Breaking News

ನಾವೆಲ್ಲರು ಮಕ್ಕಳ ಭವಿಷ್ಯಕ್ಕಾಗಿ ಪ್ರತಿಭಟನೆ ಮಾಡ್ತಿದ್ದೇವೆ: ಡಿಕೆಶಿ

Spread the love

ಬೆಂಗಳೂರು: ನಾವೆಲ್ಲರು ಮಕ್ಕಳ ಭವಿಷ್ಯಕ್ಕಾಗಿ ಪ್ರತಿಭಟನೆ ಮಾಡ್ತಾ ಇದ್ದೇವೆ ಅಂತ ಸಿಎಂ ಡಿಕೆ ಶಿವಕುಮಾರ್  ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೋರಾಟವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ  ಮಾತನಾಡಿದ ಅವರು, ನಾವೆಲ್ಲರು ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡ್ತಿದ್ದೇವೆ. 100ಕ್ಕೂ ಹೆಚ್ಚು ಬಾರಿ ಪೇಪರ್ ಲೀಕ್ ಆಗಿದೆ. ಇಡೀ ದೇಶ ಮತ್ತು ಇಡೀ ವಿಶ್ವ ಯುವಕರ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಿದೆ. ಭಾರತ ಟ್ಯಾಲೆಂಟ್ ಹಬ್. ನಮ್ಮ ಟ್ಯಾಲೆಂಟ್ ಇಡೀ ಪ್ರಪಂಚದಲ್ಲಿ ಇಲ್ಲ. ಇಂತಹ ಸಮಯದಲ್ಲಿ ನಾವು ಕ್ವಾಲಿಟಿ ಮೆಂಟೇನ್ ಮಾಡಬೇಕು. ಈ ರೀತಿ ಪೇಪರ್ ಲೀಕ್ ಆದ್ರೆ ಯಾರು ಜವಾಬ್ದಾರಿ ತಗೊಂಡಿಲ್ಲ ಅಂದರೆ ಯಾರು ಹೊಣೆ ಅಂತ ಪ್ರಶ್ನೆ ಮಾಡಿದ್ದಾರೆ. 

ಮಕ್ಕಳ ಭವಿಷ್ಯ ಹಾಳಾಗ್ತಿದೆ ಅಂತ ಪ್ರತಿಭಟನೆ ಮಾಡ್ತಾ ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಎಲ್ಲರ ಹಕ್ಕು. ಪ್ರತಿಭಟನೆ ಮಾಡೋದು ಎಲ್ಲಾ ಪಕ್ಷ, ಎಲ್ಲಾ ಯುವಕರ ಹಕ್ಕು. ಪ್ರತಿಭಟನೆ ಮಾಡುವವರ ಮೇಲೆ ಲಾಠಿಜಾರ್ಜ್ ಮಾಡಿ, ತೊಂದರೆ ಕೊಟ್ಟರೆ ಹೇಳಿ. ಸೋಶಿಯಲ್ ಮೀಡಿಯದಲ್ಲಿ ಮಾತ್ರ ಬಂದಿದೆ. ಆದ್ರೆ ಮಾಧ್ಯಮಗಳು ಇದನ್ನ ತೋರಿಸ್ತಾ ಇಲ್ಲ. 4ನೇ ಅಂಗದಲ್ಲಿ ಮಾಧ್ಯಮ ಇದೆ. ಮಾಧ್ಯಮಗಳು ಏನ್ ಮಾಡ್ತಾ ಇದ್ದರು. ಯಾಕೆ ಪ್ರತಿಭಟನೆ ಬಗ್ಗೆ ಹೇಳಲಿಲ್ಲ. ಮಾಧ್ಯಮಗಳದ್ದು ತಪ್ಪಿದೆ ಎಂದು ಆರೋಪ ಮಾಡಿದ್ದಾರೆ.

ಹೊಸ ಭವಿಷ್ಯ, ಹೊಸ ಜನರೇಷನ್. ಈ ಪ್ರತಿಭಟನೆಗೆ ನಾವು ಬೆಂಬಲ ಕೊಟ್ಟಿದ್ದೇವೆ. ನಿಮ್ಮ ಮಕ್ಕಳೇ ವಿದ್ಯಾಭ್ಯಾಸ ಮಾಡ್ತಾ ಇದ್ದಾರೆ. ನಿಮ್ಮ ಮಕ್ಕಳ ಭವಿಷ್ಯ ಹಾಳಾಗ್ತಿದೆ. ಯಾಕೆ ಮುಚ್ಚಿಕೊಳ್ತಾ ಇದ್ದೀರಾ? ಒಪ್ಪಿಕೊಂಡು ರಾಜೀನಾಮೆ ಕೊಡಿ. ರಾಜೀನಾಮೆ ಕೊಡೋದ್ರಲ್ಲಿ ಏನು ತಪ್ಪಿದೆ? ರಾಜೀನಾಮೆ ಕೊಟ್ಟರೆ ಏನ್ ಆಗುತ್ತದೆ ಅಂತ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಸಂಸತ್‌ನಲ್ಲಿ ಚರ್ಚೆ ಆಗಲಿ. ಇದೆಲ್ಲವೂ ಚರ್ಚೆ ಆಗಲಿ. ಟೀಕೆ ಮಾಡಿ ತಿದ್ದಿಕೊಳ್ಳಬೇಕು. ಪ್ರಧಾನಿ ಮೋದಿ ಈಗ ಟ್ವೀಟ್ ಮಾಡಿದ್ದಾರೆ. ಮೊದಲೇ ಟ್ವೀಟ್ ಮಾಡಬೇಕಿತ್ತು ಅಲ್ಲವಾ? ಪ್ರಧಾನಿ ಮೋದಿ ಅವರು ಆ ದಿನವೇ ಎಚ್ಚೆತ್ತುಕೊಳ್ಳಬೇಕಿತ್ತು. ಇಷ್ಟು ಜನ ಈಚೆ ಬಂದ ಮೇಲೆ ಎಚ್ಚೆತ್ತುಕೊಳ್ಳೋದಾ? ಎಂದು ಪ್ರಶ್ನಿಸಿದ್ದಾರೆ.


Spread the love

About Laxminews 24x7

Check Also

ಡಿಸೆಂಬರ್ ಹೊತ್ತಿಗೆ ಕ್ವಿನ್ ಸಿಟಿಯಲ್ಲಿ 200 ಎಕರೆ ಸೆಮಿಕಂಡಕ್ಟರ್ ಪಾರ್ಕ್ ಆರಂಭ: ಎಂ.ಬಿ ಪಾಟೀಲ್

Spread the loveಬೆಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ಜಾರಿಗೆ ಬರಲಿರುವ 2026-2031ರ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯಲ್ಲಿ ಆಧುನಿಕ ಎಲೆಕ್ಟ್ರಾನಿಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ