Breaking News

3ನೇ ಮಗು ಹುಟ್ಟಿದ್ರೆ 30,000, 4ನೇ ಮಗು ಹುಟ್ಟಿದ್ರೆ 40,000 ರೂ. ಗಿಫ್ಟ್‌ – ಚಂದ್ರಬಾಬು ನಾಯ್ಡು ಘೋಷಣೆ

Spread the love

ಅಮರಾವತಿ: ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಿಸಲು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು  ಹೊಸ ಯೋಜನೆಯೊಂದನ್ನ ಘೋಷಿಸಿದ್ದಾರೆ. 3ನೇ ಮಗು ಹುಟ್ಟಿದ್ರೆ 30,000 ರೂ. ಮತ್ತು 4ನೇ ಮಗು ಹುಟ್ಟಿದ್ರೆ 40,000 ರೂ. ಪ್ರೋತ್ಸಾಹ ಧನ  ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸ್ವರ್ಣ ಆಂಧ್ರ, ಸ್ವಚ್ಛ ಆಂಧ್ರ’ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 3ನೇ ಮತ್ತು 4ನೇ ಮಗು ಹುಟ್ಟಿದ್ರೆ ಆರ್ಥಿಕ ಪ್ರೋತ್ಸಾಹಧನ ನೀಡುವುದಾಗಿ ತಿಳಿಸಿದರು.

ಜನನ ಪ್ರಮಾಣ  ಹೆಚ್ಚಿಸಲು ಸಮಾಜ ಒಟ್ಟಾಗಿ ಕೆಲಸ ಮಾಡುವ ಸಮಯ ಈಗ ಬಂದಿದೆ. ಈ ಕುರಿತು ಸರ್ಕಾರ ಅಧಿಕೃತ ತೀರ್ಮಾನ ಕೈಗೊಂಡಿದ್ದು, ಮುಂದಿನ 1 ತಿಂಗಳೊಳಗೆ ಸಂಪೂರ್ಣ ಮಾರ್ಗಸೂಚಿ ಮತ್ತು ವಿವರಗಳನ್ನ ಪ್ರಕಟಿಸಲಿದೆ ಎಂದು ತಿಳಿಸಿದರು.

ಕೆಲ ದಿನಗಳ ಹಿಂದೆ ಸಿಎಂ ನಾಯ್ಡು ಅವರು, 2ನೇ ಮಗು ಹುಟ್ಟಿದ್ರೆ 25,000 ರೂ. ಪ್ರೋತ್ಸಾಹ ಧನ ನೀಡುವ ಯೋಜನೆ ಘೋಷಿಸಿದ್ದರು. ಮಾರ್ಚ್‌ 5 ರಂದು ಈ ಯೋಜನೆಯನ್ನ ಅನುಷ್ಠಾನಗೊಳಿಸಿದ್ದರು. ಆದ್ರೆ ಜನನ ಪ್ರಮಾಣದಲ್ಲಿ ಕುಸಿತ ಕಂಡುಬಂದ ಹಿನ್ನೆಲೆ 3 ಮತ್ತು 4ನೇ ಮಗು ಹೊಂದಿದ ಕುಟುಂಬಗಳಿಗೆ ಪ್ರೋತ್ಸಾಹ ಧನ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.
ಇತ್ತೀಚಿನ ದಿನಗಳಲ್ಲಿ, ಕೆಲ ದಂಪತಿಗಳು ಕುಟುಂಬದ ಆದಾಯ ಕಡಿಮೆ ಮಾಡಲು ಒಂದು ಮಗು ಹೊಂದಲು ಬಯಸುತ್ತಿದ್ದಾರೆ. ಮೊದಲು ಮಗು ಗಂಡು ಮಗುವಾಗಿದ್ದರೆ, 2ನೇ ಮಗು ಹೊಂದುವ ಪ್ರಮೇಯಕ್ಕೆ ಹೋಗುತ್ತಿಲ್ಲ. ಅಲ್ಲದೇ ಕೆಲ ಹೆಣ್ಣುಮಕ್ಕಳು ನಿಗದಿತ ವಯಸ್ಸಿಂತ ತಡವಾಗಿ ಮದುವೆ ಆಗುತ್ತಿದ್ದು, ಆರೋಗ್ಯ ಸಮಸ್ಯೆಗಳು ಕೂಡ ಮಕ್ಕಳನ್ನ ಜನನಕ್ಕೆ ತೊಡಗು ತರುತ್ತಿವೆ.


Spread the love

About Laxminews 24x7

Check Also

ಭಾರತದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ರೆ ಭೂಪಟದಲ್ಲಿ ಇಲ್ಲದಂತೆ ಮಾಡ್ತೀವಿ: ಪಾಕ್‌ಗೆ ಖಡಕ್‌ ವಾರ್ನಿಂಗ್‌

Spread the loveನವದೆಹಲಿ: ಭಯೋತ್ಪಾದಕರಿಗೆ ಆಶ್ರಯ ನೀಡುವುದು, ಭಾರತದ  ವಿರುದ್ಧ ಕಾರ್ಯಾಚರಣೆ ನಡೆಸುವುದನ್ನು ಮುಂದುವರಿಸಿದರೆ, ಭೂಪಟದಲ್ಲಿ ಪಾಕಿಸ್ತಾನ ಇರಬೇಕೆ ಅಥವಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ