ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಖಾನಾಪೂರ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ “ಗುರು ಶಿಕ್ಷಕ ನಮನ-ರಕ್ತದಾನ, ಜೀವದಾನ” ಎಂಬ ಸಂದೇಶದೊಂದಿಗೆ ಖಾನಾಪೂರ ಪಟ್ಟಣ ಪಂಚಾಯತಿಯ ಮಂಗಲ ಕಾರ್ಯಾಲಯ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ನಂದಗಡದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಖಾನಾಪೂರ ಮತಕ್ಷೇತ್ರದ ಶಾಸಕರಾದ ವಿಠ್ಠಲ ಹಲಗೇಕರ ಅವರು ಶಿಬಿರಕ್ಕೆ ಚಾಲನೆ ನೀಡಿ ರಕ್ತದಾನಿಗಳಿಗೆ ಪ್ರೋತ್ಸಾಹ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿ–ಸಿಬ್ಬಂದಿ, …
Read More »Monthly Archives: ಸೆಪ್ಟೆಂಬರ್ 2026
ಅಧರ್ಮದ ನಡುವೆ ಧರ್ಮದ ಉದಯವೇ ಶ್ರೀ ಕೃಷ್ಣನ ಆಗಮನ: ಡಾ. ಮಹೇಶ್ ವಾಘಣ್ಣವರ
ಬೆಳಗಾವಿ: ಶ್ರೀ ಕೃಷ್ಣನ ಜನ್ಮವನ್ನು ಕೇವಲ ಒಂದು ಪೌರಾಣಿಕ ಘಟನೆ ಎಂದು ನೋಡುವುದಕ್ಕಿಂತ, ಅಧರ್ಮದ ನಡುವೆ ಧರ್ಮದ ಉದಯ ಎಂಬ ಅರ್ಥದಲ್ಲಿ ನೋಡುವುದು ಸೂಕ್ತ ಎಂದು ವೈದ್ಯರಾದ ಡಾ. ಮಹೇಶ್ ವಾಘಣ್ಣವರ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು …
Read More »ಹಗರಣದ ಹಣದಲ್ಲಿ 5 ಕೋಟಿ ಮೌಲ್ಯದ ಕೃಷಿ ಭೂಮಿ ಖರೀದಿಸಿದ್ದ ಕನ್ನಾಳೆ
ಬೀದರ್: ಕೆಪಿಎಸ್ಸಿ ಪಶುವೈದ್ಯಕೀಯ ನೇಮಕಾತಿ ಹಗರಣ ಕೇಸಲ್ಲಿ ಕಿಂಗ್ಪಿನ್ ಬಸವರಾಜ್ ಕನ್ನಾಳೆ ಕರ್ಮಕಾಂಡ ಬಗೆದಷ್ಟೂ ಬಯಲಾಗುತ್ತಿದೆ. ಕೆಪಿಎಸ್ಸಿ ಹಗರಣದಲ್ಲಿ ಬಂದ ಕೋಟಿ ಕೋಟಿ ಹಣದಿಂದಲೇ ಕನ್ನಾಳೆ ಕೃಷಿ ಭೂಮಿ ಖರೀದಿ ಮಾಡಿದ್ದ ಅನ್ನೋ ಮಾಹಿತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಹೌದು. ಕನ್ನಾಳೆ ಒಂದು ವರ್ಷದ ಹಿಂದೆಯೇ ಸುಮಾರು 5 ಕೋಟಿ ಮೌಲ್ಯದ 20 ಕೃಷಿ ಭೂಮಿ ಖರೀದಿ ಮಾಡಿದ್ದ ಎಂದು ತನಿಖಾ ಮೂಲಗಳು ಬಹಿರಂಗಪಡಿಸಿವೆ. ಪ್ರತಿ ಎಕರೆಗೆ ಸುಮಾರು 25 …
Read More »ತಮಿಳುನಾಡಿಗೆ ನಿರಂತರ ನೀರು – ಮೂರೇ ದಿನದಲ್ಲಿ 3 ಅಡಿ ಕುಸಿದ ಕೆಆರ್ಎಸ್ ಡ್ಯಾಮ್ ನೀರಿನ ಮಟ್ಟ
ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಇದರಿಂದ ಕಾವೇರಿ ಕೊಳ್ಳದ (ಜಲಾಶಯಗಳು ವೇಗವಾಗಿ ಬರಿದಾಗುತ್ತಿವೆ. ಮಳೆ ಸಂಪೂರ್ಣ ಕೈಕೊಟ್ಟಿರುವ ನಡುವೆಯೂ ಹೊರಹರಿವು ದಿನೇ ದಿನೆ ಏರಿಕೆಯಾಗುತ್ತಿರುವುದು ಈ ಭಾಗದ ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ಹರಿಸಬೇಕಾದ ಬಹುಪಾಲು ನೀರನ್ನು ಕೆಆರ್ಎಸ್ ಡ್ಯಾಂನಿಂದಲೇ ಬಿಡಲಾಗುತ್ತಿದೆ. ಪ್ರಸ್ತುತ ಕೆಆರ್ಎಸ್ನಿಂದ ನದಿಗೆ …
Read More »ಪರಪ್ಪನ ಅಗ್ರಹಾರ ಜೈಲು ವಾರ್ಡರ್ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನ – ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಕೃತ್ಯ ಆರೋಪ
ಬೆಂಗಳೂರು: ಕರ್ತವ್ಯನಿರತ ಜೈಲು ವಾರ್ಡರ್ ಮೇಲೆ ಜೈಲುವಾಸಿಗಳು ಮನಸೋ ಇಚ್ಛೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವ ಘಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ. ಮಂಜುನಾಥ ಹವೇಲಿ ಹಲ್ಲೆಗೊಳಗಾದ ಜೈಲು ವೀಕ್ಷಕ. ಸೆ. 2ರಂದು ಬೆಳಿಗ್ಗೆ 11:30ರ ಸುಮಾರಿಗೆ ಘಟನೆ ನಡೆದಿದ್ದು, ಮಂಗಳೂರಿನ ಭಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಕೊಲೆ ಪ್ರಕರಣದ ಕೈದಿಗಳು ಈ ಕೃತ್ಯವೆಸಗಿದ್ದಾರೆ. ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫ್ಘಾನ್, ಮೊಹಮ್ಮದ್ ರಿಜ್ವಾನ್, ನಯಾಜ್, ಕಲಂದರ್ ಶಫಿಯಿಂದ ಕೊಲೆ …
Read More »ಚಿನ್ನ ಅಡವಿಟ್ಟುಕೊಂಡು ವಂಚನೆ, ನೂರಾರು ಜನಕ್ಕೆ ನಾಮ – ಮೈಸೂರಿನಲ್ಲಿ ಮತ್ತೊಬ್ಬ `ಗೋಲ್ಡ್ ವಂಚಕ’
ಮೈಸೂರು: ಚಿನ್ನದ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ ಮಾಡಿದ ಸರಣಿ ಅಪರಾಧ ಮೈಸೂರಿನಲ್ಲಿ ಮುಂದುವರಿದಿದೆ. ಚಿನ್ನತಂಬಿ, ಮೋಹನ್ಲಾಲ್ ಬಳಿಕ ಈಗ ಯೋಗೇಶ್ ಎಂಬುವವನ ಸರದಿ. ಧನಲಕ್ಷ್ಮಿ ಗೋಲ್ಡ್ ಕಂಪನಿ ಮಾಲೀಕ ಯೋಗೇಶ್ ನೂರಾರು ಗ್ರಾಹಕರಿಗೆ ಪಂಗನಾಮ ಹಾಕಿದ್ದಾನೆ. ನೂರಕ್ಕೂ ಹೆಚ್ಚು ಜನರಿಂದ ಚಿನ್ನ ಅಡವಿಟ್ಟುಕೊಂಡು ಮೋಸ ಮಾಡಿರುವ ಆರೋಪ ಯೋಗೇಶ್ ಮೇಲೆ ಬಂದಿದೆ. ಅಡವಿಟ್ಟ ಚಿನ್ನವನ್ನ ವಾಪಸ್ ಕೊಡದೇ ಸತಾಯಿಸುತ್ತಿದ್ದಾನೆ. ಕಳೆದ 1 ವರ್ಷದಿಂದಲೂ ಗ್ರಾಹಕರಿಗೆ ಯೋಗೇಶ್ ಮೋಸ ಮಾಡುತ್ತಲೇ ಬಂದಿದ್ದಾನೆ. …
Read More »ರೇಣುಕಾಸ್ವಾಮಿ ಹತ್ಯೆ ಕೇಸ್ – ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಪ್ರಮುಖ ಆರೋಪಿಗೆ ಜಾಮೀನು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಪ್ರಮುಖ ಆರೋಪಿ ಉಡುಪಿ ಮೂಲದ ಗೌರವ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಬಂಧನ ಭೀತಿ ಹಿನ್ನಲೆ ನಿರೀಕ್ಷಣಾ ಜಾಮೀನಿಗೆ ಗೌರವ್ ಶೆಟ್ಟಿ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ವಿಚಾರಣೆ ನಡೆಸಿದ 59 ಸಿಸಿಹೆಚ್ ಕೋರ್ಟ್, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸಾಕ್ಷಿದಾರ ಸಂದೀಪ್ಗೆ ವಾಟ್ಸಪ್ ಕರೆ ಮೂಲಕ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ಸುಹಾಸ್, ವೇಣು, ಪುನೀತ್ನನ್ನು ಕಾಮಾಕ್ಷಿ ಪಾಳ್ಯ …
Read More »ಪ್ರೀತಿ ಹೆಸರಲ್ಲಿ ಯುವಕನಿಂದ ಕಿರುಕುಳ – ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ
ಚಾಮರಾಜನಗರ: ಪ್ರೀತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ ಯುವಕನ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ವರ್ಷಾ (22) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ವರ್ಷಾ ಮೈಸೂರಿನಲ್ಲಿ ಬಿ.ಇ ವ್ಯಾಸಂಗ ಮಾಡುತ್ತಿದ್ದರು. ಕೆಲ ದಿನಗಳಿಂದ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಯುವಕನ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ವರ್ಷಾಳ ತಾಯಿ ನಾಗರತ್ನಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದು, …
Read More »ನಾನು ವಿಷಕಂಠ, ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ: ದುನಿಯಾ ವಿಜಯ್
ನಾನು ವಿಷಕಂಠ, ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಿನಿಮಾ ಒಂದರ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಫ್ಯಾಮಿಲಿ ವಿಚಾರದ ಬಗ್ಗೆ ನಾನು ಏನೂ ಮಾತನಾಡಲಾರೆ. ಈಗಾಗಲೇ ನಾನು ನನ್ನ ಸಾಂಸಾರಿಕ ಜೀವನದ ಬಗ್ಗೆ ಸೋಶಿಯಲ್ ಪೋಸ್ಟ್ ಹಾಕಿದ್ದೇನೆ. ಎಲ್ಲ ವಿಚಾರವನ್ನು ನಾನು ಹೇಳಿದ್ದೇನೆ. ಮಕ್ಕಳ ವಿಚಾರವನ್ನೂ ಹಾಕಿದ್ದೇನೆ ಎಂದರು. ಇದೇ ವೇಳೆ ಮಗನ ಪ್ರಕರಣದ ಬಗ್ಗೆಯೂ …
Read More »ಲ್ಯಾಂಡಿಂಗ್ ವೇಳೆ ಯಡವಟ್ಟು – ಶ್ರೀನಗರ ಏರ್ಪೋರ್ಟ್ನಲ್ಲಿ ಪಾರ್ಕಿಂಗ್ ಕಂಬಕ್ಕೆ ಇಂಡಿಗೋ ವಿಮಾನ ಡಿಕ್ಕಿ
ಶ್ರೀನಗರ: ಲ್ಯಾಂಡಿಂಗ್ ಮಾಡುವ ವೇಳೆ ಇಂಡಿಗೋ ವಿಮಾನವು ಪಾರ್ಕಿಂಗ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾರುವ ಘಟನೆ ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಅಪಘಾತಕ್ಕೀಡಾದ ವಿಮಾನ (ಸಂಖ್ಯೆ 6E 225 – T-NOG) ನವಿ ಮುಂಬೈನಿಂದ ಶ್ರೀನಗರಕ್ಕೆ ಬಂದಿತ್ತು. ಅಧಿಕಾರಿಗಳು ಹೇಳಿದ್ದೇನು? ನವಿ ಮುಂಬೈನಿಂದ ಬಂದಿದ್ದ ಇಂಡಿಗೋ ವಿಮಾನ ಬೆಳಗ್ಗೆ 9:02 ಗಂಟೆ ಸುಮಾರಿಗೆ ಶ್ರೀನಗರ ಏರ್ಪೋರ್ಟ್ನ ʻಬೇ.ಸಂಖ್ಯೆ 06ʼ ರಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು, …
Read More »
Laxmi News 24×7