Breaking News

ಪ್ರತಿ ಪ್ರಯಾಣಿಕನಿಗೆ 3.5 ರಿಂದ 4.4 ಲಕ್ಷ ರೂ. ಟಿಕೆಟ್ ದರ; ರಾಜವೈಭವದ ಸುವರ್ಣ ರಥ ಮತ್ತೆ ಸಂಚಾರ‌

Spread the love

ಬೆಂಗಳೂರು: ರಾಜವೈಭವದ ಸುವರ್ಣ ರಥ ಮತ್ತೆ ಸಂಚಾರ ಆರಂಭಿಸಿದೆ. ಪ್ರವಾಸೋದ್ಯಮ ಇಲಾಖೆಯ ಈ ವಿಶೇಷ ರೈಲಿಗೆ ಸಿಎಂ ಡಿ.ಕೆ.ಶಿವಕುಮಾರ್‌  ಮತ್ತು ರೈಲ್ವೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದ್ದಾರೆ.

ಹೊಸ ರೂಪದ ಗೋಲ್ಡನ್‌ ಚಾರಿಯೆಟ್‌ ರೈಲು ಇದಾಗಿದೆ. ಪ್ರತಿ ಪ್ರಯಾಣಿಕರಿಗೆ 3.5 ಲಕ್ಷ ರಿಂದ 4.4 ಲಕ್ಷದವರೆಗೆ ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಮೊದಲ ಪ್ರಯಾಣದ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಕರ್ನಾಟಕದ ಹೆಮ್ಮೆಯ ಹಾಗೂ ಪ್ರಮುಖ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯೆಟ್’ ಇದಾಗಿದೆ. 2026-27ರ ಹೊಸ ಪ್ರವಾಸದ ಸರಣಿ ಇಂದು ಆರಂಭಗೊಂಡಿದೆ. ಬೆಳಗ್ಗೆ 11 ಗಂಟೆಗೆ ರೈಲು ಪ್ರಯಾಣ ಆರಂಭಿಸಿದೆ.

ಐದು ರಾತ್ರಿ ಮತ್ತು ಆರು ದಿನಗಳ ‘ಪ್ರೈಡ್ ಆಫ್ ಕರ್ನಾಟಕ’ ಪ್ರಯಾಣ ಇರಲಿದೆ. ಇಡೀ‌ ರೈಲಿನಲ್ಲಿ ಒಟ್ಟು 75 ಜನ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬಹುದು. ರೈಲಿನೊಳಗೆ ಜಿಮ್, ಬಾರ್, ಸ್ಪಾ, ಬೆಡ್ ರೂಮ್ ಸೇರಿದಂತೆ ಮೂರು ರೆಸ್ಟೋರೆಂಟ್‌ಗಳ ವ್ಯವಸ್ಥೆ ಇರಲಿದೆ.

ಬೆಂಗಳೂರಿನಿಂದ ಹೊರಟು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮೈಸೂರು, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಮತ್ತು ಗೋವಾಕ್ಕೆ ಗೋಲ್ಡನ್ ಚಾರಿಯೆಟ್ ಪ್ರವಾಸ ಮಾಡಲಿದೆ. ಐದು ರಾತ್ರಿ, ಆರು ಹಗಲು ದಿನಗಳ ಕಾಲ ಪ್ರವಾಸವಿದೆ.

ರೈಲಿಗೊಳಗೆ 13 ಡಬಲ್ ಬೆಡ್ ಕ್ಯಾಬಿನ್‌, 26 ಟ್ವಿನ್ ಬೆಡ್ ಕ್ಯಾಬಿನ್‌ ಹಾಗೂ ವಿಶೇಷ ಚೇತನರಿಗಾಗಿ ಒಂದು ವಿಶೇಷ ಕ್ಯಾಬಿನ್ ವ್ಯವಸ್ಥೆ ಇದೆ. ಸೀಟುಗಳ ಹೊಸ ಪೀಠೋಪಕರಣಗಳು, ಮರದ ಮೇಲ್ಮೈಗಳಿಗೆ ಪಾಲಿಶ್, ಉನ್ನತ ದರ್ಜೆಯ ಹಾಸಿಗೆ, ಹೊದಿಕೆ ಹಾಗೂ ಆಧುನಿಕ ಶೈಲಿಯ ಬಾತ್‌ರೂಮ್ ಸೌಲಭ್ಯಗಳು ರೈಲಿನ ಸೌಂದರ್ಯವನ್ನು ಹೆಚ್ಚಿಸಿವೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿ ಬೋಗಿಯಲ್ಲೂ ಸಿಸಿಟಿವಿ ಕ್ಯಾಮೆರಾ, ಸುಧಾರಿತ ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ವೃತ್ತಿಪರ ಆತಿಥ್ಯ ಸಿಗಲಿದೆ.


Spread the love

About Laxminews 24x7

Check Also

ಬೆಳಗಾವಿ | ಫುಟ್‌ಪಾತ್‌ ತೆರವಿಗೆ ಹೋಗಿದ್ದ ಪಾಲಿಕೆ ಎಂಜಿನಿಯರ್‌ ಮೇಲೆ ಹಲ್ಲೆ – ಸ್ಥಳದಲ್ಲಿ ಬಿಗುವಿನ ವಾತಾವರಣ

Spread the loveಬೆಳಗಾವಿ: ಫುಟ್‌ಪಾತ್‌  ತೆರವಿಗೆ ಹೋಗಿದ್ದ ಪಾಲಿಕೆ ಎಂಜಿನಿಯರ್‌  ಮೇಲೆ 40ಕ್ಕೂ ಹೆಚ್ಚು ಜನರ ಗುಂಪು ಹಲ್ಲೆ ನಡೆಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ