Breaking News

Daily Archives: ಜುಲೈ 29, 2026

ಕೆಪಿಎಸ್‌ಸಿ ಅಕ್ರಮ: ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ

ಶಿವಮೊಗ್ಗ: ಕರ್ನಾಟಕ ಲೋಕಸೇವಾ ಆಯೋಗ ದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಶಿವಮೊಗ್ಗದ  ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಒತ್ತಾಯಿಸಿದೆ. ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ಟ್ರಸ್ಟ್ ಪದಾಧಿಕಾರಿಗಳು, 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ 40 ಲಕ್ಷದಿಂದ 80 ಲಕ್ಷ ರೂ.ವರೆಗೆ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ ಎಂದು …

Read More »

ದರ್ಶನ್ ಭೇಟಿಯಾದ ಧನ್ವೀರ್- ಮುನಿಸು ಮರೆಯಾಯ್ತಾ?

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸದಾ ದರ್ಶನ್ ಬೆನ್ನಿಗೆ ನಿಂತಿರುತ್ತಿದ್ದ ನಟ ಧನ್ವೀರ್ ಇತ್ತೀಚಿನ ದಿನಗಳಲ್ಲಿ ಅವರಿಂದ ಅಂತ ಕಾಪಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಇತ್ತು. ದರ್ಶನ್ ಮತ್ತು ಧನ್ವೀರ್ ನಡುವೆ ಯಾವುದೂ ಸರಿ ಇಲ್ಲ ಅಂತ ದರ್ಶನ್ ಬಳಗದಲ್ಲೇ ಮಾತುಗಳು ಕೇಳಿ ಬಂದಿದ್ದವು. ಇದೀಗ ದಿಢೀರ್ ಅಂತ ದರ್ಶನ್ಅವರನ್ನ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾದ ನಂತರ, ಅವರ ಕುಟುಂಬದ ಜೊತೆ ಸದಾ …

Read More »

ಬೆಂಗಳೂರಿನ ಐಪಿಎಸ್‌ ಲೇಔಟ್‌ನಲ್ಲಿ ರೇವ್‌ಪಾರ್ಟಿ – ಮೂವರು ಅರೆಸ್ಟ್‌, ಮಹಿಳೆಯರ ರಕ್ಷಣೆ

ಬೆಂಗಳೂರು: ನಗರದ ಪ್ರತಿಷ್ಠಿತ ಐಪಿಎಸ್‌ ಲೇಔಟ್‌ನಲ್ಲಿ ರೇವ್‌ ಪಾರ್ಟಿ  ಆಯೋಜನೆ ಮಾಡಿದ್ದ ಅಡ್ಡೆ ಮೇಲೆ ಸಿಸಿಬಿ ಮಹಿಳಾ ಘಟಕ ದಾಳಿ ನಡೆಸಿದ್ದು, ಮೂವರನ್ನು ಬಂಧಿಸಲಾಗಿದೆ. ಪಾರ್ಟಿ ಆಯೋಜನೆ ಮಾಡಿದ್ದ ದೀಕ್ಷಿತ್, ವೇದಾಂತ್ ಪಂಡಿತ್ ಹಾಗೂ ಶಂಕರ್ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಮಹಿಳಾ ಘಟಕ ನಿಷೇಧಿತ ಹುಕ್ಕಾ , ಇ-ಸಿಗರೇಟ್ ಹಾಗೂ ಮಧ್ಯ ಜಪ್ತಿ ಮಾಡಿದ್ದು, ಪಾರ್ಟಿಯಲ್ಲಿ ಸಿಲುಕಿದ್ದ ಮಹಿಳೆಯರನ್ನ ರಕ್ಷಣೆ ಮಾಡಲಾಗಿದೆ. ಏನಿದು …

Read More »

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಬೇಸತ್ತ ಜನ; ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ

ಗದಗ: ಮೂಲ ಸೌಲಭ್ಯಗಳ ಕೊರತೆಯಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಎದುರೇ ಚರಂಡಿಯ ಕಸ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ನಡೆದಿದೆ. ಸೂಡಿ ಗ್ರಾಮದ ರಾಜೀವ್ ಗಾಂಧಿ ಕಾಲೋನಿಯ ನಿವಾಸಿಗಳು ಜೆಸಿಬಿ ಮೂಲಕ ಚರಂಡಿಯ ಕಲುಷಿತ ಕಸವನ್ನು ತಂದು ಗ್ರಾಮ ಪಂಚಾಯತ್ ಕಚೇರಿ ಮುಂದೆ ಸುರಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಒಂದು ವರ್ಷದಿಂದ ಚರಂಡಿ ಹಾಗೂ ರಸ್ತೆ ಸ್ವಚ್ಛತೆ …

Read More »

ವೇಶ್ಯಾವಾಟಿಕೆ ಜಾಲ ಭೇದಿಸಿದ ಅಥಣಿ ಪೊಲೀಸರು; ಇಬ್ಬರು ಅರೆಸ್ಟ್

ಚಿಕ್ಕೋಡಿ: ಬೆಳಗಾವಿ  ಜಿಲ್ಲೆಯ ಅಥಣಿ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವ ವೆಂಕಟೇಶ್ವರ ಲಾಡ್ಜ್ ಮೇಲೆ ಅಥಣಿ ವೃತ್ತದ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಥಣಿಯ ಕವಾಸಕಾನ ಗಲ್ಲಿಯ ನಿವಾಸಿ, ಲಾಡ್ಜ್ ಮ್ಯಾನೇಜರ್ ರುದ್ರಪ್ಪ ಗುರುಲಿಂಗಪ್ಪ ನಾವಲಗಿ (72) ಹಾಗೂ ಅಥಣಿ ತಾಲೂಕಿನ ಬೇವನೂರ ಗ್ರಾಮದ ನಿವಾಸಿ ಶ್ರೀನಿವಾಸ ಗೋರಕ ವಾಘಮೋರೆ (32) ಬಂಧಿತ ಆರೋಪಿಗಳು. ಅಥಣಿ ಪಟ್ಟಣದ …

Read More »

ಗೋವಾದಲ್ಲಿ 48 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದ ಕಾರವಾರ ಪೊಲೀಸರು

ಕಾರವಾರ: ಗೋವಾದಿಂದ ಕಾರವಾರಕ್ಕೆ  ಅಕ್ರಮವಾಗಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಜಾಲವನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಗಾಂಜಾ, ನಗದು, ಡಿಜಿಟಲ್ ವೇಯಿಂಗ್ ಮಿಷನ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಮೊದಲ ಹಂತವಾಗಿ ಕಾರವಾರ ತಾಲೂಕಿನ ಸದಾಶಿವಗಡ ತಾರೀವಾಡದ ನಾಗರಾಜ್ (26) ಹಾಗೂ ವಿನೋದ್ ಎಂಬುವರನ್ನು ಪೊಲೀಸರು ಸೋಮವಾರ ಬಂಧಿಸಿದ್ದರು. ಆರೋಪಿಗಳಿಂದ 465 ಗ್ರಾಂ ತೂಕದ 25 ಸಾವಿರ ಮೌಲ್ಯದ ಗಾಂಜಾ, …

Read More »

ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ – ಮಾನನಷ್ಟ ಮೊಕದ್ದಮೆ ಕೇಸಲ್ಲಿ ಸಮನ್ಸ್ ಜಾರಿ

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿಗೆ  ಮತ್ತೊಂದು ಸಂಕಷ್ಟ ಶುರುವಾಗಿದೆ. ಮಾನನಷ್ಟ ಮೊಕದ್ದಮೆ ಕೇಸಲ್ಲಿ  ನ್ಯಾಯಾಲಯ ಜನಾರ್ದನ ರೆಡ್ಡಿಗೆ ಸಮನ್ಸ್ ಜಾರಿ ಮಾಡಿದೆ. ತಮಿಳುನಾಡು ಸಂಸದ ಸಸಿಕಾಂತ್ ಸೆಂಥಿಲ್ ನೀಡಿದ್ದ ಮಾನನಷ್ಟ ಕೇಸ್ ಅಲ್ಲಿ ಸಮನ್ಸ್ ಜಾರಿಯಾಗಿದೆ. ಪ್ರಕರಣ ಸಂಬಂದ ಕಾಗ್ನಿಜೆನ್ಸ್ ತೆಗೆದುಕೊಂಡ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ಸಮನ್ಸ್ ಜಾರಿಗೊಳಿಸಿದೆ. ನ್ಯಾ.ಸಂದೀಪ್ ಪಾಟೀಲ್ ಅವರಿಂದ ಸಮನ್ಸ್ ಜಾರಿಯಾಗಿದ್ದು, ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ಹಿಂದೆ ಸೆಸಿಕಾಂತ್ ಸೆಂಥಿಲ್ …

Read More »

ಎಸ್‌ಐಆರ್ 3 ತಿಂಗಳು ವಿಸ್ತರಿಸಿ – ದೇವನೂರು, ಗುಹಾ ಸಲ್ಲಿಸಿದ್ದ PIL ವಜಾ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯನ್ನ ಒಂದರಿಂದ ಮೂರು ತಿಂಗಳವರೆಗೆ ವಿಸ್ತರಣೆ ಕೋರಿ ಸಾಹಿತಿ ದೇವನೂರು ಮಹಾದೇವ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಸೇರಿದಂತೆ ಇನ್ನಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ  ಹೈಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ಕೆ.ಎಸ್.ಹೇಮಲತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಎಸ್‌ಐಆರ್ ಅವಧಿ ವಿಸ್ತರಣೆ ಕೇಂದ್ರ ಚುನಾವಣೆ ಆಯೋಗಕ್ಕೆ ಬಿಟ್ಟ ವಿಚಾರ. …

Read More »

ತಮಿಳುನಾಡಿಗೆ ನೀರು ಬಿಡಲು ಆದೇಶ; ಸರ್ವಪಕ್ಷ ಸಭೆ ಕರೆಯಲಿ: ಆರ್. ಅಶೋಕ್‌

ಬೆಂಗಳೂರು : ತಮಿಳುನಾಡಿಗೆ 3500 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಆದೇಶ  ಮಾಡಿರೋದು ರಾಜ್ಯ ಸರ್ಕಾರದ ವೈಫಲ್ಯ. ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯಬೇಕೆಂದು ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ಸಿಎಂ ಡಿಕೆ ಶಿವಕುಮಾರ್ ರಾಜ್ಯದ ಪರವಾಗಿ ಸರಿಯಾಗಿ ವಾದ ಮಾಡಿಲ್ಲ. ನೀರಾವರಿ ಸಚಿವ ರಾಮಲಿಂಗಾ …

Read More »

ರಾಜ್ಯ ಸರ್ಕಾರ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು: ಗಣಿಗ ರವಿಕುಮಾರ್ ಆಗ್ರಹ

ಮಂಡ್ಯ: ಕಾವೇರಿ ನೀರು ನಿಯಂತ್ರಣ ಸಮಿತಿ  ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಂಡ್ಯ ಕಾಂಗ್ರೆಸ್  ಶಾಸಕ ಗಣಿಗ ರವಿಕುಮಾರ್, ರಾಜ್ಯ ಸರ್ಕಾರವು  ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಆಗ್ರಹ ಮಾಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಹಾಗೂ ರೈತರಿಗೆ ಕುಡಿಯಲು ಮತ್ತು ಕೃಷಿಗೆ ನೀರಿಲ್ಲದ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ CWRC ಯಾವ ಆಧಾರದ ಮೇಲೆ ನೀರು ಬಿಡುವಂತೆ ಆದೇಶಿಸಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ನಮ್ಮ …

Read More »