ಬೆಳಗಾವಿ: ಗಮನ ಬೇರೆ ಕಡೆ ಸೆಳೆದು ವಯಸ್ಸಾದ ಮಹಿಳೆಯ ಚಿನ್ನದ ಆಭರಣ ಕದ್ದು ವಂಚಿಸಿದ ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿಯ ರಾಯಬಾಗ ಪೊಲೀಸರು ಯಶಸ್ಚಿಯಾಗಿದ್ದಾರೆ.
ರಾಯಬಾಗ ಮುಧೋಳ ಆಸ್ಪತ್ರೆಯ ರಸ್ತೆಯಲ್ಲಿ ಓರ್ವ ವಯಸ್ಸಾದ ಮಹಿಳೆಗೆ ಆಮಿಷವೊಡ್ಡಿ, ನಕಲಿ ಬಂಗಾರದ ಸರವನ್ನು ನೀಡಿ, ವಂಚಿಸಿ ಮಹಿಳೆಯ ಕೊರಳಲ್ಲಿದ್ದ ಬಂಗಾರದ ಸರವನ್ನು ತೆಗೆದುಕೊಂಡಿದ್ದಾರೆ ಎಂದು ವಂಚನೆಗೆ ಒಳಗಾದ ಮಹಾದೇವಿ ಎಂಬುವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ನೀಡಿದರು.
ತಂಡ ರಚನೆ ಮಾಡಿ ಪ್ರಕರಣದ ತನಿಖೆ ನಡೆಸಿದ ರಾಯಬಾಗ ಪೊಲೀಸರು, ನಾಗಮ್ಮ (71), ಜೆ. ಪುಟ್ಟಪ್ಪ (39), ಎಂಬುವರನ್ನು ಬಂಧಿಸಲಾಗಿದೆ.
ಬಂಧಿತರಿಂದ 1,40,000 ರೂ. ಮೌಲ್ಯದ 10 ಗ್ರಾಂ ಬಂಗಾರದ ಸರ ವಶಪಡಿಸಿಕೊಳ್ಳಲಾಗಿದೆ. ಈ ಜಾಲವನ್ನು ಪತ್ತೆ ಮಾಡಿದ ತಂಡಕ್ಕೆ ಬೆಳಗಾವಿ ಜಿಲ್ಲೆ ಪೊಲೀಸ್ ಅಧೀಕ್ಷಕರುರವರು ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.
Laxmi News 24×7