Home / 2021 / ಮೇ / 26

Daily Archives: ಮೇ 26, 2021

ಐಸಿಎಐ ಸಿಎ ಪರೀಕ್ಷೆ ಮುಂದೂಡಿಕೆ

‌ನವದೆಹಲಿ: ಮೇ 21 ಮತ್ತು 22ರಂದು ನಡೆಯಬೇಕಿದ್ದ ಐಸಿಎಐ ಸಿಎ ಮಧ್ಯಂತರ ಮತ್ತು ಅಂತಿಮ ಪರೀಕ್ಷೆಗಳು ಜೂನ್‌ 5 ರಿಂದ ನಡೆಯಲಿವೆ ಎಂದು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ತಿಳಿಸಿದೆ. ಆದ್ರೆ, ಪರೀಕ್ಷೆಗಳ ಸಮಯ ಸೇರಿದಂತೆ ವಿವರವಾದ ಅಧಿಸೂಚನೆಯನ್ನು ಇನ್ನೂ ಘೋಷಿಸಲಾಗಿಲ್ಲ. ‘ಕೋವಿಡ್-19 ಸಾಂಕ್ರಾಮಿಕ ರೋಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಅವರ ಕಷ್ಟಗಳನ್ನು ತಗ್ಗಿಸಲು, ಅಂತಿಮ ಮತ್ತು ಮಧ್ಯಂತರ ಚಾರ್ಟರ್ಡ್ ಅಕೌಂಟೆಂಟ್‌ಸ್ ಪರೀಕ್ಷೆಗಳನ್ನ ಮುಂದೂಡಲು …

Read More »

ಮುಖ್ಯಮಂತ್ರಿ ಬದಲಾವಣೆ ವಿಚಾರ ಶೇ.100 ರಷ್ಟು ನಿಜ,: ಆರ್ ಅಶೋಕ್

ಬೆಂಗಳೂರು: ಕೊರೋನಾ ಅಬ್ಬರದ ನಡುವೆಯೇ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೆರಡು ವರ್ಷದ ಅಧಿಕಾರವದಿ ಪೂರೈಸಬೇಕಾಗಿದೆ. ಆದ್ರೆ, ಅವಧಿಗೂ ಮುನ್ನ ಅವರನ್ನ ಬದಲಿಸಿ ಬೇರೆಯವರಿಗೆ ಸಿಎಂ ಪಟ್ಟಕಟ್ಟುವ ಕಸರತ್ತು ನಡೆದಿವೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಶಾಸಕರು, ಸಚಿವರುಗಳು ದೆಹಲಿಗೆ ತೆರಳಿ ಹೈಕಮಾಂಡ್‌ ಜೊತೆ ಮಾತುಕತೆ ನಡೆಸಿದ್ದಾರೆ. ಇವೆಲ್ಲಾ ಬೆಳಗವಣಿಗೆಗಳು ನಡೆಯುತ್ತಿರುವುದು ನಿಜ ಎಂದು ಸ್ವತಃ ಕಂದಾಯ ಸಚಿವ ಆರ್. ಅಶೋಕ್ ಖಚಿತಪಡಿಸಿದ್ದಾರೆ. ಇದರೊಂದಿಗೆ …

Read More »

ಇಬ್ಬರು ಸಹೋದರರು ಸೇರಿಂತೆ ಬೆಳಗಾವಿ ಜಿಲ್ಲೆಯಲ್ಲಿ ಮೂವರು ಶಿಕ್ಷಕರು ಕೋವಿಡ್​ಗೆ ಪ್ರಾಣ ಕಳೆದುಕೊಂಡಿದ್ದಾರೆ.

ಚಿಕ್ಕೋಡಿ: ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಹೋದರರಿಬ್ಬರು ಮಹಾಮಾರಿ ಕೊರೊನಾಗೆ ಬಲಿಯಾಗಿರುವ ಘಟನೆ ತೋಪಿನಕಟ್ಟಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಗರ್ಲಜುಂಜಿಯ ಗ್ರಾಮದ ಪಿ.ಕೆ ಕುಂಬಾರ ಹಾಗೂ ಅವರ ತಮ್ಮ ನಾರಾಯಣ್ ಕೆ.ಕುಂಬಾರ ಮೃತರು. ಈ ಇಬ್ಬರು ಸಹೋದರರು ತೋಪಿನಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಲವು ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ತಮ್ಮನಾದ ನಾರಾಯಣ್ ಕೆ.ಕುಂಬಾರಗೆ ಕಳೆದ ಹತ್ತು ದಿನಗಳ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ‌ ಆತನಿಂದ …

Read More »

ನಾಯಕತ್ವ ಬದಲಾವಣೆ ವಿಚಾರ; ಆಪ್ತ ಸಚಿವರ ಬಳಿ ಬೇಸರ ವ್ಯಕ್ತಪಡಿಸಿದ ಸಿಎಂ ಬಿ ಎಸ್ ವೈ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ನಡುವೆಯೇ ಮತ್ತೆ ನಾಯಕತ್ವ ಬದಲಾವಣೆ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಪ್ತ ಸಚಿವರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.   ಈ ಹಿಂದೆ ಹಲವುಬಾರಿ ನಾಯಕತ್ವ ಬದಲಾವಣೆ ಬಗ್ಗೆ ಮಾತು ಕೇಳಿಬಂದರೂ ಅದಾವುದಕ್ಕೂ ಕಿವಿಗೊಡದ ಸಿಎಂ, ಈ ಬಾರಿ ಸ್ವತಃ ಬೇಸರ ವ್ಯಕ್ತಪಡಿಸಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸ್ಥಾನಕ್ಕೆ ಕೆಲ ನಾಯಕರ ಹೆಸರು ಕೇಳಿಬರುತ್ತಿದೆ. ಪ್ರತಿನಿತ್ಯ ನನ್ನ ಬಳಿ …

Read More »

ಗುಡ್ ನ್ಯೂಸ್: ಮಕ್ಕಳ ಶಾಲಾ ಶುಲ್ಕದಲ್ಲಿ ಶೇಕಡ 25 ರಷ್ಟು ವಿನಾಯಿತಿ

ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮಕ್ಕಳ ಶಾಲಾ ಶುಲ್ಕ ಇಳಿಕೆ ಮಾಡಲು ಅನೇಕ ಶಾಲೆಗಳ ಆಡಳಿತ ಮಂಡಳಿಗಳು ತೀರ್ಮಾನ ಕೈಗೊಂಡಿವೆ. ಕಳೆದ ಬಾರಿ ರಾಜ್ಯ ಸರ್ಕಾರ ಸೂಚನೆ ನೀಡಿದ ನಂತರವೂ ಅನೇಕ ಶಾಲೆಗಳು ಶುಲ್ಕದಲ್ಲಿ ವಿನಾಯಿತಿ ನೀಡಿರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಶುಲ್ಕ ಪಾವತಿಸಿದ ಪೋಷಕರಿಗೆ ಶೇಕಡ 30 ರಷ್ಟು ವಿನಾಯಿತಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೀಡುವುದಾಗಿ ಹೇಳಲಾಗಿತ್ತು. ಆದರೆ, ಈಗ ವಿನಾಯಿತಿಯನ್ನು ನೀಡುತ್ತಿಲ್ಲ. ಈ ವರ್ಷ ಅನೇಕ ಶಾಲೆಗಳು ಪೋಷಕರು ಮತ್ತು …

Read More »

ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು ಸಾವು? ಆಸ್ಪತ್ರೆ ಬಳಿ ಮುಗಿಲುಮುಟ್ಟಿದ ಪಾಲಕರ ಆಕ್ರಂದನ

ದಾವಣಗೆರೆ: ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು‌ ಮೃತಪಟ್ಟಿದೆ ಎಂದು ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ಮೃತ ಮಗುವಿನ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೇವರಹಳ್ಳಿ ನಿವಾಸಿ ಲಕ್ಷ್ಮೀ ಮತ್ತು ತಿಮ್ಮೇಶ್ ದಂಪತಿ ಮಗು ಮೃತಪಟ್ಟಿದೆ. ಲಕ್ಷ್ಮೀಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ವೈದರು ಇರಲಿಲ್ಲ. ದಾದಿ ಸಾಕಮ್ಮ ಎಂಬುವರೇ ಹೆರಿಗೆ ಮಾಡಿಸಿದ್ದರು. ಆದರೆ ಮಗು ಬದುಕಿಲ್ಲ. ಹೆರಿಗೆ ಮಾಡಿಸುವಾಗ ದಾದಿ ಕೈಯಿಂದ …

Read More »

SBI ವಾಹಿವಾಟುಗಳಿಗೆ ಹೊಸ ನಿಯಮ; ಜುಲೈ 1ರಿಂದ ಜಾರಿ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಶಾಖೆಗಳು ಮತ್ತು ಎಟಿಎಂಗಳಿಂದ ಹಣ ಹಿಂಪಡೆಯುವುದು, ಚೆಕ್ ಬುಕ್ ಶುಲ್ಕ, ಹಣ ವರ್ಗಾವಣೆ ಮತ್ತು ಹಣಕಾಸೇತರ ವಹಿವಾಟುಗಳಿಗೆ ನಿಯಮಗಳು ಮತ್ತು ಕಟ್ಟುಪಾಡುಗಳನ್ನು ಬದಲಾಯಿಸಿದೆ. ಎಸ್ಬಿಐನ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್ಬಿಡಿ) ಖಾತೆದಾರರಿಗೆ ಅನ್ವಯವಾಗುವ ಈ ನಿಯಮಗಳು 2021ರ ಜುಲೈ 1ರಿಂದ ಜಾರಿಗೆ ಬರಲಿವೆ. ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್ಬಿಡಿ) ಖಾತೆಯು ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಲಭ್ಯವಿದೆ. …

Read More »

ಈ ಗಂಭೀರ ಸ್ಥಿತಿಯನ್ನು ತಡೆಗಟ್ಟಲು ದೇಶದ 100 ಕೋಟಿ ಜನರಿಗೆ ಕೋವಿಡ್ ತಡೆ ಲಸಿಕೆ (ವ್ಯಾಕ್ಸಿನೆಷನ್) ಮಾಡುವುದೊಂದೆ ಶಾಶ್ವತ ಪರಿಹಾರ: ಎಂ.ಬಿ.ಪಾಟೀಲ್.

ವಿಜಯಪುರ: ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಈ ಗಂಭೀರ ಸ್ಥಿತಿಯನ್ನು ತಡೆಗಟ್ಟಲು ದೇಶದ 100 ಕೋಟಿ ಜನರಿಗೆ ಕೋವಿಡ್ ತಡೆ ಲಸಿಕೆ (ವ್ಯಾಕ್ಸಿನೆಷನ್) ಮಾಡುವುದೊಂದೆ ಶಾಶ್ವತ ಪರಿಹಾರ. ಆದಷ್ಟು ಬೇಗ ಲಸಿಕೆಯನ್ನು ನೀಡಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಮಹಾಮಾರಿ ಮೊದಲನೇ ಅಲೆ ಮುಗಿದು, ಸದ್ಯ ಎರಡನೇಯ ಅಲೆಯ ಹಾನಿಯನ್ನು ಅನುಭವಿಸುತ್ತಿರುವ ನಮ್ಮ ದೇಶಕ್ಕೆ ಮುಂದೆ 3ನೇ ಅಲೆ ಆತಂಕವೂ ಇದೆ. ಈ ಕಾರಣದಿಂದ ದೇಶದಲ್ಲಿ ಲಕ್ಷಾಂತರ …

Read More »

ಬ್ಲಾಕ್ ಫಂಗಸ್ ಚಿಕಿತ್ಸೆಗೆ ಎಂಫೋಟೆರಿಸಿನ್-ಬಿ ಔಷಧಿ ಕರ್ನಾಟಕಕ್ಕೆ ಹೆಚ್ಚುವರಿ 1221 ವೈಲ್ಸ್ ಹಂಚಿಕೆ

ಬೆಂಗಳೂರು, ಮೇ 26- ಬ್ಲಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಎಂಫೋಟೆರಿಸಿನ್-ಬಿ ಔಷಧಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಇಂದು ಹೆಚ್ಚುವರಿಯಾಗಿ 1221 ವೈಲ್ಸ್ ಗಳನ್ನು ಹಂಚಿಕೆ ಮಾಡಿದೆ.ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರು, ದೇಶಾದ್ಯಂತ ವಿವಿಧ ರಾಜ್ಯಗಳಗೆ ಹಂಚಿಕೆ ಮಾಡಿರುವ ಔಷಧಿಗಳ ಬಗ್ಗೆ ಮಾಹಿತಿ ನೀಡಿದ್ದು, 481 ಕಪ್ಪು ಶಿಲೀಂದ್ರ ಪ್ರಕರಣಗಳಿರುವ ಕರ್ನಾಟಕಕ್ಕೆ 1221 ವೈಲ್ಸ್ ಗಳನ್ನು ಹಂಚಿಕೆ …

Read More »

ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿ ದಂಡಯಾತ್ರೆ ಕೈಗೊಂಡಿದ್ದ ಬಂಡಾಯಗಾರರಿಗೆ ಹಿನ್ನಡೆ

ಬೆಂಗಳೂರು : ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿ ದಂಡಯಾತ್ರೆ ಕೈಗೊಂಡಿದ್ದ ಬಂಡಾಯಗಾರರಿಗೆ ಹಿನ್ನಡೆಯಾಗಿದೆ. ಹೈಕಮಾಂಡ್ ಭೇಟಿಗೆ ಬಂದಿದ್ದ ಸಚಿವ ಸಿ.ಪಿ ಯೋಗೇಶ್ವರ್‌, ಶಾಸಕ ಅರವಿಂದ ಬೆಲ್ಲದ್ ಸೇರಿದಂತೆ ಮತ್ತಿತರರ ಭೇಟಿಗೆ ಹೈಕಮಾಂಡ್ ನಾಯಕರು ಸಮಯ ನೀಡಿಲ್ಲ.ಇದರಿಂದಾಗಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸೇರಿ ಹಲವು ನಾಯಕರ ಭೇಟಿಗೆ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ದೇಶದಾದ್ಯಂತ …

Read More »