Breaking News

Yearly Archives: 2026

ರಾಜ್ಯದಲ್ಲಿ ಅಂಗನವಾಡಿಗಳಿಗೆ ಕಳಪೆಯ ಆಹಾರ ಪೂರೈಕೆ, ತಹಶೀಲ್ದಾರ್ ಮಲ್ಲೇಶ್ ನೇತೃತ್ವದಲ್ಲಿ FSSI ಅಧಿಕಾರಿಗಳ ತಂಡದಿಂದ ರಿಯಾಲಿಟಿ ಚೆಕ್.

ಅಂಗನವಾಡಿಯಲ್ಲಿ ಕಳಪೆ ಆಹಾರ ವಿತರಣೆ ವರದಿ ಮಾಡ್ತಿದ್ದಂತೆ ಎಚ್ಚತ್ತ ಅಧಿಕಾರಿಗಳು.. ರಿಯಾಲಿಟಿ ಚೆಕ್ ಮಾಡ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ FSSI ಅಧಿಕಾರಿ, ರಿಯಾಲಿಟಿ ಚೆಕ್ ಬಗ್ಗೆ ತಹಶೀಲ್ದಾರ್ ಮಲ್ಲೇಶ್ ಅವರಿಗೆ ಮಾಹಿತಿ, ಫುಡ್ ಸೇಫ್ಟಿ ಆಫೀಸರ್ ನಾಗೇಶ್ ಹಾಗೂ ಎಸಿಡಿಪಿಓ ನಾಗೇಶ್ ಸ್ಥಳಕ್ಕೆ ಭೇಟಿ, ಪರಿಶೀಲನೆ..! ಹುಳು, ಕಸ ಮಿಶ್ರಿತ ಅಕ್ಕಿಯ ಮೂಟೆಗಳು, ಆಹಾರ ಪದಾರ್ಥಗಳ ಗುಣಮಟ್ಟ ನೋಡಿ ಅಧಿಕಾರಿಗಳೇ ಶಾಕ್, ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ವಿತರಿಸುವ ಆಹಾರ ಪದಾರ್ಥಗಳು.. …

Read More »

ಬೆಳಗಾವಿ ಜೆಎನ್‌ಎಂಸಿ ಆವರಣದಲ್ಲಿ ತಂಬಾಕು ನಿಯಂತ್ರಣ ಕೋಶದ ‘ಸರ್ಜಿಕಲ್ ಸ್ಟ್ರೈಕ್’: 40 ಪ್ರಕರಣ ದಾಖಲು!

ಬೆಳಗಾವಿಯ ಜೆಎನ್‌ಎಂಸಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿವೆ. ಕೋಟ್ಪಾ (COTPA) ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಗುಡುಗಿರುವ ಅಧಿಕಾರಿಗಳು, ಸ್ಥಳದಲ್ಲೇ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ನಗರದ ಜೆಎನ್‌ಎಂಸಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಇಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕೋಟ್ಪಾ-2003 ಕಾಯ್ದೆಯಡಿ ದಿಢೀರ್ ದಾಳಿ ನಡೆಸಲಾಯಿತು. ಜಿಲ್ಲಾ ಜಾರಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ …

Read More »

ಸಾವಿನಲ್ಲಿಯೂ ಒಂದಾದ ಗಂಡ, ಹೆಂಡತಿ,ಬೆಳಗಾವಿ ಜಿಲ್ಲೆಯಲ್ಲಿ ಹ್ರದಯವಿದ್ರಾವಕ ಘಟನೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಮನಸ್ಸು ಕಲುಕುವ ದಾರುಣ ಘಟನೆ ಸಂಭವಿಸಿದ್ದು, ಪತಿ, ಪತ್ನಿ ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ. ಮಧುರಾ ಕರೆಪ್ಪ ಮಾದರ (30) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೊಂದೆಡೆ, ಪತ್ನಿಯ ಸಾವಿನ ಸುದ್ದಿ ತಿಳಿದು ಆತಂಕಗೊಂಡ ಅವರ ಪತಿ ಕರೆಪ್ಪ …

Read More »

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಆರ್ಭಟ – ಆರೋಗ್ಯ ಇಲಾಖೆ ಅಲರ್ಟ್

ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ಭಾರೀ ಹೆಚ್ಚಳವಾಗಿದೆ. ದಿನೇ ದಿನೇ ಸೂರ್ಯನ ತಾಪ ಹೆಚ್ಚಾಗುತ್ತಿದ್ದು, ಜನರು ಹೊರಗೆ ಓಡಾಡುವುದೇ ಕಷ್ಟವಾಗಿದೆ. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಅಲರ್ಟ್‌  ಆಗಿದ್ದು, ಪ್ರತ್ಯೇಕ ವಾರ್ಡ್ ಆರಂಭ ಮಾಡಿದೆ. ಯಾದಗಿರಿ  ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ  ಹೆಚ್ಚಾಗಿದೆ. ಸುಡುಬಿಸಿಲಿಗೆ ಜನರು ಮಧ್ಯಾಹ್ನದಿಂದ ಸಂಜೆವರಗೆ ಹೆಚ್ಚಿನ ಪ್ರಮಾಣದಲ್ಲಿ ಓಡಾಡದಂತಾಗಿದೆ. ಸೂರ್ಯನ ತಾಪಕ್ಕೆ ನವಜಾತ ಶಿಶುಗಳಿಗೆ ನಿರ್ಜಲೀಕರಣ ಸಮಸ್ಯೆ ಹಾಗೂ ವಯಸ್ಕರಿಗೆ ಕೂಡ ಅನಾರೋಗ್ಯ ಉಂಟಾಗುತ್ತಿದೆ. …

Read More »

ನಾನು ಇದಕ್ಕಿಂತಲೂ ಕಠಿಣ ಟ್ರಕ್ಕಿಂಗ್‌ನಲ್ಲಿ ಭಾಗಿಯಾಗಿದ್ದೆ, ದಾರಿ ತಪ್ಪಿ ಕಾಡಿನಲ್ಲಿ ಸಿಲುಕಿದ್ದೆ: ಶರಣ್ಯ

ಮಡಿಕೇರಿ: ನಾನು ಇದಕ್ಕಿಂತಲೂ ಕಠಿಣ ಟ್ರಕ್ಕಿಂಗ್‌ನಲ್ಲಿ ಭಾಗಿಯಾಗಿದ್ದೆ. ಈ ಬಾರಿ ದಾರಿ ತಪ್ಪಿ ಕಾಡಿನಲ್ಲಿ ಸಿಲುಕಿದ್ದೆ ಎಂದು ಕೇರಳದ ಮಹಿಳೆ ಶರಣ್ಯ (35) ಹೇಳಿದ್ದಾರೆ. ಅವರು ತಡಿಯಂಡಮೋಳ್ ಬೆಟ್ಟದಲ್ಲಿ  ಗುರುವಾರ (ಏ.2) ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದರು. ಭಾನುವಾರ (ಏ.5) ಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಳಿಕ ಅವರು ಮಾತನಾಡಿದರು. ಈ ವೇಳೆ, ನನ್ನ ಬಳಿ 500 ಎಂ.ಎಲ್ ನೀರು ಮಾತ್ರ ಇತ್ತು. ಇಂದು ಎತ್ತರ ಪ್ರದೇಶದ ಕಡೆ ಹೊರಟಿದ್ದೆ. ನನ್ನ ಫೋನ್ …

Read More »

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (KSOU) 2026ನೇ ಸಾಲಿನ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಪ್ರತಿಷ್ಠಿತ ಕುಲಪತಿ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮೈಸೂರಿನಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಶಿಕ್ಷಣ ತಜ್ಞರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿಯು ಕರ್ನಾಟಕ ಸರ್ಕಾರದ ಮಾನದಂಡಗಳ ಅನ್ವಯ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ಮತ್ತು ಸೌಲಭ್ಯಗಳನ್ನು ನೀಡಲಾಗುತ್ತದೆ. ಅರ್ಹತೆ ಮತ್ತು ಅರ್ಜಿ …

Read More »

ರಾಂಪೂರದಲ್ಲಿ ಚರಂತಿಮಠ ಪರ ಬಿಜೆಪಿ-ಜೆಡಿಎಸ್ ಶಕ್ತಿ ಪ್ರದರ್ಶನ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಬಾಗಲಕೋಟೆ: ಉಪಚುನಾವಣೆ ಹಿನ್ನೆಲೆಯಲ್ಲಿ ರಾಂಪೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠರ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಾರ್ವಜನಿಕ ಸಭೆಯಲ್ಲಿ ಮತಯಾಚನೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಚರಂತಿಮಠರು ಭಾರೀ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಣ, ಹೆಂಡ ಮತ್ತು ಜಾತಿ ಆಧಾರಿತ ರಾಜಕಾರಣಕ್ಕೆ ಜನರು ತಲೆಬಾಗುವುದಿಲ್ಲ; ಬದಲಾವಣೆಯ ಪರ ಜನರು ತೀರ್ಮಾನಿಸಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ಹಲವು ಜನಪರ …

Read More »

ಗೌರವ ಡಾಕ್ಟರೇಟ್ ನಿರಾಕರಿಸಿದ ಬಸವರಾಜ ಬೊಮ್ಮಾಯಿ

ಹಾವೇರಿ: ಹಾವೇರಿ ವಿಶ್ವವಿದ್ಯಾಲಯವು  ತಮಗೆ ನೀಡಲು ನಿರ್ಧರಿಸಿದ್ದ ಗೌರವ ಡಾಕ್ಟರೇಟ್  ಅನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ  ಅವರು ವಿನಮ್ರವಾಗಿ ನಿರಾಕರಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕ ಸೇವೆಯಲ್ಲಿರುವ ತಮಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ಅತಿ ದೊಡ್ಡ ಪ್ರಶಸ್ತಿ ಎಂದು ಹೇಳಿಕೊಂಡಿದ್ದಾರೆ. ತಮ್ಮ ಸಿಂಡಿಕೇಟ್ ಸಭೆಯಲ್ಲಿ ತಮಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಬೊಮ್ಮಾಯಿ …

Read More »

ನೂರಕ್ಕೆ ನೂರರಷ್ಟು ಸಮರ್ಥ್‌ ಗೆಲ್ಲಿಸುವ ಕೆಲಸ ಮಾಡ್ತೀನಿ: ಜಮೀರ್ ಅಹ್ಮದ್

ದಾವಣಗೆರೆ: ಇಲ್ಲಿನ ದಕ್ಷಿಣ ಕ್ಷೇತ್ರದ  ಉಪಚುನಾವಣೆಯಲ್ಲಿ  ಕಾಂಗ್ರೆಸ್‌  ಅಭ್ಯರ್ಥಿ ಸಮರ್ಥ್‌ ಶಾಮನೂರು  ಅವರನ್ನು ನೂರಕ್ಕೆ ನೂರರಷ್ಟು ಗೆಲ್ಲಿಸುವ ಕೆಲಸ ಮಾಡ್ತೀನಿ ಎಂದು ಜಮೀರ್ ಅಹ್ಮದ್  ಹೇಳಿದ್ದಾರೆ. ದಾವಣಗೆರೆಯಲ್ಲಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್‌ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾನು ಕೇರಳದಲ್ಲಿ ಸ್ಟಾರ್ ಪ್ರಚಾರಕನಾಗಿದ್ದೆ. ಹತ್ತು ಕ್ಷೇತ್ರ ಕೊಟ್ಟಿದ್ದರು. ಇಂದು (ಏ.5) ಇಲ್ಲಿಗೆ ಬರುತ್ತೇನೆ ಎಂದು ಹೇಳಿದ್ದೆ. ದಾವಣಗೆರೆಗೆ ಬಂದಿದ್ದೇನೆ ಸಮರ್ಥ್ ಗೆಲ್ಲಿಸಿಕೊಂಡು ಹೋಗುತ್ತೇನೆ. ನೂರಕ್ಕೆ ನೂರರಷ್ಟು ಸಮರ್ಥ್ ಗೆಲ್ಲಿಸುವ ಕೆಲಸ ಮಾಡುತ್ತೇನೆ …

Read More »

ಸಿದ್ದಗಂಗಾ ಮಠದಲ್ಲಿ 119 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ

ತುಮಕೂರು: ಸಿದ್ದಗಂಗಾ ಮಠದಲ್ಲಿ ಇಂದು (ಏ.5) ನಾಮಕರಣ ಮಹೋತ್ಸವ ನಡೆಯಿತು. 119 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಯಿತು. ಶಿವಕುಮಾರ ಶ್ರೀಗಳ ದಾಸೋಹ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಂಡು ಮಕ್ಕಳಿಗೆ ಶಿವಕುಮಾರ ಅಂತಲೂ, ಹೆಣ್ಣು ಮಕ್ಕಳಿಗೆ ಶಿವಾನಿ ಅಂತಲೂ ನಾಮಕರಣ ಮಾಡಲಾಯಿತು. ಪ್ರತಿ ಮಕ್ಕಳಿಗೆ ಒಂದು ತೊಟ್ಟಿಲು, ಬಟ್ಟೆ, ಮಾಸ್ಕಿಟೋ ಕಾಯಿಲ್, ಹಾಸಿಗೆ ದಿಂಬು ಉಚಿತವಾಗಿ ವಿತರಣೆ ಮಾಡಲಾಯಿತು. ಮಕ್ಕಳೊಂದಿಗೆ ಬಂದ ದಂಪತಿ ಶಿವಕುಮಾರ ಶ್ರೀಗಳ ನಾಮಸ್ಮರಣೆ …

Read More »