ಬೀದರ್: ಕೆಪಿಎಸ್‌ಸಿ ಪಶುವೈದ್ಯಕೀಯ ನೇಮಕಾತಿ ಹಗರಣ ಕೇಸಲ್ಲಿ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ಕರ್ಮಕಾಂಡ ಬಗೆದಷ್ಟೂ ಬಯಲಾಗುತ್ತಿದೆ. ಕೆಪಿಎಸ್‌ಸಿ ಹಗರಣದಲ್ಲಿ ಬಂದ ಕೋಟಿ ಕೋಟಿ ಹಣದಿಂದಲೇ ಕನ್ನಾಳೆ ಕೃಷಿ ಭೂಮಿ ಖರೀದಿ ಮಾಡಿದ್ದ ಅನ್ನೋ ಮಾಹಿತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
ಹೌದು. ಕನ್ನಾಳೆ ಒಂದು ವರ್ಷದ ಹಿಂದೆಯೇ ಸುಮಾರು 5 ಕೋಟಿ ಮೌಲ್ಯದ 20 ಕೃಷಿ ಭೂಮಿ ಖರೀದಿ ಮಾಡಿದ್ದ ಎಂದು ತನಿಖಾ ಮೂಲಗಳು ಬಹಿರಂಗಪಡಿಸಿವೆ.
ಪ್ರತಿ ಎಕರೆಗೆ ಸುಮಾರು 25 ಲಕ್ಷ ರೂಪಾಯಿ ದರದಲ್ಲಿ ಜಮೀನು ಖರೀದಿ ಮಾಡಲಾಗಿದೆ. ಬೀದರ್ ತಾಲೂಕಿನ ಯರನಹಳ್ಳಿ ಗ್ರಾಮದ ಜನವಾಡ ರಸ್ತೆಯಲ್ಲಿರುವ ಸರ್ವೆ ನಂಬರ್ 53, ಹಿಸ್ಸಾ ನಂಬರ್ 1ರ ಜಮೀನು ಖರೀದಿಗೆ ಸಂಬಂಧಿಸಿದ ದಾಖಲೆಗಳು ಇದೀಗ ಗಮನ ಸೆಳೆಯುತ್ತಿವೆ. ಈ ಜಮೀನನ್ನು ಶೋಭಾ ಎಂಬುವವರಿಂದ ಬಸವರಾಜ್ ಕನ್ನಾಳೆ ಖರೀದಿಸಿದ್ದ ಅನ್ನೋದು ಗೊತ್ತಾಗಿದೆ. ಈ ಬಗ್ಗೆಯೂ ಸಿಐಡಿ ತಂಡಗಳು ತನಿಖೆ ನಡೆಸುತ್ತಿವೆ.
Laxmi News 24×7