Breaking News

Monthly Archives: ಅಕ್ಟೋಬರ್ 2026

SSLC – ದ್ವಿತೀಯ ಪಿಯುಸಿ ಪರೀಕ್ಷೆ – 1, 2 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ – ಆಕ್ಷೇಪಣೆಗೆ 15 ದಿನ ಅವಕಾಶ

ಬೆಂಗಳೂರು: ಮುಂಬರುವ ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿ ಪಬ್ಲಿಕ್ ಪರೀಕ್ಷೆ-1  ಮತ್ತು ಪರೀಕ್ಷೆ 2ರ ತಾತ್ಕಾಲಿಕ ವೇಳಾಪಟ್ಟಿಯನ್ನ ಕರ್ನಾಟಕ ಪರೀಕ್ಷಾ ಮಂಡಳಿ ಬಿಡುಗಡೆಗೊಳಿಸಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನ ಪ್ರಕಟ ಮಾಡಿದ್ದು, ಅಕ್ಟೋಬರ್ 22 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-1, 2 ಪರೀಕ್ಷೆಗಳನ್ನ 2027 ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆ – 1 …

Read More »

ಕ್ಯಾನ್ಸರ್‌ ಔಷಧಗಳ ಬೆಲೆ 70% ಇಳಿಕೆ ಸಾಧ್ಯತೆ; ಸರ್ಕಾರದ ಮುಂದಿದೆ ಹೊಸ ಪ್ರಸ್ತಾವನೆ!

ನವದೆಹಲಿ: ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಹಲವು ಔಷಧಗಳ  ಬೆಲೆ ಶೇ.70ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಗರಿಷ್ಠ ಚಿಲ್ಲರೆ ಬೆಲೆ (MRP) ಮೇಲೆ ನಿಗದಿತ ವ್ಯಾಪಾರ ಮಾರ್ಜಿನ್‌ಗೆ ಶೇ.30ರ ಮಿತಿ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಇದು ಸಾಧ್ಯವಾದರೆ ಕ್ಯಾನ್ಸರ್‌ ಔಷಧಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ನಿಗದಿತ ಬೆಲೆ ನಿಯಂತ್ರಣದ ವ್ಯಾಪ್ತಿಗೆ ಬಾರದ  ಕ್ಯಾನ್ಸರ್‌ ಔಷಧಗಳಿಗೆ ಈ ಮಿತಿಯನ್ನ ಅನ್ವಯಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ದುಬಾರಿ ಕ್ಯಾನ್ಸರ್‌ ಔಷಧಗಳನ್ನ ಕೈಗೆಟುಕುವ ದರದಲ್ಲಿ …

Read More »

ಅಮೆರಿಕದಲ್ಲಿನ ಭಾರತೀಯ ಐಟಿ ಕಂಪನಿಗಳಿಗೆ ಶಾಕ್ – ಗ್ರೀನ್‌ಕಾರ್ಡ್‌ ಯೋಜನೆಯಿಂದ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಸಸ್ಪೆಂಡ್‌

ವಾಷಿಂಗ್ಟನ್: ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸ  ಪಡೆಯುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ, ಅಮೆರಿಕದ ಕಾರ್ಮಿಕ ಇಲಾಖೆ  ಭಾರತೀಯ ಟೆಕ್‌ ದೈತ್ಯ ಕಂಪನಿಗಳಿಗೆ ಶಾಕ್‌ ಕೊಟ್ಟಿದೆ. ಇನ್ಫೋಸಿಸ್ , ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳನ್ನು ಗ್ರೀನ್‌ ಕಾರ್ಡ್‌ ಯೋಜನೆಯಿಂದ ಅಮಾನತುಗೊಳಿಸಿದೆ. ಹೌದು. ಐಟಿ ಹೊರಗುತ್ತಿಗೆ ಕಂಪನಿಗಳನ್ನ ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮದಿಂದ  ಅಮಾನತುಗೊಳಿಸಿದೆ. ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೋ, ಎಚ್‌ಸಿಎಲ್, ಕ್ಯಾಪ್‌ಜೆಮಿನಿ ಹಾಗೂ …

Read More »

ಗಂಧರ್ವನಾದ್ರೂ ರಾಕ್ಷಸನಂತೆ ವರ್ತಿಸಿದ ಮಹಾಕವಿ – ರಣರಂಗದಲ್ಲಿ ಯಶಸ್‌, ಮಂಜ… ನಿಲ್ಲದ ವಾಕ್ಸಮರ

ಬಿಗ್‌ಬಾಸ್‌ ಕನ್ನಡ 13ರ  ಈ ಸೀಸನ್‌ನಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂಬ ವಿಶೇಷ ಥೀಮ್‌ ನೀಡಿ, ಮನುಷ್ಯನಲ್ಲಿರುವ ಎರಡು ಗುಣಗಳನ್ನು ಹೊರಹಾಕುವ ರೀತಿಯ ಟಾಸ್ಕ್‌ ಕೊಟ್ಟಿದ್ದರು. ಅದರಂತೆ ಗಂಧರ್ವರಾಗಿದ್ದ ಮಂಜ ರಾಕ್ಷಸರ ಆಟವನ್ನೂ ತಾಳಲಾಗದೇ ಅತಿರೇಕಕ್ಕೇರಿ ಮಾತುಗಳನ್ನು ಆಡಿದ್ದಾರೆ. ವಾರದ ಆರಂಭದಲ್ಲಿ ಮಂಜು ನೇತೃತ್ವದ ತಂಡ ರಾಕ್ಷಸರಾಗಿ ಹಾಗೂ ಗಾನವಿ ನೇತೃತ್ವದ ತಂಡ ಗಂಧರ್ವರಾಗಿದ್ದರು. ಗಗನ್‌ ಚಿನ್ನಪ್ಪ, ಪ್ರಶಾಂತ್‌, ಜಗ್ಗಿ, ಸೌಂದರ್ಯ, ಸಂಗೀತಾ ಕೂಡ ರಾಕ್ಷಸರಾಗಿ ಅಬ್ಬರಿಸಿ, ಗಂಧರ್ವ ಲೋಕದಲ್ಲಿದ್ದ …

Read More »

ಆನ್‌ಲೈನ್‌ ಗೇಮ್‌ನಲ್ಲಿ ಹಣ ಹೂಡಿಕೆಗೆ ಸ್ನೇಹಿತರಿಂದ ಕಿರುಕುಳ, ಕೊಲೆ ಬೆದರಿಕೆ – 13ರ ಬಾಲಕ ಆತ್ಮಹತ್ಯೆ

ದಾವಣಗೆರೆ: ಆನ್‌ಲೈನ್ ಗೇಮ್‌ನಲ್ಲಿ ಹಣ ಹೂಡಿಕೆ ಮಾಡಲು ಸ್ನೇಹಿತರು ನೀಡಿದ ನಿರಂತರ ಕಿರುಕುಳ, ಜೀವ ಬೆದರಿಕೆ ಹಾಗೂ ಹಲ್ಲೆಗೆ ಬೇಸತ್ತು 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾಲೂಕಿನ ಪಾಂಡೊಮಟ್ಟಿ ಗ್ರಾಮದಲ್ಲಿ ನಡೆದಿದೆ. ಮಾಚನಾಯಕನಹಳ್ಳಿಯ ಬಸವ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ 8ನೇ ತರಗತಿ ಓದುತ್ತಿದ್ದ ಮನೋಜ್ ಟಿ.ಆರ್. (13) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಫ್ರೀ ಫೈರ್ ಗೇಮಿಂಗ್ ಆಪ್‌ನಲ್ಲಿ ಹಣ ಹಾಕುವಂತೆ …

Read More »

ಸಕಲ ಸರ್ಕಾರಿ ಗೌರವಗಳೊಂದಿಗೆ ನಾನಾ ಪಾಟೇಕರ್‌ ಅಂತ್ಯಕ್ರಿಯೆ – ಪುಣೆಯ ಸ್ವಗ್ರಾಮದಲ್ಲಿ ಅಂತಿಮ ವಿಧಿವಿಧಾನ

ಪುಣೆ: ಬಾಲಿವುಡ್‌ ದಿಗ್ಗಜ ನಟ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯನ್ನು ಗುರುವಾರ ಪುಣೆಯ ಗ್ರಾಮೀಣ ಭಾಗದಲ್ಲಿರುವ ಡೊಂಜೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು 75 ವರ್ಷದ ನಟ ನಾನಾ ಪಾಟೇಕರ್ ಅವರಿಂದು ಗೋವಾದಲ್ಲಿ ನಿಧನರಾಗಿದ್ದರು. ಬಳಿಕ ಅವರ ಪಾರ್ಥಿವ ಶರೀರವನ್ನ ಅಂತಿಮ ವಿಧಿವಿಧಾನಗಳಿಗಾಗಿ ಅವರ ಸ್ವಗ್ರಾಮಕ್ಕೆ ತರಲಾಯಿತು. ನಾನಾ ಪಾಟೇಕರ್ ಅವರ ನಿಧನಕ್ಕೆ ಇಡೀ ಬಾಲಿವುಡ್‌ ಚಿತ್ರರಂಗವೇ ಕಂಬನಿ ಮಿಡಿಯಿತು. ಅವರೊಂದಿಗೆ ಕೆಲಸ ವಿವಿಧ ಕ್ಷೇತ್ರಗಳಲ್ಲಿ ಜೊತೆಯಾಗಿದ್ದ ನಟರು, …

Read More »

ಬೆಳಗಾವಿಯ ಖಡಕ್ ಅಕ್ಕ-ತಂಗಿ ಏಕಕಾಲಕ್ಕೆ ಬಿಎಸ್ಎಫ್​ಗೆ: ಕುಂದಾನಗರಿ ವೀರ ವನಿತೆಯರಿಗೆ ಸಲಾಂ!

ಬೆಳಗಾವಿ: ಕಠಿಣ ತರಬೇತಿ, ಶಿಸ್ತು ಮತ್ತು ಪರಿಶ್ರಮದ ಮೂಲಕ ಬೆಳಗಾವಿ ಅಕ್ಕ-ತಂಗಿ ಒಂದೇ ಭರ್ತಿಯಲ್ಲೇ ಬಿಎಸ್ಎಫ್‌ಗೆ ಆಯ್ಕೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ದೇಶದ ಗಡಿ ಕಾಯುತ್ತಿದ್ದಾರೆ. ಈ ಮೂಲಕ ಹೆಣ್ಣುಮಕ್ಕಳು ಗಡಿ ಕಾವಲು ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ. ಇದು ಕೇವಲ ಅವರ ಕುಟುಂಬಕ್ಕೆ ಅಷ್ಟೇ ಅಲ್ಲದೇ ಇಡೀ ಬೆಳಗಾವಿಗೆ ಹೆಮ್ಮೆಯ ಸಂಗತಿ. ರಜೆಗೆ ಆಗಮಿಸಿದ್ದ ವೇಳೆಈ ಕುರಿತಂತೆ ಸಹೋದರಿಯರು ಮಾತನಾಡಿದ್ದಾರೆ. ಬೆಳಗಾವಿ ಖಡಕ್ ಗಲ್ಲಿಯ ಸ್ವರಾಂಜಲಿ ಜಾಧವ(25) ಮತ್ತು ಗೀತಾಂಜಲಿ …

Read More »

ಪಿಡಿಒ ವರ್ಗಾವಣೆ ಮಾಡುವವರೆಗೆ ಮಂಗೇನಕೊಪ್ಪ ಗ್ರಾ.ಪಂ. ಸಿಬ್ಬಂದಿ ಅಸಹಕಾರ ಚಳುವಳಿ

ಬೆಳಗಾವಿ: ತಮಗೆ ಅನಗತ್ಯವಾಗಿ ತೊಂದರೆ ನೀಡುತ್ತಿರುವ ಗ್ರಾಪಂ ಪಿಡಿಒ ಉತ್ತಮ ಬನಸೋಡೆ ಅವರನ್ನು ಬೇರೆಡೆ ವರ್ಗಾವಣೆ ಮಾಡುವವರೆಗೆ ಗ್ರಾಮ ಪಂಚಾಯತಿಯ ದೈನಂದಿನ ಕೆಲಸಗಳಿಂದ ಹೊರಗುಳಿಯುವ ಮೂಲಕ ಅಸಹಕಾರ ಚಳುವಳಿ ನಡೆಸುವುದಾಗಿ ತಾಲ್ಲೂಕಿನ ಮಂಗೇನಕೊಪ್ಪ ಗ್ರಾಮ ಪಂಚಾಯತಿಯ ಸಿಬ್ಬಂದಿ ಗುರುವಾರ ತಾ.ಪಂ ಇ.ಒ ಅವರಿಗೆ ಪತ್ರ ನೀಡಿದ್ದಾರೆ. ತಾ.ಪಂ ಇ.ಒ ಅವರಿಗೆ ನೀಡಿರುವ ಪತ್ರದಲ್ಲಿ ತಮ್ಮ ಸಮಸ್ಯೆ ಉಲ್ಲೇಖಿಸಿರುವ ಗ್ರಾಪಂ ಸಿಬ್ಬಂದಿ, “ಮಂಗೇನಕೊಪ್ಪ ಗ್ರಾಪಂಗೆ ಈಚೆಗೆ ನಿಯುಕ್ತಿಗೊಂಡ ಪಿಡಿಒ ಉತ್ತಮ ಅವರು …

Read More »

ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ

ಬೆಳಗಾವಿ: ನವೆಂಬರ್‌ 1ರಂದು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಹಾಗೂ ಮಾದರಿಯಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯೋತ್ಸವ ದಿನದಂದು ಲಕ್ಷಾಂತರ ಜನರು ನಗರಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರಿಗೆ …

Read More »

ನಾನಾ ಪಾಟೇಕರ್ ಅವರ ಪಾರ್ಥಿವ ಶರೀರಕ್ಕೆ ಮೃಣಾಲ್ ಹೆಬ್ಬಾಳ್ಕರ್ ಅಂತಿಮ ನಮನ

ಗೋವಾ: ಖ್ಯಾತ ನಟ, ಹಿರಿಯ ಕಲಾವಿದ ದಿವಂಗತ ನಾನಾ ಪಾಟೇಕರ್ ಅವರ ಪಾರ್ಥಿವ ಶರೀರಕ್ಕೆ ಬೆಳಗಾವಿಯ ಯುವ ಕಾಂಗ್ರೆಸ್ ನಾಯಕ ಮೃಣಾಲ್ ಹೆಬ್ಬಾಳ್ಕರ್ ಅವರು ಅಂತಿಮ ನಮನ ಸಲ್ಲಿಸಿ, ಗೌರವ ಅರ್ಪಿಸಿದರು. ಗೋವಾದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿದ್ದ ನಾನಾ ಪಾಟೇಕರ್ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಮೃಣಾಲ್ ಹೆಬ್ಬಾಳ್ಕರ್ ಅವರು, ಅಗಲಿದ ಹಿರಿಯ ಕಲಾವಿದರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ನಾನಾ ಪಾಟೇಕರ್ ಅವರ ಪುತ್ರ ಮಲ್ಹಾರ್ ಪಾಟೇಕರ್ …

Read More »