Breaking News
Home / 2021 / ಮೇ / 20

Daily Archives: ಮೇ 20, 2021

ಬಿಡಿಸಲು ಬಂದ ಕುಟುಂಬಸ್ಥರಿಗೆ ಪೊಲೀಸ್​ ಇನ್ಸ್​ಪೆಕ್ಟರ್​ ಕೈ ಮುಗಿದ ಬೇಡಿಕೊಂಡ ಘಟನೆ

ವಿಜಯನಗರ: ಲಾಕ್​ಡೌನ್​ ಸಂದರ್ಭದಲ್ಲಿ ಅನಗತ್ಯವಾಗಿ ಹೊರ ಬಂದವರನ್ನು ಬಿಡಿಸಲು ಬಂದ ಕುಟುಂಬಸ್ಥರಿಗೆ ಪೊಲೀಸ್​ ಇನ್ಸ್​ಪೆಕ್ಟರ್​ ಕೈ ಮುಗಿದ ಬೇಡಿಕೊಂಡ ಘಟನೆ ಹೊಸಪೇಟೆಯ ಉದ್ಯೋಗ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಸರ್​ ನನ್ನ ತಮ್ಮನನ್ನು ಬಿಟ್ಟುಬಿಡಿ ಎಂದು ವ್ಯಾಪಾರಿಯೊಬ್ಬರು ಕೇಳಿಕೊಂಡು ಬಂದಿದ್ದರು. ಈ ವೇಳೆ ಮಾತನಾಡಿದ ಇನ್ಸ್​ಪೆಕ್ಟರ್​, ದಯಮಾಡಿ ನಿಮಗೆ ಕೈ ಮುಗಿದು ಕೇಳುವೆ ಜನರನ್ನು ಬದುಕಿಸಿ ಎಂದರು. ನಿಮಗೆ ದುಡ್ಡು ಬೇಕು, ನಮಗೆ ಜನ ಬೇಕು. ನಾವು ಕೂಡ ಹೆಂಡತಿ …

Read More »

ಮೂರು ತಿಂಗಳ ಕಾಲ ಸಾಲ ಮರುಪಾವತಿಗೆ ವಿನಾಯಿತಿ :B.S.Y.

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಿಕೆಯಾಗಿರುವ ನಿರ್ಬಂಧಗಳ ಬೆನ್ನಲ್ಲೇ ರಾಜ್ಯ ಸರಕಾರ ಭರ್ಜರಿ ಪ್ಯಾಕೇಜ್ ಘೋಷಣೆ ಮಾಡಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಸಾಲ ಮರುಪಾವತಿದಾರರಿಗೆ ಬಿಗ್ ರಿಲೀಪ್ ಕೊಟ್ಟಿದ್ದು, ಮೂರು ತಿಂಗಳ ಕಾಲ ಸಾಲ ಮರುಪಾವತಿಗೆ ವಿನಾಯಿತಿ ನೀಡಿದೆ. ರೈತರು ಹಾಗೂ ಸ್ವಸಹಾಯ ಸಂಘಗಳಿಂದ ಸಾಲ ಪಡೆದಿರುವವರಿಗೆ ಸಾಲದ ಕಂತುಗಳ ಮರು ಪಾವತಿಗೆ ಮೂರು ತಿಂಗಳ ಕಾಲ ಅವಕಾಶವನ್ನು ಕಲ್ಪಿಸಿದೆ. ಜುಲೈ ಅಂತ್ಯದ ವರೆಗೆ ಸಾಲದ …

Read More »

ಸಿ ಟಿ ರವಿ ವಿರುದ್ದ ಕಾಂಗ್ರೆಸ್‌ ನಿಂದ ಪೋಲೀಸ್‌ ದೂರು

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್‌ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದು, ಅವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಹನುಮಂತ ನಗರ ಬ್ಲಾಕ್ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಿ.ತೇಜೇಶ್ ಕುಮಾರ್ ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದಾರೆ. ‘ಸಿ.ಟಿ.ರವಿ ಅವರು ಕೊರೊನಾ ವಿಚಾರವನ್ನು ಪ್ರಸ್ತಾಪಿಸಿ, ಕಾಂಗ್ರೆಸ್‌ ಪಕ್ಷದ ವಿರುದ್ಧ ಹಲವು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ …

Read More »

ಆಕ್ಸಿಜನ್ ದುರಂತ: ಚಾಮರಾಜನಗರ ಡಿಸಿ ಡಾ.ಎಂ.ಆರ್‌.ರವಿ ಎತ್ತಂಗಡಿ

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಹೊಣೆಯಾಗಿಸಿ ಸ್ಥಳ ನೀಡದೇ ಸರ್ಕಾರ ಅವರನ್ನು ಎತ್ತಂಗಡಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಫೆ‌.13ರಂದೇ ಚಾಮರಾಜನಗರ ಡಿಸಿ ರವಿ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಬಿ‌.ಸಿ.ಸತೀಶ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಬಳಿಕ ಕೆಲವು ಬೆಳವಣಿಗೆಗಳು ನಡೆದು ರವಿ ಗಡಿಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು. ದುರಂತ ನಡೆದ ಬಳಿಕ ನಡೆದ ನ್ಯಾಯಾಂಗ ತನಿಖೆಯಲ್ಲಿ …

Read More »

ಕೊವಿಡ್ ಪರೀಕ್ಷೆಯನ್ನು ಮನೆಯಲ್ಲಿ ನಾವೇ ಮಾಡಿಕೊಳ್ಳಬಹುದು; ಐಸಿಎಂಆರ್​ನಿಂದ ಬಿಡುಗಡೆಯಾಯ್ತು ಹೊಸ ಕಿಟ್

ದೆಹಲಿ: ಕೊವಿಡ್-19 ಪರೀಕ್ಷೆಯನ್ನು ನಮಗೆ ನಾವೇ ಮಾಡಿಕೊಳ್ಳಬಹುದು. ಯಾವುದೇ ವೈದ್ಯಕೀಯ ಸಿಬ್ಬಂದಿಯ ಇರುವಿಕೆಯ ಹೊರತಾಗಿ, ಕೊರೊನಾ ಪರೀಕ್ಷೆಯನ್ನು ನಾವೇ ಮಾಡಿಕೊಳ್ಳಬಹುದು. ಈ ನೂತನ ವ್ಯವಸ್ಥೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಇಂದು (ಮೇ 19) ಸೂಚನೆ ನೀಡಿದೆ. ನಮಗೆ ನಾವೇ ಕೊರೊನಾ ಪರೀಕ್ಷೆ ನಡೆಸುವುದು ಹೇಗೆ ಎಂಬ ಬಗ್ಗೆ ಸೂಚನೆ ನೀಡಿದ ಐಸಿಎಂಆರ್ ಕೊವಿಸೆಲ್ಫ್ ಎಂಬ ಕಿಟ್​ನ ಬಗ್ಗೆ ವಿವರಣೆ ನೀಡಿದೆ. ಸ್ವತಃ ನಮಗೆ ನಾವೇ ಕೊವಿಡ್-19 ಪರೀಕ್ಷೆ …

Read More »

ಆಹಾರ ಪೊಟ್ಟಣಗಳ ಮೇಲೆ ಕೊರೊನಾ ಸೋಂಕಿತರಿಗೆ ವಿಶೇಷ ಸಂದೇಶ ಕಳುಹಿಸಿದ ಬಾಲಕ

ಸಂಪೂರ್ಣ ವಿಶ್ವವೇ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಆತ್ಮವಿಶ್ವಾಸ ತುಂಬಬಲ್ಲ ಸಣ್ಣ ಮಾತೂ ಸಹ ಭಾರೀ ಖುಷಿಯನ್ನ ಕೊಡಬಹುದು. ಇದೇ ಮಾತನ್ನ ಅತ್ಯಂತ ಚಿಕ್ಕ ವಯಸ್ಸಿಗೆ ಅರ್ಥ ಮಾಡಿಕೊಂಡ ಬಾಲಕನೊಬ್ಬ ತನ್ನ ತಾಯಿ ಕೋವಿಡ್​ ರೋಗಿಗಳಿಗೆಂದು ತಯಾರು ಮಾಡಿದ್ದ ಊಟದ ಪ್ಯಾಕೆಟ್​ಗಳ ಮೇಲೆ ‘ಖುಷಿಯಾಗಿರಿ’ ಎಂದು ಬರೆದಿದ್ದಾನೆ. ಬಾಲಕ ಈ ರೀತಿ ಆಹಾರ ಪೊಟ್ಟಣಗಳ ಮೇಲೆ ಸಂದೇಶ ಬರೆಯುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ …

Read More »

ಹಂಪಿಯ 70ಕ್ಕೂ ಹೆಚ್ಚು ಖಾಸಗಿ ಗೈಡ್​​ಗಳಿಗೆ ಸಹಾಯ ಮಾಡಿದ ಮಾತೃ ಹೃದಯಿ ಡಾ.ಸುಧಾಮೂರ್ತಿ

ವಿಜಯನಗರ: ಈ ಕೊರೊನಾ ಬಂದಾಗಿನಿಂದ ಒಂದಲ್ಲ ಒಂದು ಸಮಸ್ಯೆ ಎಲ್ಲರನ್ನೂ ಕಾಡ್ತಿದೆ. ಯಾರನ್ನೂ ಬಿಡದ ಈ ಕೊರೊನಾದಿಂದಾಗಿ, ಅದೆಷ್ಟೋ ಜನರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಸಂಕಷ್ಟಕ್ಕೆ ಸಿಲುಕಿದವರಿಗೆ ಹಲವರು ನೆರವಿನ ಹಸ್ತವನ್ನೂ ಚಾಚಿದ್ದಾರೆ. ಅದರಲ್ಲಿ, ಸದಾ ಎಲ್ಲರ ಕಷ್ಟಗಳಿಗೆ ಸ್ಪಂದಿಸೋ ಮಾತೃ ಹೃದಯಿ ಡಾ.ಸುಧಾಮೂರ್ತಿ ಮಿಡಿದಿದ್ದಾರೆ. ಹಂಪಿ ಪ್ರವಾಸಿ ಗೈಡ್ಸ್‌ಗಳಿಗೆ ನೆರವಿನ ಸಹಾಯ ಹಸ್ತ ನೀಡಿದ್ದಾರೆ ಸುಧಾಮೂರ್ತಿ. ಕೊರೊನಾ ಹೊಡೆತಕ್ಕೆ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ …

Read More »

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರೀಯತೆಯ ರೇಟಿಂಗ್ ಕೆಳಮಟ್ಟಕ್ಕೆ ಕುಸಿದಿದೆ : ಸಮೀಕ್ಷೆ

ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ರೋಗದ ವಿನಾಶಕಾರಿ ಎರಡನೇ ತರಂಗವನ್ನು ಹತೋಟಿಗೆ ತರಲು ದೇಶವು ತೀವ್ರವಾಗಿ ಹೆಣಗಾಡುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರೀಯತೆಯ ರೇಟಿಂಗ್ ಕೆಳಮಟ್ಟಕ್ಕೆ ಕುಸಿದಿದೆ ಎಂದು ಸಮೀಕ್ಷೆಯೊಂದು ಮಂಗಳವಾರ ಹೇಳಿದೆ. ಕೊರೋನಾ ಬಿಕ್ಕಟ್ಟು ನಿರ್ವಹಿಸುವಲ್ಲಿ ಪ್ರಧಾನಿ ಮೋದಿ ನಾಯಕತ್ವ ವಿಫಲವಾಗಿದ್ದು ಈ ಹಿನ್ನಲೆಯಲ್ಲಿ ಅವರ ಜನಪ್ರಿಯತೆಯ ಗ್ರಾಫ್ ಕುಸಿತವಾಗಿದೆ ಎಂದು ಭಾರತೀಯ ಮತ್ತು ಅಮೆರಿಕದ ಡೇಟಾ ಇಂಟಲಿಜೆನ್ಸಿ ಸಂಸ್ಥೆಯ ಸಮೀಕ್ಷೆ ಹೊರಹಾಕಿದೆ. 2014 ರಲ್ಲಿ ಬಿಜೆಪಿ ಭರ್ಜರಿ ಗೆಲುವಿನೊಂದಿಗೆ …

Read More »

ಸಕಾಲಕ್ಕೆ ಆಕ್ಸಿಜನ್ ಒದಗಿಸಿ 50 ರೋಗಿಗಳ ಜೀವ ಉಳಿಸಿದ ಕಾಂಗ್ರೆಸ್ ಯುವ ನಾಯಕ

ರಾಯಚೂರು: ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಏಕಾಏಕಿ ಆಕ್ಸಿಜನ್ ಕೊರತೆ ಎದುರಾದ ಘಟನೆ ನಡೆದಿದ್ದು ಸಕಾಲಕ್ಕೆ ಕಾಂಗ್ರೆಸ್ ಯುವ ನಾಯಕ ಬಸನಗೌಡ ಬಾದರ್ಲಿ ಆಕ್ಸಿಜನ್ ಪೂರೈಸುವ ಮೂಲಕ 50 ಜನರ ಪ್ರಾಣ ಉಳಿಸಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಿದ್ದಂತೆಯೇ ಸ್ವತಃ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಬಸನಗೌಡ ಬಾದರ್ಲಿ ಅವರಿಗೆ ಕರೆ ಮಾಡಿ ಆಕ್ಸಿಜನ್ ಒದಗಿಸುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಕೆಲವೇ ಹೊತ್ತಿನಲ್ಲಿ ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ 15 ಜಂಬೋ …

Read More »

ಶೀಘ್ರವೇ ಮಾರುಕಟ್ಟೆ ಬರಲಿದೆ ಮೂಗಿಗೆ ಹಾಕುವ ಕೊರೊನಾ ವ್ಯಾಕ್ಸಿನ್

ಹೈದರಾಬಾದ್: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ನೇಸಲ್ ವ್ಯಾಕ್ಸಿನ್​ ಮೊದಲ ಹಂದ ಪ್ರಯೋಗ ಮುಕ್ತಾಯಗೊಂಡಿದೆ. ನಾಗ್ಪುರದ ರಾಹತೆ ಆಸ್ಪತ್ರೆಯಲ್ಲಿ 50 ಜನರ ಮೇಲೆ ನೇಸಲ್ ವ್ಯಾಕ್ಸಿನ್ ಮೊದಲ ಹಂತದ ಪ್ರಯೋಗ ಮಾಡಲಾಗಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ನೇಸಲ್ ವ್ಯಾಕ್ಸಿನ್​ ಪ್ರಯೋಗಕ್ಕೆ ಅನುಮತಿ ಸಿಕ್ಕಿತ್ತು.. ಈ BBV 154 ಇಂಟ್ರಾ ನೇಸಲ್ ವ್ಯಾಕ್ಸಿನ್​ನ್ನು ಮೂಗಿನ ಎರಡೂ ಹೊಳ್ಳೆಗೆ 0.2 ml ಎರಡು ಡ್ರಾಪ್ ಹಾಕಲಾಗುತ್ತೆ. ಮ್ಯುಕೋಸಲ್ ಇಮ್ಯುನಿಟಿಯನ್ನ ಹೆಚ್ಚಿಸುವ ವ್ಯಾಕ್ಸಿನ್ …

Read More »