Breaking News

ಮಹಾರಾಷ್ಟ್ರದಲ್ಲಿ ಲಡ್ಕಿ ಬಹೀನ್ ಯೋಜನೆ ಪರಿಷ್ಕರಣೆ – 80 ಲಕ್ಷ ನಕಲಿ ಫಲಾನುಭವಿಗಳಿಗೆ ಕೊಕ್

Spread the love

ಮುಂಬೈ: ಮಹಾರಾಷ್ಟ್ರದಲ್ಲಿ ಲಡ್ಕಿ ಬಹೀನ್  ಯೋಜನೆಯಲ್ಲಿ 80 ಲಕ್ಷ ಮಹಿಳೆಯರನ್ನು ಫಡ್ನವೀಸ್ ಸರ್ಕಾರ ಕೈಬಿಟ್ಟಿದೆ.

ವಿಧಾನಸಭೆ ಚುನಾವಣೆಗೆ ಮುನ್ನ ಮಹಿಳಾ ಮತ ಸೆಳೆಯಲು ಮೈತ್ರಿಕೂಟ ಪ್ರತಿಮಹಿಳೆಗೆ ಮಾಸಿಕ 1500 ರೂ. ಕೊಡೋದಾಗಿ ಘೋಷಿಸಿತ್ತು. ಇದೀಗ ನಕಲಿ ಫಲಾನುಭವಿಗಳ ಪತ್ತೆಗೆ ಇ-ಕೆವೈಸಿ ಕಡ್ಡಾಯಗೊಳಿಸಿದ್ದು, ಈ ಪ್ರಕ್ರಿಯೆ ಪೂರ್ಣಗೊಳಿಸದ 80 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಡಲಾಗಿದೆ. ಯೋಜನೆಯಲ್ಲಿ ಈ ಮೊದಲಿದ್ದ 2.5 ಕೋಟಿ ಫಲಾನುಭವಿಗಳ ಸಂಖ್ಯೆ ಈಗ 1.7 ಕೋಟಿಗೆ ಇಳಿದಿದೆ.

ಸುಮಾರು 50-55 ಲಕ್ಷ ಮಹಿಳೆಯರು ಇ-ಕೆವೈಸಿ ಪೂರ್ಣಗೊಳಿಸಿಲ್ಲ. ಸುಮಾರು 12 ಲಕ್ಷ ಮಹಿಳೆಯರು 2.5 ಲಕ್ಷ ವಾರ್ಷಿಕ ಆದಾಯ ಮಿತಿ ಮೀರಿದ್ದು, ಐಟಿ ಪಾವತಿಸುವವರಾಗಿದ್ದಾರೆ. 4.5 ಲಕ್ಷಕ್ಕೂ ಹೆಚ್ಚು ಮಹಿಳೆಯರು 65 ವರ್ಷ ವಯೋಮಿತಿ ಮೀರಿದ್ದರೆ, ಸುಮಾರು 5 ಲಕ್ಷ ಮಹಿಳೆಯರು ಈಗಾಗಲೇ `ನಮೋ ಶೇತ್ಕರಿ’ (ರೈತ) ಯೋಜನೆ ಸೌಲಭ್ಯ ಪಡೀತಿದ್ದಾರೆ. ವಿಪಕ್ಷಗಳು ಕಿಡಿಕಾರಿದ್ದು, ಇ-ಕೆವೈಸಿ ಮಾಡಿರುವ ಫಲಾನುಭವಿಗಳಿಗೂ ಹಣ ಬರುತ್ತಿಲ್ಲ ಎಂದಿದೆ.


Spread the love

About Laxminews 24x7

Check Also

ಹೊಸ ಪಕ್ಷ ಸ್ಥಾಪಿಸುತ್ತಾರಾ ಅಣ್ಣಾಮಲೈ?

Spread the loveಚೆನ್ನೈ: ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ಮುಂದಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ