Breaking News

Yearly Archives: 2026

ರಸ್ತೆಬದಿ ಸಸಿ ಕಿತ್ತಿದ್ದಕ್ಕೆ ರೈತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ

ರಾಯಚೂರು: ರಸ್ತೆ ಬದಿಯ ಸಸಿಗಳನ್ನು ಕಿತ್ತು ಹಾಕಿದ್ದಾನೆ ಅಂತ ರೈತನ ಮೇಲೆ ಅರಣ್ಯ ಇಲಾಖೆಯ  ಅಧಿಕಾರಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಯಚೂರು  ಜಿಲ್ಲೆಯ ಮಸ್ಕಿತಾಲೂಕಿನ ಯರದೊಡ್ಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸಸಿ ಹಚ್ಚಲು ಬಿಟ್ಟಿಲ್ಲಾ, ಹಚ್ಚಿದ ಸಸಿಗಳನ್ನ ಕಿತ್ತಿದ್ದಾನೆ ಅಂತ ರೈತ ರಮೇಶ ಮೇಲೆ ಹಲ್ಲೆ ಮಾಡಲಾಗಿದೆ. ಯರದೊಡ್ಡಿ ಗ್ರಾಮದ ಸರ್ವೆ ನಂ 29ರ ಜಮೀನಿನ ರಸ್ತೆ ಬದಿಯಲ್ಲಿ ಸಸಿ ಹಚ್ಚುವ ವಿಚಾರಕ್ಕೆ …

Read More »

ಇನ್ಶೂರೆನ್ಸ್ ಹಣದ ಆಸೆಗೆ ಪತಿಯನ್ನೇ ಕೊಂದ ಪತ್ನಿ – ಮೂವರು ಅರೆಸ್ಟ್‌

ಕೊಪ್ಪಳ: ಮನೆ ನಿರ್ಮಾಣಕ್ಕೆ ಮಾಡಿದ್ದ ಸಾಲ ಮನ್ನಾ ಆಗುತ್ತದೆ ಹಾಗೂ ವಿಮೆ ಹಣ ಕೈ ಸೇರುತ್ತದೆ ಎಂಬ ತಪ್ಪು ಮಾಹಿತಿ ನಂಬಿ ಪತ್ನಿಯೇ ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಕಾರಟಗಿ ತಾಲೂಕಿನ ಮುಸ್ಟೂರು ಕ್ಯಾಂಪ್‌ನಲ್ಲಿ ನಡೆದಿದೆ. ಕಾರಟಗಿ ತಾಲೂಕಿನ ಮುಸ್ಟೂರು ಕ್ಯಾಂಪ್ ನಿವಾಸಿ ರಾಘವೇಂದ್ರ ಹನುಮಂತಪ್ಪ ಸಾಳುಂಕೆ (38) ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಉಮಾ, ಆಕೆಯ ಸಂಬಂಧಿ ಶಿವಾಜಿ ಹಾಗೂ ಶಿವಾಜಿಯ ಸ್ನೇಹಿತ ಖಲೀಲ್‌ನನ್ನು ಗಂಗಾವತಿ …

Read More »

ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್! ಮೊಬೈಲ್ ಟಾರ್ಚ್ ಬೆಳಕಲ್ಲೇ ರಾತ್ರಿ ಕಳೆದ ಬಾಣಂತಿಯರು, ಹಸುಗೂಸುಗಳು

ಬಳ್ಳಾರಿ: ಸರ್ಕಾರಿ ಆಸ್ಪತ್ರೆ ಅಂದರೆ ಬಡ ರೋಗಿಗಳಿಗೆ ಸಂಜೀವಿನಿ ಆಗಬೇಕು. ಆದರೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಇಲ್ಲದೆ ಬಾಣಂತಿಯರು, ನವಜಾತ ಶಿಶುಗಳು ಮೊಬೈಲ್ ಟಾರ್ಚ್​ನಲ್ಲಿ ಇಡೀ ರಾತ್ರಿ ಕಳೆಯುವಂತಾಗಿದೆ. ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಟಾರ್ಚ್ ಬೆಳಕೆ ಆಸರೆ; ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಪೋಷಕರು ಆಕ್ರೋಶ  ಬಳ್ಳಾರಿ ಜಿಲ್ಲೆಯ …

Read More »

ಇಂದು ಈ 3 ಗಿಡ ನೆಡಿ; ತಲೆಮಾರುಗಳಿಂದ ಬಂದ ಪಿತೃದೋಷದಿಂದ ಮುಕ್ತಿ ಪಡೆಯುವಿರಿ

ಹಿಂದೂ ಧರ್ಮದಲ್ಲಿ, ಪಿತೃ ಪಕ್ಷದ ಅಮಾವಾಸ್ಯೆಯ ದಿನವು ವಿಶೇಷ ಮಹತ್ವವನ್ನು ಹೊಂದಿದೆ ಮತ್ತು ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಪವಿತ್ರ ದಿನದಂದು, ಎಲ್ಲಾ ಪೂರ್ವಜರ ಶ್ರಾದ್ಧವನ್ನು ಒಟ್ಟಾಗಿ ಆಚರಿಸುವ ಮೂಲಕ ಅವರಿಗೆ ವಿದಾಯ ಹೇಳಲಾಗುತ್ತದೆ. ಯಾವುದೇ ಕಾರಣದಿಂದಾಗಿ, ತಮ್ಮ ಪೂರ್ವಜರಿಗೆ ಆಯಾ ನಿರ್ದಿಷ್ಟ ದಿನಾಂಕಗಳಲ್ಲಿ ಶ್ರಾದ್ಧ ಮಾಡಲು ಸಾಧ್ಯವಾಗದವರು, ಈ ಶುಭ ದಿನದಂದು ತಮ್ಮ ಎಲ್ಲಾ ಪಿತೃಗಳಿಗೆ ಒಟ್ಟಾಗಿ ತರ್ಪಣ ಹಾಗೂ ಶ್ರಾದ್ಧ ಕಾರ್ಯಗಳನ್ನು ನೆರವೇರಿಸುತ್ತಾರೆ. …

Read More »

ರೈಲಿನಲ್ಲಿ ʻನನ್ನ ಸುತ್ತಲೂ ಪುರುಷರೇ ಇದ್ದಾರೆʼ ಎಂದು ಕೊನೆಯ ಮೆಸೇಜ್‌ ಕಳಿಸಿದ್ದ ಅಸ್ಸಾಂ ಡ್ಯಾನ್ಸರ್‌ ಶವವಾಗಿ ಪತ್ತೆ

ಅಮರಾವತಿ: ರೈಲಿನಲ್ಲಿ  ‘ನನ್ನ ಸುತ್ತಲೂ ಪುರುಷರೇ ಇದ್ದಾರೆ’ ಎಂದು ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಕೊನೆಯ ಮೆಸೇಜ್‌ ಕಳಿಸಿದ್ದ ಅಸ್ಸಾಂನ  ಡ್ಯಾನ್ಸರ್‌ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಅಸ್ಸಾಂನ ಕಾಮರೂಪ್ ಜಿಲ್ಲೆಯ 20 ವರ್ಷದ ಯುವತಿ ವಿಶಾಖಪಟ್ಟಣದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಕಾರ್ಯಕ್ರಮ ಮುಗಿಸಿ, ಅ.10 ರಂದು ಗುವಾಹಟಿಯಲ್ಲಿ ಬ್ಯಾಂಕ್ ಪರೀಕ್ಷೆ ಇದ್ದಿದ್ದರಿಂದ ಮನೆಗೆ ಮರಳಲು ನಿರ್ಧರಿಸಿದ್ದಳು. ‘ದಿಬ್ರುಗಢ್ ವಿವೇಕ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ವಾಪಸ್‌ ಆಗುವಾಗ ನಾಪತ್ತೆಯಾಗಿದ್ದಳು. ಆಕೆಯ ಶವ …

Read More »

ಅಕ್ರಮವಾಗಿ ಸಂಗ್ರಹಿಸಿದ್ದ 150 ನಾಡಬಾಂಬ್, ಬಂದೂಕು ವಶ – 35 ವರ್ಷದ ವ್ಯಕ್ತಿಯ ಬಂಧನ

ಚಿಕ್ಕಬಳ್ಳಾಪುರ: ಜಿಲ್ಲೆಯ ​ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 150ಕ್ಕೂ ಹೆಚ್ಚು ನಾಡಬಾಂಬ್‌ಗಳು  ಹಾಗೂ ನಾಡಬಂದೂಕೊಂದನ್ನ ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 35 ವರ್ಷದ ನರಸಿಂಹಪ್ಪ ಎಂಬ ವ್ಯಕ್ತಿಯನ್ನ ಬಟ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ ಖಚಿತ ಮಾಹಿತಿ ಆಧರಿಸಿ ಬಟ್ಲಹಳ್ಳಿ ಪೊಲೀಸರು  ದಾಳಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 150 ನಾಡಬಾಂಬ್‌ಗಳು ಹಾಗೂ ಒಂದು ನಾಡಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯು ಇಷ್ಟೊಂದು …

Read More »

ಕಂಟ್ರೋಲ್‌ ರೂಮ್‌ಗೆ 50 ಲಕ್ಷ, ಎಐ ವ್ಯವಸ್ಥೆಗೆ 12 ಲಕ್ಷ – ಹಾಸನಾಂಬೆ ಖರ್ಚು ಲೆಕ್ಕ ಕೇಳಿ ತಲೆಚಚ್ಚಿಕೊಂಡ ಸಚಿವ ಶಿವಲಿಂಗೇಗೌಡ

ಹಾಸನ: ಇದೇ ಅ.29 ರಿಂದ ನ.11 ರವರೆಗೆ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ  ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ  ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ಕುರಿತು ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು. ಇದೇ ವೇಳೆ ಹಾಸನಾಂಬೆಯ ಖರ್ಚು-ವೆಚ್ಚ ಕೇಳಿ ಸಚಿವ ಶಿವಲಿಂಗೇಗೌಡ ತಲೆ ಚಚ್ಚಿಕೊಂಡಿದ್ದಾರೆ. ಇದೊಳ್ಳೆ ಹುಚ್ಚರ ಸಂತೆ ಕಾಮಗಾರಿಗಳಿಗೆ ಮೀಸಲಿಟ್ಟಿರುವ ಹಣದ ಮೊತ್ತದ ಬಗ್ಗೆ ಮಾಹಿತಿ ಪಡೆಯುತ್ತಿದ್ದ …

Read More »

ರಾಂಚಿಯಲ್ಲಿ ರನ್‌ ಮಳೆ – ಭಾರತಕ್ಕೆ ಹೀನಾಯ ಸೋಲು; ವಿಂಡೀಸ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ

ರಾಂಚಿ: ಆರಂಭದಲ್ಲಿ ಪ್ರಮುಖ ವಿಕೆಟ್‌ ಕಳೆದುಕೊಂಡರೂ ಪುಟಿದೆದ್ದ ವಿಂಡೀಸ್‌ ತಂಡ ಸಿಕ್ಸರ್‌ – ಬೌಂಡರಿಗಳ ಮಳೆ ಸುರಿಸಿ ಭಾರತದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ನಾಯಕ ಶಾಯ್‌ ಹೋಪ್‌ ಮತ್ತೊಮ್ಮೆ ಟೀಂ ಇಂಡಿಯಾ ವಿರುದ್ಧ ಅಜೇಯ ಶತಕ ಸಿಡಿಸುವ ಮೂಲಕ ವಿಂಡೀಸ್‌ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಕಳಪೆ ಬೌಲಿಂಗ್‌ನಿಂದ ರನ್‌ ತಡೆಯುವಲ್ಲಿ ವಿಫಲವಾದ ಟೀಂ ಇಂಡಿಯಾ, ಎದುರಾಳಿಗಳ ಅಬ್ಬರಕ್ಕೆ ಕಡಿವಾಣ ಹಾಕಲಾಗದೆ ಹೀನಾಯ ಸೋಲು …

Read More »

ಪ್ರಜಾಪ್ರಭುತ್ವ ಉಳಿಸೋ ನಿಟ್ಟಿನಲ್ಲಿ ಹೋರಾಟ, ಒಂದು ಮತವನ್ನೂ ಕಿತ್ತಾಕೋಕೆ ಬಿಲ್ಲ – ದಿಲ್ಲಿಯಲ್ಲಿ ಡಿಕೆಶಿ ಗುಡುಗು

ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ನಾನು ಅಕ್ರಮ ಬಯಲಿಗೆ ತಂದಿದ್ದೇನೆ, ಒಂದೇ ಒಂದು ಮತವನ್ನೂ ತೆಗೆದು ಹಾಕಲು ಬಿಡಲ್ಲ ಎಂದು ಸಿಎಂ ಡಿಕೆ ಶಿವಕುಮಾರ್‌  ತಿಳಿಸಿದರು. ದೆಹಲಿಯಲ್ಲಿ ಇಂಡಿ ಒಕ್ಕೂಟದ ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಈ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಹೇಳಿದೆ, ನಾವು ಈ ರೀತಿ ಅನುಮತಿ ಕೊಟ್ಟಿಲ್ಲ ಅಂತ. ಮತದಾನದ ಹಕ್ಕನ್ನು …

Read More »

6 ಮನೆಗಳಲ್ಲಿ ಕಳ್ಳತನ ಕೇಸ್ ಭೇದಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ: ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಬೆಳಗಾವಿ ಗ್ರಾಮೀಣ ಪೊಲೀಸರು, ಆರೋಪಿಯೊಬ್ಬನನ್ನು ಬಂಧಿಸಿ ಬರೋಬ್ಬರಿ ₹26.53 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ಟೋಬರ್ 2ರಂದು ಸ್ವಾಮಿ ವಿವೇಕಾನಂದ ನಗರ, ಹುಂಚ್ಯಾನಟ್ಟಿ ನಿವಾಸಿ ಲಕ್ಷ್ಮೀ ಸಿದ್ರಾಮ ರಾಮಣ್ಣವರ ಅವರು ತಮ್ಮ ಮನೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. …

Read More »