ಶ್ರೀನಗರ: ಲ್ಯಾಂಡಿಂಗ್ ಮಾಡುವ ವೇಳೆ ಇಂಡಿಗೋ ವಿಮಾನವು ಪಾರ್ಕಿಂಗ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾರುವ ಘಟನೆ ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಅಪಘಾತಕ್ಕೀಡಾದ ವಿಮಾನ (ಸಂಖ್ಯೆ 6E 225 – T-NOG) ನವಿ ಮುಂಬೈನಿಂದ ಶ್ರೀನಗರಕ್ಕೆ ಬಂದಿತ್ತು.
ಅಧಿಕಾರಿಗಳು ಹೇಳಿದ್ದೇನು?
ನವಿ ಮುಂಬೈನಿಂದ ಬಂದಿದ್ದ ಇಂಡಿಗೋ ವಿಮಾನ ಬೆಳಗ್ಗೆ 9:02 ಗಂಟೆ ಸುಮಾರಿಗೆ ಶ್ರೀನಗರ ಏರ್ಪೋರ್ಟ್ನ ʻಬೇ.ಸಂಖ್ಯೆ 06ʼ ರಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು, ಈ ವೇಳೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಿಮಾನವು ವಿಷ್ಯುಯಲ್ ಡಾಕಿಂಗ್ ಗೈಡೆನ್ಸ್ ಸಿಸ್ಟಮ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದ ಬಳಿಕ ಘಟನೆಗೆ ಕಾರಣ ಏನು? ಎಂಬುದನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ವಿಚಾರಣೆ ಪೂರ್ಣಗೊಂಡ ಬಳಿಕವೇ ನಿಖರ ಕಾರಣ ತಿಳಿದುಬರಲಿದೆ. ಅಲ್ಲಿಯವರೆಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗದು ಎಂದು ಅಧಿಕಾರಿಗಳ ತಂಡ ಹೇಳಿದೆ.
ಇನ್ನೂ ಘಟನೆಯಿಂದ ಯಾವುದೇ ವಿಮಾನ ಸೇವೆ ಕಾರ್ಯಾಚರಣೆಯಲ್ಲಿ ವಿಳಂಬ ಅಥವಾ ರದ್ದಾಗಿರುವುದು ಕಂಡುಬಂದಿಲ್ಲ. ಪರಿಸ್ಥಿತಿಯನ್ನ ಶೀಘ್ರವೇ ನಿಯಂತ್ರಣಕ್ಕೆ ತರಲಾದ ಹಿನ್ನೆಲೆ ವಿಮಾನಗಳ ಆಗಮನ ಮತ್ತು ನಿರ್ಗಮನ ಸೇವೆಗಳು ನಿಗದಿತ ವೇಳಾಪಟ್ಟಿ ಪ್ರಕಾರವೇ ಮುಂದುವರಿಯುತ್ತಿವೆ.
24 ಗಂಟೆಗಳಲ್ಲಿ 2ನೇ ಘಟನೆ
ಕಳೆದ 24 ಗಂಟೆಗಳಲ್ಲಿ ಇಂಡಿಗೋ ಸಂಸ್ಥೆಯ ವಿಮಾನ ಎದುರಿಸಿದ 2ನೇ ದುರಂತ ಇದಾಗಿದೆ. ಗುರುವಾರ (ನಿನ್ನೆ), ದೋಹಾ-ಬೆಂಗಳೂರು ಇಂಡಿಗೋ ವಿಮಾನವನ್ನು ಪೈಲಟ್ಗಳಲ್ಲಿ ಒಬ್ಬರು ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆ ಮಸ್ಕತ್ಗೆ ತಿರುಗಿಸಲಾಯಿತು.
Laxmi News 24×7