Breaking News

Monthly Archives: ಸೆಪ್ಟೆಂಬರ್ 2026

SIM ಕಾರ್ಡ್ ದುರ್ಬಳಕೆ ಮಾಡಿದ್ರೆ 50 ಲಕ್ಷ ದಂಡ, 3 ವರ್ಷ ಜೈಲು

ನವದೆಹಲಿ: ನಿಮ್ಮ ಹೆಸರಿನಲ್ಲಿ ಪಡೆದಿರುವ ಸಿಮ್‌ ಕಾರ್ಡ್‌  ಅನ್ನು ಬೇರೆಯವರಿಗೆ ಬಳಸಲು ನೀಡಿದ್ದೀರಾ? ಹಾಗಿದ್ದರೆ ಎಚ್ಚರ. ನಿಮ್ಮ ಹೆಸರಿನಲ್ಲಿರುವ ಸಿಮ್‌ ಕಾರ್ಡನ್ನ ಬೇರೆಯವರು ಬಳಸಲು ಅವಕಾಶ ನೀಡದಂತೆ ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ. ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ SIM ಕಾರ್ಡ್‌ ಅನ್ನು ಮತ್ತೊಬ್ಬರು ದುರ್ಬಳಕೆ ಮಾಡಿದರೆ, ಟೆಲಿಕಾಂ ಗುರುತಿನ ಸಂಖ್ಯೆಗಳ ದುರುಪಯೋಗ, ಐಎಂಇಐ ಸಂಖ್ಯೆಗಳಲ್ಲಿ ಬದಲಾವಣೆ (ಟ್ಯಾಂಪರಿಂಗ್) ಮಾಡಿದ್ರೆ ಗಂಭೀರ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಇಲಾಖೆ ಎಚ್ಚರಿಸಿದೆ. ಈ …

Read More »

ವಿಧಾನಸೌಧ ಡಿಸಿಪಿ ಯೋಗೇಶ್ ಮೇಲೆ ಸಿದ್ದರಾಮಯ್ಯ ಗರಂ

ಬೆಂಗಳೂರು: ವಿಧಾನಸಭೆ ಕಲಾಪ ಮುಗಿಸಿ ನಿರ್ಗಮಿಸುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ವಿಧಾನಸೌಧ ಡಿಸಿಪಿ ಯೋಗೇಶ್  ಮೇಲೆ ಗರಂ ಆಗಿದ್ದಾರೆ. ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮೆಟ್ಟಿಲು ಇಳಿದು ಬಂದು ಕಾರು ಹತ್ತಲು ಸಿದ್ದರಾಮಯ್ಯ ತೆರಳಿದ್ದರು. ಆದರೆ, ಕೆಂಗಲ್ ದ್ವಾರದ ಬಳಿ ನಿಲ್ಲಿಸಿದ್ದ ಅವರ ಕಾರನ್ನು ಡಿಸಿಪಿ ಯೋಗೇಶ್ ಅಲ್ಲಿಂದ ತೆಗೆಸಿ ಪಾರ್ಕಿಂಗ್‌ಗೆ ಕಳುಹಿಸಿದ್ದರು. ಹೀಗಾಗಿ ಕೆಂಗಲ್ ದ್ವಾರದ ಬಳಿ ಸಿದ್ದರಾಮಯ್ಯ ಕಾರಿಗಾಗಿ ಕಾಯಬೇಕಾಗಿತ್ತು.  ಕಾರು ಅಲ್ಲಿಲ್ಲದಿರುವುದನ್ನು ಕಂಡು …

Read More »

ಹಿಂಸೆ ತಡೆಯೋಕಾಗ್ತಿಲ್ಲ, ಒಂದು ತೊಟ್ಟು ವಿಷ ಕೊಡಿ ಅಂತಾರೆ – ಪವಿತ್ರಾಗೌಡ ಪರ ವಕೀಲರ ಪ್ರಬಲ ವಾದ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಆರೋಪಿ ಪವಿತ್ರಾಗೌಡ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್‌  ಕೋರ್ಟ್‌ನಲ್ಲಿ ನಡೆಯುತ್ತಿದೆ. ಪವಿತ್ರಾಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದ್ದು, ಬಳಿಕ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್ ವಾದ ಆರಂಭಿಸಿದ್ದಾರೆ. ಪವಿತ್ರಾಗೌಡ ಪರ ಬಾಲನ್ ವಾದ ಪವಿತ್ರಾಗೌಡ  ಮಹಿಳೆಯಾಗಿದ್ದು, ಮಗಳ ಆರೈಕೆ ಮಾಡಬೇಕಿರುವ ಹಿನ್ನೆಲೆ ಜಾಮೀನು ನೀಡಬೇಕು ಎಂದು ಹಿರಿಯ ವಕೀಲ ಬಾಲನ್ ವಾದ ಮಂಡಿಸಿದರು. ಪ್ರಕರಣದ ವಿಚಾರಣೆ …

Read More »

ಕೊಡಗಿನಲ್ಲಿ ಮಳೆ ಕೊರತೆ – ಕಾವೇರಿ ತೀರ್ಥೋದ್ಭವಕ್ಕೂ ಮುನ್ನ ಭಕ್ತರಲ್ಲಿ ಆತಂಕಕೊಡಗಿನಲ್ಲಿ ಮಳೆ ಕೊರತೆ – ಕಾವೇರಿ ತೀರ್ಥೋದ್ಭವಕ್ಕೂ ಮುನ್ನ ಭಕ್ತರಲ್ಲಿ ಆತಂಕ

ಮಡಿಕೇರಿ: ಕೊಡಗು  ಜಿಲ್ಲೆಯಲ್ಲಿ ಈ ಬಾರಿ ಮಳೆಯ  ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರ ಪರಿಣಾಮ ಜಿಲ್ಲೆಯ ಜಲಮೂಲಗಳ ಮೇಲೂ ಆಗಿದ್ದು, ಸಾಮಾನ್ಯವಾಗಿ ಮಳೆಗಾಲದಲ್ಲಿ ನೀರಿನಿಂದ ತುಂಬಿ ಹರಿಯುತ್ತಿದ್ದ ಭಾಗಮಂಡಲದ  ಪವಿತ್ರ ತ್ರಿವೇಣಿ ಸಂಗಮದಲ್ಲೇ  ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇನ್ನು ಅಕ್ಟೋಬರ್ 17ರಂದು ಕಾವೇರಿ ತೀರ್ಥೋದ್ಭವ ನಡೆಯಲಿದ್ದು, ಸಾವಿರಾರು ಭಕ್ತರು ಭಾಗಮಂಡಲಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸ್ನಾನ ಹಾಗೂ …

Read More »

ಬಿಹಾರದಲ್ಲಿ ಅಪ್ರಾಪ್ತರ ಮೇಲೆ ಹಲ್ಲೆ – ಮೂವರು ಅರೆಸ್ಟ್‌

ಪಾಟ್ನಾ: ಬಿಹಾರದಲ್ಲಿ ನಡೆದ ಅಪ್ರಾಪ್ತ ಬಾಲಕಿ ಮತ್ತು ಬಾಲಕನ ಮೇಲಿನ ಹಲ್ಲೆ ಹಾಗೂ ಲೈಂಗಿಕ ಕಿರುಕುಳದ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 19 ರಂದು ಬಿಹಾರದ ಜಮುಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. 10ನೇ ತರಗತಿಯ ಅಪ್ರಾಪ್ತ ಜೋಡಿ ಕೋಚಿಂಗ್  ಕ್ಲಾಸ್ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಪುಂಡರ ಗುಂಪೊಂದು ಅವರನ್ನು ರಸ್ತೆಯಲ್ಲೇ ತಡೆದಿದೆ. ಗುಂಪು ಬಾಲಕನ …

Read More »

ಕಲಬುರಗಿ | ಸಿಡಿಲು ಬಡಿದು ಇಬ್ಬರು ಮಹಿಳೆಯರು ದುರ್ಮರಣ

ಕಲಬುರಗಿ: ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವನಪ್ಪಿರುವ ಘಟನೆ ಕಮಲಾಪುರ್ ತಾಲೂಕಿನ ನಾಗೂರು ಗ್ರಾಮದ ಜಮೀನಿನಲ್ಲಿ ನಡೆದಿದೆ. ಜಮೀನು ಮಾಲೀಕರಾದ ಲಕ್ಷ್ಮೀ ಗುತ್ತೇದಾರ್ (45) ಮತ್ತು ಕೂಲಿ ಮಹಿಳೆ ಸೈಜಾದ್ ಬಿ ಮೃತ ದುರ್ದೈವಿಗಳು. ಇಬ್ಬರು ಜಮೀನಿನಲ್ಲಿ ಕೆಲಸ ಮಾಡುವಾಗ ಜೋರಾಗಿ ಮಳೆ ಶುರುವಾಗಿದೆ. ಈ ವೇಳೆ ಇಬ್ಬರು ಮಹಿಳೆಯರು ಮರದಡಿ ಕುಳಿತು ಊಟ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕಮಲಾಪುರ ತಹಶಿಲ್ದಾರ್ ಭೇಟಿ …

Read More »

ಪಶ್ಚಿಮ ಘಟ್ಟಗಳ ರಕ್ಷಣೆ – ರಾಜ್ಯ ಸರ್ಕಾರ ಸಮಿತಿ ರಚಿಸಲಿ: ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಪಶ್ಚಿಮಘಟ್ಟದ ಸಂಪೂರ್ಣ ಪ್ರದೇಶವನ್ನು ಒಂದೇ ನಿಯಮದಡಿ ತರುವ ಬದಲು, ದಟ್ಟ ಅರಣ್ಯ ಪ್ರದೇಶಗಳಿಗೆ ಮಾತ್ರ ಕಠಿಣ ಪರಿಸರ ಸಂರಕ್ಷಣಾ ಕ್ರಮಗಳನ್ನು ರೂಪಿಸಬೇಕು. ಈ ಕುರಿತು ರಾಜ್ಯ ಸರ್ಕಾರವೇ ತಜ್ಞರ ಸಮಿತಿ ರಚಿಸಿ ಸಮಗ್ರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್  ಒತ್ತಾಯಿಸಿದರು. ವಿಧಾನಮಂಡಲ ಅಧಿವೇಶನದಲ್ಲಿ ಪಶ್ಚಿಮಘಟ್ಟ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದ ಅವರು, ಪರಿಸರವಾದಿಗಳ ಹೋರಾಟದ …

Read More »

ಬಿಡದಿ ರೈತರ ಮೇಲೆ ದೌರ್ಜನ್ಯ – ಹಿರಣ್ಯಾಕ್ಷನ ಪಾಪದ ಕೊಡ ತುಂಬುತ್ತಿದೆ: ಹೆಚ್‌ಡಿಕೆ ಕಿಡಿ

ಬೆಂಗಳೂರು: ಬಿಡದಿಯ  ಬೈರಮಂಗಲದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ರೈತರ ಮೇಲೆ ಅಮಾನುಷವಾಗಿ ದಬ್ಬಾಳಿಕೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ; ‘ಹಿರಣ್ಯಾಕ್ಷ’ನ ಪಾಪದ ಕೊಡ ತುಂಬುತ್ತಿದೆ ಎಂದು ಗುಡುಗಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕದಲ್ಲಿ ನಾಗರಿಕ ಸರ್ಕಾರವಿದೆಯೋ ಅಥವಾ ರಾಕ್ಷಸ ಸರ್ಕಾರ ಇದೆಯೋ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ತಮ್ಮ ಭೂಮಿ ಉಳಿಸಿಕೊಳ್ಳಲು ಬಿಡದಿಯ ರೈತರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. …

Read More »

ಸಿಡಿಲು ಬಡಿದು ದೇವಾಲಯದ ಮಹಾದ್ವಾರದ ಗೋಪುರದಲ್ಲಿ ಬಿರುಕು

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿ ದೇವಸ್ಥಾನದ ನಿರ್ಮಾಣ ಹಂತದ ಮಹಾದ್ವಾರದ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಬಿರುಕು ಬಿಟ್ಟಿದೆ. ಗ್ರಾಮದ ಐತಿಹಾಸಿಕ ಬಲಭೀಮ ಆಂಜನೇಯ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದಿದೆ. ಸಿಡಿಲು ಬಡಿದ ಪರಿಣಾಮ ನಿರ್ಮಾಣ ಹಂತದ ಗೋಪುರದ ಹಲವು ಭಾಗಗಳಿಗೆ ಹಾನಿಯಾಗಿದೆ. ಗ್ರಾಮಸ್ಥರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಗೋಪುರ ಅಂತಿಮ ಹಂತದಲ್ಲಿತ್ತು. ಘಟನೆಯಿಂದ ಮಹಾಗೋಪುರದ ಮೇಲೆ ಹಾರಿಸಲಾಗಿದ್ದ ಭಗವಾಧ್ವಜಗಳು ಸುಟ್ಟು ಕರಕಲಾಗಿವೆ. ಅಲಂಕಾರಿಕ ಗೊಂಬೆಗಳ …

Read More »

ದಪ್ಪ ಚರ್ಮದ ಸರ್ಕಾರದ ಚಳಿ ಬಿಡಿಸುತ್ತೇವೆ, ಮತ್ತೊಂದು ವಿಕೆಟ್‌ ಬೀಳುವ ಭಯ: ಆಶೋಕ್

ಬೆಂಗಳೂರು: ಇದು ದಪ್ಪ ಚರ್ಮದ ಸರ್ಕಾರ. ಈ ಸರ್ಕಾರಕ್ಕೆ ಚಳಿ ಬಿಡಿಸುವ ಮತ್ತು ಕಿವಿ ಹಿಂಡುವ ಕೆಲಸವನ್ನು ಸದನದಲ್ಲಿ ಮಾಡೇ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಇವರು, ಕಳೆದ ಬಾರಿ ನಾವು ವಿಧಾನಸಭೆ ಕಲಾಪದಲ್ಲಿ ಈ ಸರ್ಕಾರಕ್ಕೆ ಚಳಿ ಬಿಡಿಸಿದ್ದೆವು. ನಮ್ಮ ಹೋರಾಟದಿಂದ ಒಂದು ವಿಕೆಟ್ ಬಿದ್ದು ಹೋಯಿತು. ಈ ಬಾರಿಯೂ ವಿರೋಧ ಪಕ್ಷವಾಗಿ ನಮ್ಮ ಕೆಲಸವನ್ನು ಸಮರ್ಥವಾಗಿ ಮಾಡುತ್ತೇವೆ …

Read More »