Breaking News

Monthly Archives: ಸೆಪ್ಟೆಂಬರ್ 2026

ಪ್ರತಿ ಎಕರೆಗೆ 50 ಸಾವಿರ ರೂ. ಸಾಲ

ಬೆಳಗಾವಿ: ಶತಮಾನೋತ್ಸವ ಸಂಭ್ರಮದಲ್ಲಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲವನ್ನು 3,300 ಕೋಟಿ ರೂ.ದಿಂದ 3,727 ಕೋಟಿ ರೂ.ವರೆಗೆ ಏರಿಕೆ ಮಾಡಲಾಗಿದೆ ಎಂದು ಬಿಡಿಸಿಸಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ನಗರದ ಗಾಂಧಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಡಿಸಿಸಿ ಬ್ಯಾಂಕಿನ 105ನೇ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಬೆಳೆ ಸಾಲದ ಮಿತಿಯನ್ನು ಪ್ರತಿ ಎಕರೆಗೆ 40 ಸಾವಿರದಿಂದ 50 ಸಾವಿರ …

Read More »

ಬೆಳಗಾವಿ:ಕೋಟೆ ಕೆರೆ ಹೆಸರಲ್ಲಿ ಅನುದಾನ ದುರ್ಬಳಕೆ!

ಬೆಳಗಾವಿ: ಐತಿಹಾಸಿಕ ಕೋಟೆ ಕೆರೆ ಅಭಿವೃದ್ಧಿ ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು, ಪಾಲಿಕೆ ಕೈಗೊಂಡಿರುವ ಕಾಮಗಾರಿಗೆ ಪರ-ವಿರೋಧ ವ್ಯಕ್ತವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಮೂರು ಹಂತದಲ್ಲಿ 9.61 ಕೋಟಿ ರೂ. ವೆಚ್ಚದಲ್ಲಿ ಕೋಟೆ ಕೆರೆ ಅಭಿವೃದ್ಧಿ ಪಡಿಸಿ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಆದರೆ, ವರ್ಷಗಳಿಂದ ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವ ಕೆರೆ ಹೆಸರಿನಲ್ಲಿ ಕೇಂದ್ರ ಸರ್ಕಾರದ ಅಮೃತ ಯೋಜನೆ ಅಡಿಯಲ್ಲಿ ಮತ್ತೆ 10 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಂಡಿರುವುದಕ್ಕೆ ವ್ಯಾಪಕ ವಿರೋಧ …

Read More »

ಗೋವಾ ಹಿತಾಸಕ್ತಿ, ಜನಧ್ವನಿ ಮತ್ತು ಹಕ್ಕುಗಳ ರಕ್ಷಣೆಗೆ ‘ಗೋಯ್ ರಖೋನ್ ಯಾತ್ರೆ’ ಆರಂಭ

ಪಣಜಿ: ಗೋವಾದ ಹಿತಾಸಕ್ತಿ, ಜನರ ಧ್ವನಿ ಹಾಗೂ ಹಕ್ಕುಗಳ ರಕ್ಷಣೆ ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಜನರ ಬಳಿಗೆ ತೆರಳಿ ಆಲಿಸುವ ಉದ್ದೇಶದಿಂದ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿರುವ \27 ದಿನಗಳ ‘ಗೋಯ್ ರಖೋನ್ ಯಾತ್ರೆ’ಗೆ ಮಂಗಳವಾರ ಪಣಜಿಯ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ಚಾಲನೆ ದೊರೆಯಿತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಸೆ.22ರಿಂದ ಅ.18ರವರೆಗೆ …

Read More »

ನಕಲಿ ಔಷಧ ವಿರುದ್ಧ ಬೆಳಗಾವಿಯಲ್ಲಿ ಕರವೇ ಆಕ್ರೋಶ

ಬೆಳಗಾವಿ: ರಾಜ್ಯಾದ್ಯಂತ ನಕಲಿ ಔಷಧಗಳ ಪತ್ತೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ, ಬೆಳಗಾವಿಯಲ್ಲೂ ನಕಲಿ ಔಷಧ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ವಿವಾ ಫಾರ್ಮಾ ಕಚೇರಿ ಮುಂದೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ನಕಲಿ ಔಷಧಗಳ ಮಾರಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ …

Read More »

ಸೆ.28ರಂದು ಗುರ್ಲಾಪುರದಲ್ಲಿ ಲಕ್ಷಾಂತರ ರೈತರ ಬೃಹತ್ ಸಮಾವೇಶ

ಬೆಳಗಾವಿ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡ ಗಣೇಶ ಇಳಿಗೇರ್ ನೇತೃತ್ವದಲ್ಲಿ ರೈತರು ಬೆಳಗಾವಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ, ಕಾರ್ಖಾನೆಗಳ ತ್ವರಿತ ಆರಂಭ ಹಾಗೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು. ಸೆಪ್ಟೆಂಬರ್ 28ರಂದು ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ಲಕ್ಷಾಂತರ ರೈತರನ್ನು ಸೇರಿಸಿ ಬೃಹತ್ …

Read More »

ಜಮೀನು ವಿವಾದದಲ್ಲಿ ಮಾಜಿ ಸೈನಿಕನ ಕೊಲೆ: ಒಬ್ಬನಿಗೆ ಜೀವಾವಧಿ, ನಾಲ್ವರಿಗೆ 10 ವರ್ಷ ಜೈಲುಶಿಕ್ಷೆ

ಬೆಳಗಾವಿ: ಜಮೀನು ಪಾಲು-ವಾಟೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಾಜಿ ಸೈನಿಕನನ್ನು ಕೊಲೆ ಮಾಡಿ, ಆತನ ಸಹೋದರನ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಬೈಲಹೊಂಗಲದ 10ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2023ರ ಜೂನ್ 4ರಂದು ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಜಮೀನಿನ ಪಾಲು-ವಾಟೆ ಆಗುವವರೆಗೆ ಗಳೆ ಹೊಡೆಯಬೇಡಿ ಎಂದು ಕಸ್ತೂರೆವ್ವ ಖನಗಾಂವಿ, ಅವರ ಪತಿ ಸದಾಶಿವ ಖನಗಾಂವಿ ಹಾಗೂ ಮೈದುನ ಸುರೇಶ …

Read More »

ಮಗುವಿನೊಂದಿಗೆ ಬ್ಯೂಟಿ ಪಾರ್ಲರ್‌ಗೆ ಹೋದ ತಾಯಿ ನಾಪತ್ತೆ

ಬೆಳಗಾವಿ: ಬೆಳಗಾವಿ ನಗರದ ಅನಗೋಳ ಲೋಹಾರಗಲ್ಲಿಯ ನಿವಾಸಿ ಮಂಜುಳಾ ರಾಮಲಿಂಗ ಸುಣಗಾರ (27) ಅವರು ತಮ್ಮ 14 ತಿಂಗಳ ಮಗ ಆರ್ಯನ ರಾಮಲಿಂಗ ಸುಣಗಾರನೊಂದಿಗೆ ಸೆ.18ರಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ. ಮಂಜುಳಾ ಅವರು ಮಗನನ್ನು ಕರೆದುಕೊಂಡು ಲಕ್ಷ್ಮೀಗಲ್ಲಿಯಲ್ಲಿರುವ ಬ್ಯೂಟಿ ಪಾರ್ಲರ್‌ಗೆ ಹೋಗಿ ಬರುತ್ತೇನೆ ಎಂದು ಕುಟುಂಬದವರಿಗೆ ತಿಳಿಸಿ ಮನೆಯಿಂದ ತೆರಳಿದ್ದರು. ಆದರೆ ಬಳಿಕ ಮನೆಗೆ ಮರಳದೇ ಇರುವ ಹಿನ್ನೆಲೆಯಲ್ಲಿ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಂಜುಳಾ ಅವರು …

Read More »

ಪ್ರಜಾಸೇವಾ ಆಂದೋಲನ ಮೂರು ತಿಂಗಳಲ್ಲಿ ಎಲ್ಲ ತಾಲೂಕುಗಳಲ್ಲೂ ಆಯೋಜನೆ: ಸಚಿವ ಸತೀಶ್ ಜಾರಕಿಹೊಳಿ

ಯರಗಟ್ಟಿ: ಪ್ರಜಾಸೇವಾ ಆಂದೋಲನ ಸಭೆಯನ್ನು ಮೊದಲ ಬಾರಿಗೆ ಯರಗಟ್ಟಿಯಲ್ಲಿ ಆಯೋಜಿಸಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ರಾಜ್ಯದ ಎಲ್ಲ ತಾಲೂಕುಗಳಲ್ಲೂ ಇಂತಹ ಸಭೆಗಳನ್ನು ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿಗಳ ನಿರ್ದೇಶನದಂತೆ ರಾಜ್ಯಾದ್ಯಂತ ಜನಸ್ಪಂದನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಬೆಳಗಾವಿಯ ಯರಗಟ್ಟಿಯಲ್ಲಿ ಮೊದಲ ಜನಸ್ಪಂದನ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಮೂರು ತಿಂಗಳೊಳಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಿ ಸಾರ್ವಜನಿಕರಿಗೆ ಶೀಘ್ರವಾಗಿ …

Read More »

ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ 12.57 ಕೋಟಿ ಮೌಲ್ಯದ 36 ಕೆಜಿ ಮಾದಕ ವಸ್ತು ಸೀಜ್

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕಾಂಕ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ 12.57 ಕೋಟಿ ರೂ. ಮೌಲ್ಯದ 36 ಕೆ.ಜಿ ಹೈಡ್ರೋ ಗಾಂಜಾ ಪತ್ತೆಯಾಗಿದೆ. ಸದ್ಯ ಪತ್ತೆಯಾದ ಹೈಡ್ರೋ ಗಾಂಜಾವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು NDPS ಕಾಯ್ದೆಯಡಿ ಬಂಧಿಸಿ, ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ 15.3 ಕೆಜಿ …

Read More »

ಬಿಜೆಪಿ ನಾಯಕರನ್ನ ರಣಹದ್ದು ಎಂದ ಸಚಿವ ಯತೀಂದ್ರ ವಿರುದ್ಧ ದೂರು

ರಾಮನಗರ: ಬಿಜೆಪಿಯವರನ್ನು  ರಣಹದ್ದುಗಳಿಗೆ  ಹೋಲಿಸಿ ಹೇಳಿಕೆ ನೀಡಿದ್ದ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ಸಲ್ಲಿಕೆಯಾಗಿದೆ. ಟಿ.ನರಸೀಪುರದಲ್ಲಿ ನಡೆದಿದ್ದ ಗಲಭೆ ವಿಚಾರವಾಗಿ ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡುವ ಭರದಲ್ಲಿ ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ರಣಹದ್ದುಗಳು ಎಂದಿದ್ದರು. ಈ ಹೇಳಿಕೆ ಈಗ ಹೊಸ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ಎಂಬವರು ಈ ಬಗ್ಗೆ ದೂರು ಸಲ್ಲಿಸಿದ್ದು, ಸಚಿವರು ರಾಜಕೀಯ …

Read More »