Breaking News

Yearly Archives: 2026

KRS ಬೃಂದಾವನದಲ್ಲಿ ಕಾವೇರಿ ಆರತಿ ಕಾರ್ಯಕ್ರಮದ ದಿನಾಂಕ ಬದಲಾವಣೆ

ಮಂಡ್ಯ: ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಕೆಆರ್‌ಎಸ್ ಬೃಂದಾವನ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ ‘ಕಾವೇರಿ ಆರತಿ’ ಕಾರ್ಯಕ್ರಮದ ದಿನಾಂಕವನ್ನ ಅನಿವಾರ್ಯ ಕಾರಣಗಳಿಂದ ಬದಲಾವಣೆ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ತಿಳಿಸಿದ್ದಾರೆ. ಈ ಮೊದಲು ಅಕ್ಟೋಬರ್ 11 ರಿಂದ 16ರ ವರೆಗೆ ನಿಗದಿಯಾಗಿದ್ದ ಕಾವೇರಿ ಆರತಿ  ಕಾರ್ಯಕ್ರಮವನ್ನ ಇದೀಗ ಅಕ್ಟೋಬರ್ 16 ರಿಂದ 21 ರವರೆಗೆ ಕೆಆರ್‌ಎಸ್ …

Read More »

ಕರ್ನಾಟಕಕ್ಕೆ ಮತ್ತೆ ಶಾಕ್‌ – 15 ದಿನ ತಮಿಳುನಾಡಿಗೆ ಹರಿಯಲಿದೆ 3 ಸಾವಿರ ಕ್ಯೂಸೆಕ್‌

ನವದೆಹಲಿ: 15 ದಿನಗಳ ಅವಧಿಗೆ ಪ್ರತಿದಿನ 3,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ  ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ  ಕರ್ನಾಟಕಕ್ಕೆ  ಆದೇಶಿಸಿದೆ. ಇಂದು ಬೆಳಗ್ಗೆ ಸಭೆ ನಡೆಸಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ  ಪ್ರತಿದಿನ 3 ಸಾವಿರ ಕ್ಯೂಸೆಕ್‌ ನಂತೆ ಒಟ್ಟು 15 ದಿನಗಳ ಕಾಲ 3.91 ಟಿಎಂಸಿ ನೀರನ್ನು ಹರಿಸುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಪಾಲಿಸುವಂತೆ  ಕರ್ನಾಟಕಕ್ಕೆ ಸೂಚಿಸಿದೆ. ರಾಜ್ಯದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಹಾಗೂ ಕೆಆರ್‌ಎಸ್, ಹೇಮಾವತಿ, …

Read More »

ಬೆಂಗ್ಳೂರಿನಿಂದ ಬೈಕ್ ಖರೀದಿಸಿ ಬೀದರ್‌ಗೆ ಬರುತ್ತಿದ್ದಾಗ ಭೀಕರ ಅಪಘಾತ – ಇಬ್ಬರು ಸ್ನೇಹಿತರು ದುರ್ಮರಣ

ಬೀದರ್: ಬೆಂಗಳೂರಿನಿಂದ ಬೈಕ್ ಖರೀದಿಸಿ ಬೀದರ್‌ಗೆ ಬರುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿ ಸ್ನೇಹಿತರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೆಲಂಗಾಣದ  ಸಂಗಾರೆಡ್ಡಿಯ 9ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೀದರ್  ತಾಲೂಕಿನ ಯರನಳ್ಳಿ ಗ್ರಾಮದ ಸಾಯಿಕಿರಣ ಜೀತಪ್ಪ ಜೋಶಿ (25) ಮತ್ತು ನಾಗೇಶ್ ಮಾಣಿಪ್ಪ ಅಣ್ಣಾ (24) ಸಾವನಪ್ಪಿದ ಇಬ್ಬರು ಸ್ನೇಹಿತರು ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಇಬ್ಬರು ಸ್ನೇಹಿತರು ಬೈಕ್‌ವೊಂದನ್ನು ಖರೀದಿಸಿ, ಬೀದರ್‌ಗೆ ಬರುತ್ತಿದ್ದರು. ಈ ವೇಳೆ ಲಾರಿಯೊಂದು ವೇಗವಾಗಿ ಬಂದು ಡಿಕ್ಕಿ …

Read More »

ಸ್ಟಿಂಗ್ ಆಪರೇಷನ್ ಬಗ್ಗೆ ಯಾರಿಗೆ ಹೆಚ್ಚು ಜ್ಞಾನ ಇದೆ ಅನ್ನೋದು ಜಗತ್ತಿಗೆ ಗೊತ್ತಿದೆ: ನಿಖಿಲ್

ಹಾಸನ: ಸ್ಟಿಂಗ್ ಆಪರೇಷನ್  ಬಗ್ಗೆ ಯಾರಿಗೆ ಹೆಚ್ಚು ಜ್ಞಾನ ಇದೆ ಅನ್ನೋದು ಜಗತ್ತಿಗೆ ಗೊತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲೆ, ಚನ್ನರಾಯಪಟ್ಟಣದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದ ಒಳಗೆ ಯರ‍್ಯಾರು ಸ್ಟಿಂಗ್‌ನ ಬಗ್ಗೆ ಸ್ವಪಕ್ಷದ ಹಿರಿಯ ಸಚಿವರು, ಬಹಳಷ್ಟು ಬಾರಿ ವಿಧಾನಸೌಧದ ಮೆಟ್ಟಿಲನ್ನು ಹತ್ತಿರುವವರು ಆತಂಕ ವ್ಯಕ್ತಪಡಿಸಿರುವುದನ್ನು ನೋಡಿದ್ದೀರಿ. ಸದನದ ಒಳಗೆ ರೆಕಾರ್ಡ್ ಇದೆ. ಇದನ್ನು ಜನಕ್ಕೆ ಬಿಟ್ಟು ಬಿಡೋಣ ಎಂದರು. …

Read More »

ಭಾರತೀಯರ ಮತಗಳನ್ನು ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ: ಸಿಎಂ ಡಿಕೆಶಿ

ನವದೆಹಲಿ: ಬಾಂಗ್ಲಾದೇಶ ಹಾಗೂ ಬೇರೆಡೆಗಳಿಂದ ಬಂದು ಜನರು ಇಲ್ಲಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ದೇಶದ ಗಡಿಯಲ್ಲಿ ಬಾಂಗ್ಲಾದೇಶದಿಂದ ನುಸುಳಿಕೋರರನ್ನು ತಡೆಗಟ್ಟುವುದು ಕೇಂದ್ರ ಸರ್ಕಾರದ ಕರ್ತವ್ಯವಲ್ಲವೇ? ಹೀಗಾಗಿ ಭಾರತೀಯರ ಮತಗಳನ್ನು ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ  ಕರ್ತವ್ಯ ಎಂದು ಸಿಎಂ ಡಿಕೆ ಶಿವಕುಮಾರ್  ಅವರು ಹೇಳಿದ್ದಾರೆ. ನವದೆಹಲಿಯಲ್ಲಿ ಎಸ್‌ಐಆರ್ (SIR) ಬಗ್ಗೆ ಮಾತನಾಡಿದ ಅವರು, ಬಿಜೆಪಿಯ ಸಂಸದರು ಹಾಗೂ ಶಾಸಕರು, ನಾವು ಬಾಂಗ್ಲಾದೇಶದವರನ್ನು ಮತಪಟ್ಟಿಯಿಂದ ತೆಗೆಯಲು ಅರ್ಜಿ ಸಲ್ಲಿಸಿದ್ದೇವೆ ಎಂದಿದ್ದಾರೆ. …

Read More »

ಅಡುಗೆ ಎಣ್ಣೆ ಮರುಬಳಕೆ ವಿರುದ್ಧ ಶೀಘ್ರ ಕ್ರಮ: ಯು.ಟಿ.ಖಾದರ್

ತುಮಕೂರು: ಅಡುಗೆ ಎಣ್ಣೆ ಮರುಬಳಕೆ ದಂಧೆಗೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್  ಹೇಳಿದ್ದಾರೆ. ಡಿಹೆಚ್‌ಓ ಕಚೇರಿಯಲ್ಲಿ ಆರೋಗ್ಯ ಇಲಾಖೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಟೆಲ್‌ಗಳಲ್ಲಿ ಅಡುಗೆ ಎಣ್ಣೆ ಮರುಬಳಕೆ ದಂಧೆ ನಡೆಯುತ್ತಿದೆ. ಇದನ್ನು ಬ್ಯಾನ್ ಮಾಡುವ ಯೋಚನೆ ಇದೆ. ಎಣ್ಣೆಯನ್ನು ಎಲ್ಲಿ ಖರೀದಿಸುತ್ತಾರೋ ಅಲ್ಲಿಯೇ ನೋಂದಣಿ ಮಾಡಬೇಕಾಗುತ್ತದೆ. ಇದಕ್ಕಾಗಿ ಒಂದು ಆ್ಯಪ್‌ನಲ್ಲಿ ನಮೂದು ಮಾಡುವಂತೆ ಚಿಂತನೆ ನಡೆಸಲಾಗಿದೆ. ಬಳಕೆ ಮಾಡಿದ …

Read More »

ರೇಣುಕಾಸ್ವಾಮಿ ಕೊಲೆ ಕೇಸ್‌ | ಮದ್ವೆಯಾದ ಖುಷಿಯಲ್ಲಿದ್ದ ಚಿಕ್ಕಣ್ಣಗೆ ಶಾಕ್‌ – ಇಬ್ಬರು ನಟರಿಗೆ ಕೋರ್ಟ್ ಸಮನ್ಸ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ  ಹಾಗೂ ನಟ ಯಶಸ್ ಸೂರ್ಯ ಅವರಿಗೆ 59ನೇ ಸಿಸಿಹೆಚ್ ಕೋರ್ಟ್  ಸಮನ್ಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ಇಬ್ಬರು ನಟರು, ಕೊಲೆಗೂ ಮುನ್ನ ಆರೋಪಿ ದರ್ಶನ್  ಭಾಗಿಯಾಗಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆ ಸಾಕ್ಷ್ಯ ಹೇಳಲು ನ್ಯಾಯಾಲಯ ಸಮನ್ಸ್ ನೀಡಿದೆ. ಪ್ರಕರಣದ ವಿಚಾರಣೆಯನ್ನ ನಡೆಸುತ್ತಿರುವ 59ನೇ ಸಿಸಿಹೆಚ್ ಕೋರ್ಟ್, ಅಕ್ಟೋಬರ್ 13ರಂದು ವಿಚಾರಣೆಗೆ ಹಾಜರಾಗುವಂತೆ ಇಬ್ಬರು ನಟರಿಗೆ ಸಮನ್ಸ್‌ ಜಾರಿಗೊಳಿಸಿದೆ. …

Read More »

SSLC – ದ್ವಿತೀಯ ಪಿಯುಸಿ ಪರೀಕ್ಷೆ – 1, 2 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ – ಆಕ್ಷೇಪಣೆಗೆ 15 ದಿನ ಅವಕಾಶ

ಬೆಂಗಳೂರು: ಮುಂಬರುವ ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿ ಪಬ್ಲಿಕ್ ಪರೀಕ್ಷೆ-1  ಮತ್ತು ಪರೀಕ್ಷೆ 2ರ ತಾತ್ಕಾಲಿಕ ವೇಳಾಪಟ್ಟಿಯನ್ನ ಕರ್ನಾಟಕ ಪರೀಕ್ಷಾ ಮಂಡಳಿ ಬಿಡುಗಡೆಗೊಳಿಸಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನ ಪ್ರಕಟ ಮಾಡಿದ್ದು, ಅಕ್ಟೋಬರ್ 22 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-1, 2 ಪರೀಕ್ಷೆಗಳನ್ನ 2027 ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆ – 1 …

Read More »

ಕ್ಯಾನ್ಸರ್‌ ಔಷಧಗಳ ಬೆಲೆ 70% ಇಳಿಕೆ ಸಾಧ್ಯತೆ; ಸರ್ಕಾರದ ಮುಂದಿದೆ ಹೊಸ ಪ್ರಸ್ತಾವನೆ!

ನವದೆಹಲಿ: ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಹಲವು ಔಷಧಗಳ  ಬೆಲೆ ಶೇ.70ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಗರಿಷ್ಠ ಚಿಲ್ಲರೆ ಬೆಲೆ (MRP) ಮೇಲೆ ನಿಗದಿತ ವ್ಯಾಪಾರ ಮಾರ್ಜಿನ್‌ಗೆ ಶೇ.30ರ ಮಿತಿ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಇದು ಸಾಧ್ಯವಾದರೆ ಕ್ಯಾನ್ಸರ್‌ ಔಷಧಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ನಿಗದಿತ ಬೆಲೆ ನಿಯಂತ್ರಣದ ವ್ಯಾಪ್ತಿಗೆ ಬಾರದ  ಕ್ಯಾನ್ಸರ್‌ ಔಷಧಗಳಿಗೆ ಈ ಮಿತಿಯನ್ನ ಅನ್ವಯಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ದುಬಾರಿ ಕ್ಯಾನ್ಸರ್‌ ಔಷಧಗಳನ್ನ ಕೈಗೆಟುಕುವ ದರದಲ್ಲಿ …

Read More »

ಅಮೆರಿಕದಲ್ಲಿನ ಭಾರತೀಯ ಐಟಿ ಕಂಪನಿಗಳಿಗೆ ಶಾಕ್ – ಗ್ರೀನ್‌ಕಾರ್ಡ್‌ ಯೋಜನೆಯಿಂದ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಸಸ್ಪೆಂಡ್‌

ವಾಷಿಂಗ್ಟನ್: ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸ  ಪಡೆಯುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ, ಅಮೆರಿಕದ ಕಾರ್ಮಿಕ ಇಲಾಖೆ  ಭಾರತೀಯ ಟೆಕ್‌ ದೈತ್ಯ ಕಂಪನಿಗಳಿಗೆ ಶಾಕ್‌ ಕೊಟ್ಟಿದೆ. ಇನ್ಫೋಸಿಸ್ , ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳನ್ನು ಗ್ರೀನ್‌ ಕಾರ್ಡ್‌ ಯೋಜನೆಯಿಂದ ಅಮಾನತುಗೊಳಿಸಿದೆ. ಹೌದು. ಐಟಿ ಹೊರಗುತ್ತಿಗೆ ಕಂಪನಿಗಳನ್ನ ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮದಿಂದ  ಅಮಾನತುಗೊಳಿಸಿದೆ. ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೋ, ಎಚ್‌ಸಿಎಲ್, ಕ್ಯಾಪ್‌ಜೆಮಿನಿ ಹಾಗೂ …

Read More »