ಹಾಸನ: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಸೋಮವಾರ (ಜು.20) ಹರದನಹಳ್ಳಿ ಸಮೀಪದ ಕ್ಯಾತನಹಳ್ಳಿಯಲ್ಲಿ ನೆರವೇರಲಿದೆ. ಈ ಹಿನ್ನೆಲೆ ಸೋಮವಾರ (ಜು.20) ಹೊಳೆನರಸೀಪುರ ತಾಲೂಕಿನ ಎಲ್ಲಾ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಹೊಳೆನರಸೀಪುರದ ಎಲ್ಲಾ ಅಂಗಡಿಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಗೌರವ ಸಲ್ಲಿಸಲು ವ್ಯಾಪಾರಸ್ಥರು ನಿರ್ಧರಿಸಿದ್ದಾರೆ. ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಹೊಳೆನರಸೀಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ …
Read More »Daily Archives: ಜುಲೈ 20, 2026
2 ಷರತ್ತುಗಳನ್ನ ಒಪ್ಪಿದ್ರೆ ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸ್ತಾರೆ: ಪತ್ನಿ ಗೀತಾಂಜಲಿ
ನವದೆಹಲಿ: ಸಾಮಾಜಿಕ, ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ತಮ್ಮ ಉಪವಾಸ ಸತ್ಯಾಗ್ರಹವನ್ನ ಸೋಮವಾರ (ಜುಲೈ 20) ಅಂತ್ಯಗೊಳಿಸಲು ಸಿದ್ಧರಾಗಿದ್ದಾರೆ. ಆದರೆ, ಅದಕ್ಕೂ ಮುನ್ನ 2 ಪ್ರಮುಖ ಷರತ್ತುಗಳನ್ನ ಈಡೇರಿಸಬೇಕೆಂದು ಅವರ ಪತ್ನಿ ಗೀತಾಂಜಲಿ ಆಂಗ್ಮೋ ತಿಳಿಸಿದರು. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಗೀತಾಂಜಲಿ, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಶಿಕ್ಷಣ ಕ್ಷೇತ್ರದ ಜವಾಬ್ದಾರಿತನದ ಪ್ರಶ್ನೆಯನ್ನ ರಾಜಕೀಯ ಪಕ್ಷಗಳು ಪ್ರಸ್ತಾಪಿಸುವ ಭರವಸೆ ನೀಡಿದರೆ ಮಾತ್ರ ಸೋನಂ ವಾಂಗ್ಚುಕ್ ಉಪವಾಸ …
Read More »ಆಟವಾಡುತ್ತಾ ರಸ್ತೆಗೆ ಬಂದ ಬಾಲಕನಿಗೆ ಕಾರು ಡಿಕ್ಕಿಯಾಗಿ ದುರ್ಮರಣ
ಶಿವಮೊಗ್ಗ: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಒಮ್ಮೆಲೆ ರಸ್ತೆಗೆ ಬಂದಿದ್ದು, ಈ ವೇಳೆ ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ಗುಂಡುಗದ್ದೆಯಲ್ಲಿ ನಡೆದಿದೆ. ಗುಂಡುಗದ್ದೆ ಗ್ರಾಮದ ನಿವಾಸಿ ಪ್ರಗತ್.ಕೆ.ಆರ್ ಮತ್ತು ರಂಜನಾ ದಂಪತಿ ಪುತ್ರ ಋಷ್ಯ.ಪಿ (7) ಮೃತಪಟ್ಟ ಬಾಲಕ. ಮನೆಯ ಬಳಿ ಮಧ್ಯಾಹ್ನದ ವೇಳೆಗೆ ಆಟವಾಡುತ್ತಿದ್ದ ಬಾಲಕ, ಒಮ್ಮೆಲೆ ರಸ್ತೆಗೆ ಬಂದಿದ್ದಾನೆ. ಈ ವೇಳೆ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ತೀರ್ಥಹಳ್ಳಿಯ ಜೆಸಿ …
Read More »ಮೀನು ತಿನ್ನಲು ಬಂದಿದ್ದ ಅಮಾಯಕನ ಮೇಲೆ ಲಾಂಗು-ಮಚ್ಚು ದಾಳಿ; ಯುವಕ ಸಾವು ಬದುಕಿನ ನಡುವೆ ಹೋರಾಟ
ಆನೇಕಲ್: ರೌಡಿಸಂ ಅನ್ನೋದು ಇವತ್ತು ನಿನ್ನೆಯ ಪಿಡುಗಲ್ಲ, ಆದರೆ ಇಬ್ಬರು ರೌಡಿಗಳ ನಡುವಿನ ವೈಷಮ್ಯಕ್ಕೆ, ಎಲ್ಲೋ ಇದ್ದ ಅಮಾಯಕನೊಬ್ಬ ಬಲಿಯಾಗಬೇಕಾ? ತನಗೂ ಅದಕ್ಕೂ ಸಂಬಂಧವೇ ಇಲ್ಲದಿದ್ದರೂ, ರಕ್ತದ ಮಡುವಿನಲ್ಲಿ ಬೀಳಬೇಕಾ? ಮೀನು ತಿನ್ನಲು ಹೋದ ಅಮಾಯಕ ಯುವಕನೊಬ್ಬ, ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಎದುರಾಳಿ ಗ್ಯಾಂಗ್ ಸದಸ್ಯನೆಂದು ತಪ್ಪಾಗಿ ಭಾವಿಸಿದ ರಕ್ಕಸರು, ಆತನ ಮೇಲೆ ಲಾಂಗು-ಮಚ್ಚುಗಳಿಂದ ಮನಬಂದಂತೆ ದಾಳಿ ನಡೆಸಿ ರಕ್ತಪಾತ ಹರಿಸಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಆಸ್ಪತ್ರೆಯ ಬೆಡ್ ಮೇಲೆ …
Read More »ಚಿನ್ನದಂಗಡಿ ಕಳ್ಳತನದಲ್ಲಿ ದೂರುದಾರನೇ ಆರೋಪಿ
ಬೆಳಗಾವಿ : ರಾಮದೇವಗಲ್ಲಿಯ ವಿ.ಪಿ.ವೇರ್ಣೇಕರ ಸನ್ಸ್ ಎಂಬ ಚಿನ್ನಾಭರಣ ಅಂಗಡಿಯಲ್ಲಿ ಗುರುವಾರ ರಾತ್ರಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ದೂರುದಾರ ಮಾಲೀಕನೇ ಆರೋಪಿಯಾಗಿ ಪೊಲೀಸರ ಬಂಧಿಯಾಗಿದ್ದಾನೆ. ತನ್ನದೇ ಅಂಗಡಿಯಿಂದ ತಾನೇ ಚಿನ್ನಾಭರಣ ಹೊತ್ತೊಯ್ದು ಕಳ್ಳತನದ ಕಥೆ ಕಟ್ಟಿದ ಮಾಲೀಕ ಈಗ ಕಳ್ಳನಾಗಿದ್ದಾನೆ. ಟಿಳಕವಾಡಿ ಸಾವರಕರ ರಸ್ತೆಯ ಕೃಷ್ಣಾನಂದ ವೇರ್ಣೇಕರ ಗುರುವಾರ ರಾತ್ರಿ ರಾಮದೇವಗಲ್ಲಿಯ ಅಂಗಡಿ ಬಾಗಿಲನ್ನು ಯಾರೋ ಮುರಿದು ಚಿನ್ನ ಮತ್ತು ಬೆಳ್ಳಿಯ ಆಭರಣ ಮತ್ತು ಹಣ ಕದ್ದುಕೊಂಡು ಹೋಗಿರುವ ಬಗ್ಗೆ ಖಡೇಬಜಾರ …
Read More »ಅಕ್ರಮವಾಗಿ ಅಳವಡಿಸಲಾಗಿರುವ ಪಂಪಸೆಟ್ ತೆರವುಗೊಳಿಸಲು ಆಗ್ರಹ
ಅಥಣಿ ಗ್ರಾಮೀಣ: ಯಲ್ಲಮ್ಮವಾಡಿ ಕೆರೆಯಲ್ಲಿ ಅಕ್ರಮವಾಗಿ ಅಳವಡಿಸಲಾಗಿರುವ ಪಂಪಸೆಟ್ ತಕ್ಷಣ ತೆರವುಗೊಳಿಸಿ, ಸಮರ್ಪಕವಾಗಿ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಅಥಣಿ ತಾಲೂಕಿನ ಯಲ್ಲಮ್ಮವಾಡಿ ಕೆರೆಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ ಪೂಜಾರಿ ಮಾತನಾಡಿ, ಐಗಳಿ, ಅರಟಾಳ, ಕೋಹಳ್ಳಿ, ಅಡಹಳ್ಳಿ, ಅಡಹಳ್ಳಟ್ಟಿ ಹಾಗೂ ರಾಮತೀರ್ಥ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನರು ಟ್ಯಾಂಕರ್ ಅವಲಂಬಿಸಿದ್ದಾರೆ. ರೈತರು …
Read More »ಸೋನಂ ವಾಂಗ್ ಚುಕ್ ಹೋರಾಟಕ್ಕೆ ಬೆಂಬಲ
ಬೆಳಗಾವಿ : ಜಂತರ್ ಮಂತರ್‌ನಿಂದ ಸೋನಂ ವಾಂಗ್‌ಚುಕ್‌ಗೆ ಬಲವಂತವಾಗಿ ತೆರವುಗೊಳಿಸಿವ ಕ್ರಮ ು ಹಾಗೂ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಶನಿವಾರ ಚನ್ನಮ್ಮ ವೃತ್ತದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಲಾಯಿತು. ವಾಂಗ್‌ಚುಕ್ ಹೋರಾಟ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಈವರೆಗೆ ನೀಟ್ ಪರೀಕ್ಷಾ ಅಕ್ರಮದಿಂದಾಗಿ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವುಗಳಿಗೆ ನ್ಯಾಯ ಸಿಗಬೇಕು ಮತ್ತು ದೇಶದ ಶಿಕ್ಷಣ …
Read More »ಡಿಜಿಟಲ್ ಬ್ಯಾಂಕಿಂಗ್‌ನಿಂದ ಅನುಕೂಲ
ಬೋರಗಾಂವ: ಇಂದಿನ ಯುಗದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯ. ಆದ್ದರಿಂದ ಸಂಸ್ಥೆಯಲ್ಲಿ ಕ್ಯೂಆರ್ ಕೋಡ್ ಮತ್ತು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನಾವರಣಗೊಳಿಸುವ ಮೂಲಕ ಡಿಜಿಟಲ್ ಬ್ಯಾಂಕಿಂಗ್‌ಗೆ ಅವಕಾಶ ಕಲ್ಪಿಸಿದ್ದೇವೆ ಎಂದು ಅರಿಹಂತ ಸೊಸೈಟಿ ಅಧ್ಯಕ್ಷ ಅಭಿನಂದನ ಪಾಟೀಲ ಹೇಳಿದರು. ಅರಿಹಂತ ಸೊಸೈಟಿಯಲ್ಲಿ ಶನಿವಾರ ಡಿಜಿಟಲ್ ಮೊಬೈಲ್ ಅಪ್ಲಿಕೇಶನ್ ಮತ್ತು ಕ್ಯೂಆರ್ ಕೋಡ್ ಅನಾವರಣಗೊಳಿಸಿ ಮಾತನಾಡಿ, ಡಿಜಿಟಲ್ ವಹಿವಾಟುಗಳು ಪಾರದರ್ಶಕತೆ ಹೆಚ್ಚಿಸುತ್ತವೆ, ಐಎ್ಎಸ್‌ಸಿ ಕೋಡ್, ಕ್ಯೂಆರ್ ಕೋಡ್, ಮೊಬೈಲ್ ಅಪ್ಲಿಕೇಶನ್ ಗ್ರಾಹಕರು ಬ್ಯಾಂಕಿನ …
Read More »ಗಮನ ಬೇರೆ ಕಡೆ ಸೆಳೆದು ಕಳ್ಳತನ: ಇಬ್ಬರ ಬಂಧನ
ಬೆಳಗಾವಿ: ಗಮನ ಬೇರೆ ಕಡೆ ಸೆಳೆದು ವಯಸ್ಸಾದ ಮಹಿಳೆಯ ಚಿನ್ನದ ಆಭರಣ ಕದ್ದು ವಂಚಿಸಿದ ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿಯ ರಾಯಬಾಗ ಪೊಲೀಸರು ಯಶಸ್ಚಿಯಾಗಿದ್ದಾರೆ. ರಾಯಬಾಗ ಮುಧೋಳ ಆಸ್ಪತ್ರೆಯ ರಸ್ತೆಯಲ್ಲಿ ಓರ್ವ ವಯಸ್ಸಾದ ಮಹಿಳೆಗೆ ಆಮಿಷವೊಡ್ಡಿ, ನಕಲಿ ಬಂಗಾರದ ಸರವನ್ನು ನೀಡಿ, ವಂಚಿಸಿ ಮಹಿಳೆಯ ಕೊರಳಲ್ಲಿದ್ದ ಬಂಗಾರದ ಸರವನ್ನು ತೆಗೆದುಕೊಂಡಿದ್ದಾರೆ ಎಂದು ವಂಚನೆಗೆ ಒಳಗಾದ ಮಹಾದೇವಿ ಎಂಬುವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ನೀಡಿದರು. ತಂಡ ರಚನೆ …
Read More »ಅಂಗಾಂಗ ದಾನ: ಬಾಗಲಕೋಟೆ ಟು ಬೆಳಗಾವಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ
ಬೆಳಗಾವಿ: ರೈಲು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಕುಟುಂಬಸ್ಥರು ಅಂಗಾಂಗ ದಾನ ಮುಂದಾಗಿದ್ದು, ಬಾಗಲಕೋಟೆಯಿಂದ ಬೆಳಗಾವಿಗೆ ರೋಗಿಯನ್ನು ತಲುಪಿಸಲು ಎರಡು ಜಿಲ್ಲೆಯ ಪೊಲೀಸರು ‘ಗ್ರೀನ್ ಕಾರಿಡಾರ್’ ಹಾಗೂ ‘ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಯಕ್ಕೆ ಸರಿಯಾಗಿ ಅಂಗಾಂಗ ದಾನ ಪ್ರಕ್ರಿಯೆ ಯಶಸ್ವಿಯಾಗಲು ನೆರವಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜೂನ್ನೂರ ಗ್ರಾಮದ ನಿವಾಸಿ ದುಂಡಪ್ಪ ಕೆಂಚಕನ್ನವರ (55) ಎಂಬುವವರೇ ಅಂಗಾಂಗ ದಾನ ಮಾಡಿದ ಪುಣ್ಯಾತ್ಮ ಧಾರವಾಡ …
Read More »
Laxmi News 24×7