Breaking News

Monthly Archives: ಸೆಪ್ಟೆಂಬರ್ 2026

ಫಸ್ಟ್‌ ಟೈಮ್‌ ವಿಮಾನ ಏರಿದ ಸರ್ಕಾರಿ ಶಾಲಾ ಮಕ್ಕಳು; ಮುಂಬೈ ಪ್ರವಾಸಕ್ಕೆ ಫುಲ್ ಖುಷ್!

ಮುಂಬೈ ಪ್ರವಾಸದ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಚೈತ್ಯಭೂಮಿ, ನಿವಾಸ ಸೇರಿದಂತೆ ಹಲವು ಪ್ರಸಿದ್ಧ ಸ್ಥಳಗಳಿಗೆ ಮಕ್ಕಳು ಭೇಟಿ ನೀಡಲಿದ್ದಾರೆ. ಅಂಬೇಡ್ಕರ್ ಅವರ ಜೀವನ, ಹೋರಾಟ, ಸಾಧನೆ ಹಾಗೂ ಚರಿತ್ರೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಪ್ರವಾಸ ಆಯೋಜಿಸಲಾಗಿದೆ. ದೇವನಹಳ್ಳಿ ಭಾಗದ ಸಮಾಜ ಸೇವಕ ಎಂ.ಪಿ ಗಿರೀಶ್ ಅವರು ಮಕ್ಕಳಿಗಾಗಿ ಈ ಪ್ರವಾಸ ಆಯೋಜಿಸಿದ್ದಾರೆ. ಎರಡು ದಿನಗಳ ಕಾಲ ಮುಂಬೈನ ಪ್ರಮುಖ ಪ್ರವಾಸಿ ತಾಣಗಳನ್ನ ಮಕ್ಕಳು ವೀಕ್ಷಿಸಲಿದ್ದಾರೆ. …

Read More »

GBA ಕಾಮಗಾರಿ ವೇಳೆ ಗ್ಯಾಸ್‌ ಪೈಪ್‌ಗೆ ಹಾನಿ – 8 ಅಡಿ ಎತ್ತರಕ್ಕೆ ಚಿಮ್ಮುತ್ತಿರುವ ಗ್ಯಾಸ್

ಬೆಂಗಳೂರು: ಹೆಚ್‌ಎಎಲ್‌  ಪೊಲೀಸ್‌ ಠಾಣೆಯ ಸಮೀಪ GBA ಕಾಮಗಾರಿ ವೇಳೆ ಗ್ಯಾಸ್‌ ಪೈಪ್‌ಗೆ ಹಾನಿಯಾಗಿ ಗ್ಯಾಸ್‌ ಸೋರಿಯಾಗುತ್ತಿದೆ. ಜಿಬಿಎ ಕಾಮಗಾರಿ ವೇಳೆ ಮನೆಗಳಿಗೆ ಸಂಪರ್ಕ ನೀಡುವ ಭೂಗತ ಗೇಲ್ ಗ್ಯಾಸ್ ಪೈಪ್‌ಗೆ ಡ್ಯಾಮೆಜ್ ಉಂಟಾಗಿದೆ. ಇದರಿಂದ 8 ಅಡಿಯಷ್ಟು ಎತ್ತರಕ್ಕೆ ಗ್ಯಾಸ್‌ ಚಿಮ್ಮುತ್ತಿದೆ. ಗ್ಯಾಸ್ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಸ್ಥಳದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ. ಗ್ಯಾಸ್ ಸೋರಿಕೆಯ ಜಾಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ದೂರದಲ್ಲಿಯೇ ವಾಹನಗಳು ಸಂಚರಿಸುತ್ತಿವೆ.

Read More »

ಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಿದ ರೈತರ ಪರಿಹಾರಕ್ಕೆ ಕನ್ನ – ನಕಲಿ ದಾಖಲೆ ಸೃಷ್ಟಿಸಿ 5 ಕೋಟಿ ರೂ. ವಂಚನೆಗೆ ಯತ್ನ

ರಾಮನಗರ: ಬಿಡದಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೌನ್ ಶಿಪ್ ಯೋಜನೆಗಾಗಿ  ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ, ಅದನ್ನೇ ಬಂಡವಾಳ ಮಾಡಿಕೊಂಡು ವಂಚಿಸಲು ಯತ್ನಿಸಿದ ದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 5 ಕೋಟಿ ರೂ ಪರಿಹಾರ ಹಣವನ್ನು ದೋಚಲು ಯತ್ನಿಸಿದ ನಾಲ್ವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಆರೋಪಿಗಳಾದ ವೆಂಕಟೇಶ್, ರಾಜಶೇಖರ್, ಶಂಕರ್ ರೆಡ್ಡಿ …

Read More »

ಯುವಕರ ಭವಿಷ್ಯದೊಂದಿಗೆ ಚೆಲ್ಲಾಟ ಸಹಿಸಲ್ಲ, ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲು ಬದ್ಧ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಕೆಪಿಎಸ್‌ಸಿ ಪರೀಕ್ಷಾ ಅಕ್ರಮದಲ್ಲಿ ಯಾರೇ ಭಾಗಿಯಾದರೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ಬಲಿಷ್ಟವಾದರು, ಯಾವುದೇ ಪಕ್ಷದವರಾದರು ಸರಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲು ಬದ್ಧ ಎಂದ ಅವರು, ತಾವೇ ರಾಜ್ಯದ ಗೃಹ ಸಚಿವರಿರುವಾಗ ಯಾವುದೇ …

Read More »

ಪತ್ನಿ ಜೊತೆ ಅಕ್ರಮ ಸಂಬಂಧ – ಪ್ರಿಯಕರನ ಕೊಂದು ಸಂಪಲ್ಲಿ ಬಚ್ಚಿಟ್ಟ ಪತಿರಾಯ

ಕೋಲಾರ: ಪತ್ನಿ ಜೊತೆ ಅಕ್ರಮ ಸಂಬಂಧ  ಹಿನ್ನೆಲೆ ಪತಿ, ಪ್ರಿಯಕರನನ್ನು ಕತ್ತು ಹಿಸುಕಿ ಕೊಂದು ಸಂಪ್‌ಗೆ ಹಾಕಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ತಿರುಪತಿ ಬಳಿ ನಡೆದಿದೆ. ಸೊಣ್ಣೇನಹಳ್ಳಿ ವೆಂಕಟೇಶ್ (36) ಕೊಲೆಯಾದ ಪ್ರಿಯಕರ. ಸುರೇಶ್ ಪತ್ನಿ ಜೊತೆಗೆ ವೆಂಕಟೇಶ್ ಅಕ್ರಮ ಸಂಬಂದ ಹೊಂದಿದ್ದ ಎಂಬ ಕಾರಣಕ್ಕೆ ಸುರೇಶ್ ಹಾಗೂ ಸ್ನೇಹಿತ ಸಂತೋಷ್ ಇಬ್ಬರೂ ಎಣ್ಣೆ ಪಾರ್ಟಿ ಮಾಡಿ ವೆಂಕಟೇಶ್ ಕೊಲೆಗೈದಿದ್ದಾರೆ. ಬಳಿಕ ವೆಂಕಟೇಶ್ ಮೃತದೇಹವನ್ನು ಸಂಪ್‌ಗೆ …

Read More »

ಪಾಲಿಕೆಯ ಮುಂದಿನ ಪರಿಷತ್ ಸಭೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಆಗ್ರಹ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಬೇಕೆಂದು ರಾಜ್ಯ ಸರಕಾರ ಆಗಸ್ಟ್ 29 ರಂದು ಪಾಲಿಕೆಗೆ ಆದೇಶ ನೀಡಿದ್ದು, ಪಾಲಿಕೆಯ ಮುಂದಿನ ಪರಿಷತ್ ಸಭೆಯಲ್ಲಿ ಆದೇಶವನ್ನು ಅನುಷ್ಠಾನಗೊಳಿಸಲು  ಪಾಲಿಕೆಯ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಹೊನಕೇರಿ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು. ಪಾಲಿಕೆಯ ಆಯುಕ್ತ ಕಾರ್ತಿಕ ಅವರನ್ನು ಭೇಟಿಯಾದ ಕನ್ನಡ ಸಂಘಟನೆಗಳ ಮುಖಂಡರು ರಾಜ್ಯ ಸರಕಾರದ ಆದೇಶ …

Read More »

ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಭವಿಷ್ಯದ ಬೆಳಕು: ಪ್ರಾದೇಶಿಕ ಆಯುಕ್ತೆ ಕೆ. ಎಂ.ಜಾನಕಿ

ಬೆಳಗಾವಿ: ಪ್ರತಿ ದಿನವೂ ಶಿಕ್ಷಕರನ್ನು ಸ್ಮರಿಸಬೇಕು, ತಂದೆ-ತಾಯಿಯ ನಂತರ ಯಾವುದೇ ವೃತ್ತಿ ಅಥವಾ ಜ್ಞಾನವನ್ನು ಕಲಿಯಲು ಗುರುಗಳ ಮಾರ್ಗದರ್ಶನ ಅತ್ಯಗತ್ಯವಾಗಿದ್ದು ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಭವಿಷ್ಯದ ಬೆಳಕು ಎಂದು ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಬೆಳಗಾವಿ ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ(ದಕ್ಷಿಣ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ನಗರ ವಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ(ಸೆ.05) ನಗರದ …

Read More »

ಆರೋಗ್ಯವಾಗಿರಲು ಸರಳ ಮತ್ತು ಪೌಷ್ಟಿಕ ಆಹಾರ ಉತ್ತಮ: ಪದ್ಮಶ್ರೀ ಪ್ರಭಾಕರ ಕೋರೆ

ಬೆಳಗಾವಿ: ಭಾರತದ ಪರಂಪರೆಯಲ್ಲಿ ಬೆಳಗಿನ ಉಪಾಹಾರದ ಪದ್ಧತಿ ಇರಲಿಲ್ಲ. ಹಸಿವಾದಾಗ ಕಡಲೆಕಾಯಿ ಅಥವಾ ಇತರ ಸರಳ ಆಹಾರವನ್ನು ಸೇವಿಸುತ್ತಿದ್ದೆವು. ಇಂದು ನನಗೆ 80 ವರ್ಷವಾದರೂ ಆರೋಗ್ಯವಾಗಿರಲು, ಸರಳ ಮತ್ತು ಪೌಷ್ಟಿಕ ಆಹಾರವೂ ಉತ್ತಮ ಆರೋಗ್ಯಕ್ಕೆ ಸಹಾಯಕವಾಗಬಹುದು. ರಾಗಿ ಸೇರಿದಂತೆ ಸ್ಥಳೀಯ ಸಿರಿಧಾನ್ಯಗಳಿಂದ ತಯಾರಿಸಿದ ಪೌಷ್ಟಿಕ ಅತ್ಯುತ್ತಮ. ಈ ಆಹಾರಗಳು ಕಡಿಮೆ ವೆಚ್ಚದಲ್ಲಿ ದೊರೆಯುತ್ತವೆ ಮತ್ತು ಮಕ್ಕಳ ಪೌಷ್ಟಿಕತೆಗೆ ಬಹಳ ಉಪಯುಕ್ತವಾಗಿವೆ ಕಾಹೆರನ ಕುಲಪತಿ ಪದ್ಮಶ್ರೀ ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು. …

Read More »

ಕಳ್ಳಭಟ್ಟಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಬೆಳಗಾವಿ: ಮಚ್ಛೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾಗ ಬೆಳಗಾವಿಯ ಗ್ರಾಮೀಣ ಪೊಲೀರು ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪರುಶರಾಮ ಬಸಪ್ಪ ನಾಯಿಕ (35) ಬಂಧಿತ ಆರೋಪಿ, ಬೆಳಗಾವಿ ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಆರೋಪಿತನಿಂದ ಒಟ್ಟು 20 ಲೀಟರ್‌ಗಳಷ್ಟು ಕಳ್ಳಭಟ್ಟಿ ಸರಾಯಿ ಜಪ್ತಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ. 206/2026 ಕಲಂ. 32, 34 ಕರ್ನಾಟಕ …

Read More »

ಬೆಳಗಾವಿಯ ಸಿಸಿಬಿ ಪೊಲೀಸ್‌ರಿಂದ 3 ಗಾಂಜಾ ಮಾರಾಟಗಾರರ ಬಂಧನ

ಬೆಳಗಾವಿ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿ ನಗರದ ಸಿಸಿಬಿ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.‌ ಅಕ್ಷಯಕುಮಾರ ಸೋಮಶೇಖರ ಅಂಕಲಗಿ (20), ಆದರ್ಶ ಈರಯ್ಯ ಹಿರೇಮಠ (25), ಮಣಿಕಂಠ ರಾಚಯ್ಯಾ ಉಗರಖೋಡ ಬಂಧಿತ ಆರೋಪಿಗಳು. ಇವರು ಮೈತಾಬ ಎಂಬಾತನಿಂದ ಗಾಂಜಾ ತಂದು,  ಬೆಳಗಾವಿ ನಗರದ ಸಾಗರ ಕಿನಾರಾ ದಾಬಾ, ಯಡಿಯೂರಪ್ಪ ಮಾರ್ಗ ಹತ್ತಿರ ತಮ್ಮ ಬೈಕ್ ಮೇಲೆ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ ವೇಳೆ …

Read More »