Breaking News

ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು ಸಾವು? ಆಸ್ಪತ್ರೆ ಬಳಿ ಮುಗಿಲುಮುಟ್ಟಿದ ಪಾಲಕರ ಆಕ್ರಂದನ

Spread the love

ದಾವಣಗೆರೆ: ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು‌ ಮೃತಪಟ್ಟಿದೆ ಎಂದು ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ಮೃತ ಮಗುವಿನ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ದೇವರಹಳ್ಳಿ ನಿವಾಸಿ ಲಕ್ಷ್ಮೀ ಮತ್ತು ತಿಮ್ಮೇಶ್ ದಂಪತಿ ಮಗು ಮೃತಪಟ್ಟಿದೆ. ಲಕ್ಷ್ಮೀಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ವೈದರು ಇರಲಿಲ್ಲ. ದಾದಿ ಸಾಕಮ್ಮ ಎಂಬುವರೇ ಹೆರಿಗೆ ಮಾಡಿಸಿದ್ದರು. ಆದರೆ ಮಗು ಬದುಕಿಲ್ಲ.

ಹೆರಿಗೆ ಮಾಡಿಸುವಾಗ ದಾದಿ ಕೈಯಿಂದ ಶಿಶು ಜಾರಿ ಕೆಳಗೆ ಬಿದ್ದ ಸಾವನ್ನಪ್ಪಿದೆ ಎಂದು ಲಕ್ಷ್ಮೀ ಸಂಬಂಧಿಕರು ಆರೋಪಿಸಿದ್ದಾರೆ. ಮಗು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ಥಳಕ್ಕೆ ಬಂದ ವೈದ್ಯ ಡಾ.ಮಂಜುನಾಥ, ಹೆರಿಗೆಯ ಅಂತಿಮ ಕ್ಷಣದಲ್ಲಿ ಗರ್ಭಿಣಿಯನ್ನ ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಮಗು ಗರ್ಭದಲ್ಲೇ ಮೃತಪಟ್ಟಿರುವುದಕ್ಕೆ ಮೆಡಿಕಲ್ ರಿಪೋರ್ಟ್ ಸ್ಟಷ್ಟವಾಗಿದೆ. ಗರ್ಭಿಣಿಯ ಈ ಸ್ಥಿತಿಯನ್ನ ಇಂಟ್ರಾ ಯೂಟರೈನ್ ಡೆತ್ ಎನ್ನುತ್ತಾರೆ. ಹೆರಿಗೆಗೂ ಮುನ್ನ ಗರ್ಭದಲ್ಲೇ ಮಗುವಿನ ಸಾವಾಗಿದೆ. ಈ ಬಗ್ಗೆ ಅನುಮಾನವಿದ್ದು, ದೂರು ನೀಡಿದರೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ