Breaking News

ಪತಿ ಮೇಲೆ ಪತ್ನಿ ಆಸಿಡ್‌ ಅಟ್ಯಾಕ್ – ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌

Spread the love

ಲಕ್ನೋ: ಗಂಡನ  ಮೇಲೆ ಆಸಿಡ್ ಎರಚಿದ ಮಹಿಳೆಗೆ ಉತ್ತರ ಪ್ರದೇಶದ  ಸಂಭಾಲ್ ಜಿಲ್ಲೆಯ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1.75 ಲಕ್ಷ ದಂಡ ವಿಧಿಸಿದೆ.

ಕಹಕಂಶಾ (30) ಶಿಕ್ಷೆಗೆ ಗುರಿಯಾದ ಮಹಿಳೆ. ಈಕೆ 2025ರ ಮಾ. 7 ರಂದು ಪತಿ ಮುಜಾಫರ್ (35) ಮಲಗಿದ್ದ ವೇಳೆ ಹತ್ಯೆ ಮಾಡುವ ಉದ್ದೇಶದಿಂದ ಮುಖಕ್ಕೆ ಆಸಿಡ್ ಸುರಿದಿದ್ದಳು. ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೂ ಮತ್ತೆ ಮತ್ತೆ ಆತನ ಮೇಲೆ ಆಸಿಡ್‌ ದಾಳಿ ನಡೆಸಿದ್ದಳು. ಇದರಿಂದ ಮುಖ ಸಂಪೂರ್ಣವಾಗಿ ವಿರೂಪಗೊಂಡು ಎರಡೂ ಕಣ್ಣುಗಳ ದೃಷ್ಟಿಯನ್ನು ಆತ ಕಳೆದುಕೊಂಡಿದ್ದ.

ಚಂದೌಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಫಾಸ್ಟ್ ಟ್ರ್ಯಾಕ್ ಕೋರ್ಟ್) ಗೋಪಾಲ್ ಜಿ ಕಹಕಂಶಾಳನ್ನು ಮೇ 27 ರಂದು ದೋಷಿ ಎಂದು ಘೋಷಿಸಿತ್ತು. ಇಂದು (ಜೂ.1) ಶಿಕ್ಷೆ ಪ್ರಮಾಣವನ್ನು ಕೋರ್ಟ್ ಪ್ರಕಟಿಸಿದೆ.


Spread the love

About Laxminews 24x7

Check Also

5 ಲಕ್ಷ ಜನರಿಗೆ ಉದ್ಯೋಗ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಅವಕಾಶ: ಈಶ್ವರ್‌ ಖಂಡ್ರೆ

Spread the loveಬೆಂಗಳೂರು: ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ  ಬದಲಾದ ರೂಪ ವಿಬಿಜಿ ರಾಮ್ ಜಿ ಅಡಿಯಲ್ಲಿ  ಪ್ರತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ