ಡೆಹ್ರಾಡೂನ್: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮ ನಡೆದ ಸ್ಥಳದಲ್ಲಿ ನಡೆದ ಧಾರ್ಮಿಕ ಆಚರಣೆಗೆ ಜಾತಿ ಬಣ್ಣ ಬಳಿದಿದ್ದಾರೆ ಎಂಬ ಆರೋಪದಡಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಾಲ್ಮೀಕಿ ಸಮುದಾಯದ ಮುಖಂಡ ಹಾಗೂ ಶ್ರೀರಾಮ್ ಸೇನಾ ಧರ್ಮಾರ್ಥ ಸೇವಾ ನ್ಯಾಸ್‌ನ ಸದಸ್ಯ ಅಮಿತ್ ಕುಮಾರ್ ನೀಡಿದ ದೂರಿನ ಮೇರೆಗೆ ಹಲ್ದ್ವಾನಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಭಾರತೀಯ …
Read More »Monthly Archives: ಆಗಷ್ಟ್ 2026
ಟೈರ್ ಬ್ಲಾಸ್ಟ್, ಕಾರಿನ ಮೇಲೆ ಟ್ರಕ್ ಪಲ್ಟಿ – ತಪ್ಪಿದ ಭಾರೀ ಅನಾಹುತ
ಬಾಗಲಕೋಟೆ: ಚಲಿಸುತ್ತಿದ್ದಾಗ ಟೈರ್ ದಿಢೀರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಸರ್ವಿಸ್ ರಸ್ತೆಗೆ ನುಗ್ಗಿ ಕಾರಿನ ಮೇಲೆ ಪಲ್ಟಿಯಾದ ಘಟನೆ ಇಳಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯ ನವಗ್ರಹ ಡಾಬಾ ಬಳಿ ನಡೆದಿದೆ. ಆಗಸ್ಟ್ 29ರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದದಿಂದ ಕೊಪ್ಪಳದ ಕುಷ್ಟಗಿ ಮಾರ್ಗವಾಗಿ ಹೊರಟಿದ್ದ ಗುಜರಾತ್ ಮೂಲದ ಲಾರಿಯ ಟೈರ್ ಬ್ಲಾಸ್ಟ್ ಆಗಿದೆ. ಪರಿಣಾಮ …
Read More »ಈಗ ಚುನಾವಣೆ ಎದುರಿಸಲು ಟನ್‌ಗಟ್ಟಲೆ ಹಣ ಬೇಕು: ಸಿದ್ದರಾಮಯ್ಯ
ತುಮಕೂರು: ಇನ್ಮುಂದೆ ನಾನು ಲೋಕಸಭೆಗೂ ನಿಲ್ಲಲ್ಲ, ವಿಧಾನಸಭೆಗೂ ನಿಲ್ಲಲ್ಲ. ಈಗ ಚುನಾವಣೆ ಎದುರಿಸಲು ಟನ್ ಗಟ್ಟಲೆ ಹಣ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ದಿವಂಗತ ಮಾಜಿ ಸಚಿವ ವೀರಣ್ಣನವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಉಗ್ರಪ್ಪನವರು ಕಾಲ್ ಮಾಡಿ ಹೇಳಿದ್ರು. ತುಮಕೂರಿನಲ್ಲಿ ಒಂದು ನುಡಿನಮನ ಕಾರ್ಯಕ್ರಮ ಮಾಡ್ತೀವಿ. ನೀವು ಬರಲೇಬೇಕು ಅಂದ್ರು. ನಾನು ವೀರಣ್ಣನವರು ಕಾಲವಾದ ದಿನ ಕೆ.ಆರ್. ಪೇಟೆಗೆ ಹೋಗಿದ್ದೆ. ಹಾಗಾಗಿ, …
Read More »ಕ್ರಿಕೆಟ್ ಅಕಾಡೆಮಿಯಲ್ಲಿ ಪಿಚ್ ರೋಲರ್ ಹರಿದು 8 ವರ್ಷದ ಬಾಲಕ ದುರ್ಮರಣ
ಚಂಡೀಗಢ: ಕ್ರಿಕೆಟ್ ಅಕಾಡೆಮಿಯಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ 8 ವರ್ಷದ ಬಾಲಕನ ಮೇಲೆ ಮಿನಿ ಪಿಚ್ ರೋಲರ್ ಹರಿದು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ. ಮೃತ ಬಾಲಕನನ್ನು ಆಕಾಶ್ ಕುಮಾರ್ ಎಂದು ಗುರುತಿಸಲಾಗಿದೆ. ಮೂಲತಃ ಬಿಹಾರದ ನಳಂದಾ ನಿವಾಸಿಯಾಗಿದ್ದ ಆಕಾಶ್, ತನ್ನ ಸಹೋದರ ನೀಲ್ ಹಾಗೂ ಇತರ ಮಕ್ಕಳೊಂದಿಗೆ ಕ್ರಿಕೆಟ್ ಅಕಾಡೆಮಿ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕಾಡೆಮಿ ಆವರಣದಲ್ಲಿ …
Read More »ಬಂಡೆ ತಬ್ಬಿ ಬೆಂಗಳೂರಿಗರ ಪ್ರತಿಭಟನೆ – ಲಾಲ್‌ಬಾಗ್ ಉಳಿಸಲು ಬೃಹತ್ ಅಭಿಯಾನ
ಬೆಂಗಳೂರು: ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಸರ್ಕಾರದ ಕಾಯ್ದೆ ತಿದ್ದುಪಡಿಗೆ ಬೆಂಗಳೂರಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಐತಿಹಾಸಿಕ ಲಾಲ್‌ಬಾಗ್ ಮೇಲೂ ಸರ್ಕಾರದ ಕಣ್ಣು ಬಿದ್ದಿದೆ ಎಂದು ಆರೋಪಿಸಿ ನಾಗರಿಕರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ‘WALK IN LALBAGH, WALK FOR LALBAGH’ ಎಂಬ ಘೋಷಣೆಯೊಂದಿಗೆ ಇಂದು ಲಾಲ್‌ಬಾಗ್‌ನಲ್ಲಿ ಬೃಹತ್ ವಾಕಿಂಗ್ ಅಭಿಯಾನ ನಡೆಯುತ್ತಿದೆ. ಪರಿಸರವಾದಿ ಯಲ್ಲಪ್ಪ ರೆಡ್ಡಿ ಹಾಗೂ ಸಂಸದ ತೇಜಸ್ವಿ ಸೂರ್ಯ (Tejasvi …
Read More »KPSC ಬಗ್ಗೆ ಸಾರ್ವಜನಿಕರಿಗೆ ಅಸಹ್ಯಕರ ಭಾವನೆ ಮೂಡಿದೆ: ಹೆಚ್‌ಡಿಕೆ
ಬೆಂಗಳೂರು: ಕೆಪಿಎಸ್‌ಸಿ ಬಗ್ಗೆ ಸಾರ್ವಜನಿಕರಿಗೆ ಅಸಹ್ಯಕರ ಭಾವನೆ ಮೂಡಿದೆ, ಈ ಸಂಸ್ಥೆ ಬೇಕಾ ಎಂದು ಜನ ಕೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕೆಪಿಎಸ್‌ಸಿ ಎಇಇ ನೇಮಕಾತಿ ಅಕ್ರಮ ಬಗ್ಗೆ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಸಂಪೂರ್ಣ ಅಧಿಕಾರ ಸಿಕ್ಕರೆ ಕೆಪಿಎಸ್‌ಸಿ ರದ್ದು ಮಾಡುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಈಗ ಅಧಿಕಾರ ಸಿಕ್ಕಿದೆಯಲ್ಲ ಮಾಡಿ, ಗೃಹ ಸಚಿವರಾಗಿ ನೀವೇನು ಮಾಡಿದ್ದೀರಿ ಹೇಳಿ? …
Read More »ಪ್ರಮೋಷನ್ ನೀಡುವುದಾಗಿ 50 ಸಾವಿರ ರೂ. ಲಂಚ – ಸೆಲ್ಫಿ ವೀಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ
ದಾವಣಗೆರೆ: ಪ್ರಮೋಷನ್ ನೀಡುವುದಾಗಿ 50 ಸಾವಿರ ರೂ. ಲಂಚ ಪಡೆದು ಪ್ರಮೋಷನ್ ನೀಡದ ಹಿನ್ನೆಲೆ ಸೆಲ್ಫಿ ವೀಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾದನಬಾವಿ ಗ್ರಾಮದ ಬಳಿ ನಡೆದಿದೆ. ಮೋಹನ್ ಕುಮಾರ್ ಮೃತ ಬ್ಯಾಂಕ್ ಸಿಬ್ಬಂದಿ. ಮೋಹನ್ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಪ್ರಮೋಷನ್ ನೀಡುವುದಾಗಿ ಹೇಳಿ ಅಧಿಕಾರಿಗಳು ಮೋಹನ್ ಬಳಿ ನಕಲಿ ಅಂಕಪಟ್ಟಿಗೆ 50 ಸಾವಿರ ಲಂಚ ಪಡೆದಿದ್ದರು. ಮೋಹನ್ …
Read More »ಜೈಲಿನೊಳಗೆ ಕೈದಿಗಳ ನಡುವೆ ಮಾರಾಮಾರಿ; ಜಗಳ ಬಿಡಿಸಲು ಹೋದ ಸಿಬ್ಬಂದಿ ಮೇಲೆಯೇ ಹಲ್ಲೆ
ಹಾಸನ: ಜೈಲಿನೊಳಗೇ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಜಗಳ ಬಿಡಿಸಲು ಹೋದ ಜೈಲು ಸಿಬ್ಬಂದಿ ಮೇಲೂ ಹಲ್ಲೆ ನಡೆಸಿರುವ ಘಟನೆ ಹಾಸನ ನಗರದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಫೋನ್ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವಿಚಾರಣಾಧೀನ ಕೈದಿಗಳಾದ ಮೋಹನಕುಮಾರ ಹಾಗೂ ರಂಗಸ್ವಾಮಿ ನಡುವೆ ಮೊದಲು ಫೋನ್ ಕರೆ ಮಾಡುವ ವಿಚಾರಕ್ಕೆ ಜಗಳ ಶುರುವಾಗಿದೆ. ಬಳಿಕ ಜಗಳ ತಾರಕಕ್ಕೇರಿ ಇಬ್ಬರೂ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಜೈಲು ಮುಖ್ಯ …
Read More »ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ನನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ದು ಬಿಜೆಪಿ: ಬಿಕೆ ಹರಿಪ್ರಸಾದ್
ಬೀದರ್: ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ನನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ದು ಯಾರು? ಇಂಥವರನ್ನು ನೇಮಕ ಮಾಡಿದ್ದೆ ಬಿಜೆಪಿಯ ನಾಯಕರು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಅಧ್ಯಕ್ಷ ಬಿವೈ ವಿಜಯೇಂದ್ರ 20 ಕೋಟಿ ಲಂಚ ಹಗರಣದಲ್ಲಿ ಸ್ವಂತ ತಂದೆಯನ್ನೇ ಜೈಲಿಗೆ ಕಳುಹಿಸಿದರು. ಇವರು ನಮಗೆ ಲಂಚದ ಬಗ್ಗೆ ಪಾಠದ ನೈತಿಕತೆ …
Read More »ಸರ್ವರ್ ಡೌನ್ – ಪಡಿತರ ಸಿಗದೆ ಬೆಳಗಾವಿ ಜಿಲ್ಲೆಯಾದ್ಯಂತ ಕಾರ್ಡುದಾರರ ಪರದಾಟ
ಬೆಳಗಾವಿ: ಜಿಲ್ಲೆಯಾದ್ಯಂತ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸರ್ವರ್ ವೈಫಲ್ಯ ತಲೆದೋರಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಸಾರ್ವಜನಿಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಪಡಿತರಪಡೆಯಲು ಇಂದು ಕೊನೆಯ ದಿನವಾಗಿದ್ದು, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಹಾಗೂ ಯರಗಟ್ಟಿ ತಾಲೂಕಿನ ಮುಗಳಿಹಾಳ ಸೇರಿದಂತೆ ಹಲವೆಡೆ ಕಾರ್ಡುದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಆದರೆ, ತಾಂತ್ರಿಕ ಅಡಚಣೆಯಿಂದಾಗಿ ಸರ್ವರ್(Server) ಸಂಪರ್ಕ ಅತ್ಯಂತ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಂತ್ರದಲ್ಲಿ ಹೆಬ್ಬೆರಳಿನ …
Read More »
Laxmi News 24×7