂ ರಾಕ್ಷಸರಂತೆಯೇ ವರ್ತಿಸಿದ್ದಾರೆ.
Laxmi News 24×7