Breaking News

ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ – 22 ದಿನದಲ್ಲಿ 3.46 ಕೋಟಿ ಸಂಗ್ರಹ

Spread the love

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಅಕ್ಟೋಬರ್ ತಿಂಗಳಿನ 22 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾ 22 ದಿನದಲ್ಲಿ 3,46,53,864 ರೂ. ಕಾಣಿಕೆ ಸಂಗ್ರಹವಾಗಿದೆ. ಪ್ರತೀ ತಿಂಗಳಿನಂತೆ ಈ ಬಾರಿಯೂ ಭಕ್ತರ ದಂಡು ಮಠಕ್ಕೆ ಹರಿದು ಬಂದಿದ್ದು, ಭಾರೀ ಪ್ರಮಾಣದ ಕಾಣಿಕೆ ಸಂಗ್ರವಾಗಿದೆ.

ಗುರುರಾಘವೇದ್ರ ಸ್ವಾಮಿ ಮಠಕ್ಕೆ 22 ದಿನಗಳಲ್ಲೇ 3 ಕೋಟಿ 46 ಲಕ್ಷ 53,864 ರೂ. ಕಾಣಿಕೆ ಹರಿದು ಬಂದಿದ್ದು, ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3,36,41,364 ರೂ. ಕರೆನ್ಸಿ ನೋಟುಗಳು. 10,12,500 ರೂ. ನಾಣ್ಯಗಳು ಸಂಗ್ರಹವಾಗಿವೆ. 42 ಗ್ರಾಂ ಚಿನ್ನ, 645 ಗ್ರಾಂ ಬೆಳ್ಳಿಯನ್ನ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ.ಣೆ

ಮಂತ್ರಾಲಯ ರಾಯರ ಮಠದಲ್ಲಿ ಅತೀ ಭದ್ರತೆಯಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳು, ಶ್ರೀಮಠದ ಅಧಿಕಾರಿಗಳು ಹುಂಡಿ ಎಣಿಕೆ ವೇಳೆ ಹಾಜರಿದ್ದರು.


Spread the love

About Laxminews 24x7

Check Also

ಬೆಳಗಾವಿ | ಫುಟ್‌ಪಾತ್‌ ತೆರವಿಗೆ ಹೋಗಿದ್ದ ಪಾಲಿಕೆ ಎಂಜಿನಿಯರ್‌ ಮೇಲೆ ಹಲ್ಲೆ – ಸ್ಥಳದಲ್ಲಿ ಬಿಗುವಿನ ವಾತಾವರಣ

Spread the loveಬೆಳಗಾವಿ: ಫುಟ್‌ಪಾತ್‌  ತೆರವಿಗೆ ಹೋಗಿದ್ದ ಪಾಲಿಕೆ ಎಂಜಿನಿಯರ್‌  ಮೇಲೆ 40ಕ್ಕೂ ಹೆಚ್ಚು ಜನರ ಗುಂಪು ಹಲ್ಲೆ ನಡೆಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ