Breaking News

ಹಿಟ್ & ರನ್ ಕೇಸ್‌ಗೆ ಬಿಗ್ ಟ್ವಿಸ್ಟ್ – ಸ್ನೇಹಿತನನ್ನು ಕೊಂದು ಸೈಲೆಂಟಾಗಿದ್ದ ಹಂತಕ ತಿಂಗಳ ಬಳಿಕ ಅರೆಸ್ಟ್

Spread the love

ಚಿಕ್ಕಮಗಳೂರು: ‌ಇತ್ತೀಚೆಗೆ ತಾಲೂಕಿನ ಹಿರೇಗೌಜ ಬಳಿ ನಡೆದಿದ್ದ ಹಿಟ್‌ & ರನ್‌ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಹತ್ಯೆಯಾದ ಯುವಕನನ್ನು ಆತನ ಸ್ನೇಹಿತನೇ ಕೊಲೆಗೈದು ಕತೆ ಕಟ್ಟಿರುವುದು ತನಿಖೆ ವೇಳೆ ಗೊತ್ತಾಗಿದೆ.

ಯಶವಂತ್ (26) ಕೊಲೆಯಾಗಿದ್ದ ಯುವಕ. ಈತನ ಸ್ನೇಹಿತ ಸಚಿನ್ ಹತ್ಯೆಗೈದ ಆರೋಪಿಯಾಗಿದ್ದಾನೆ. ಇಬ್ಬರೂ ಹಾಸನದ  ವಿಜಯನಗರದ ನಿವಾಸಿಗಳು.

ಕಳೆದ ಜೂನ್ 12 ರಂದು ರಾತ್ರಿ ಹಿರೇಗೌಜ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ‌ಈ ಜಾಗದಲ್ಲಿ ಗೂಡ್ಸ್ ಆಟೋವೊಂದು ಪಲ್ಟಿಯಾಗಿತ್ತು. ಆಟೋ ಪಕ್ಕದಲ್ಲೇ ಶವ ಪತ್ತೆಯಾಗಿತ್ತು. ಇದರಿಂದಾಗಿ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿತ್ತು. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಯಶವಂತ್ ಬೈಕ್ ನಾಪತ್ತೆ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ತನಿಖೆ ವೇಳೆ ಕೊಲೆ ರಹಸ್ಯ ಬಯಲಿಗೆ ಬಂದಿದೆ. ಕೊಲೆಗೈದು ಏನೂ ಗೊತ್ತಿಲ್ಲದವನಂತೆ ಆರೋಪಿ ಸಚಿನ್‌ ನಟಿಸಿದ್ದ. ಒಂದೂವರೆ ತಿಂಗಳ ತನಿಖೆ ನಂತರ ಪೊಲೀಸರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಳೆಯ ದ್ವೇಷ, ಹಣಕಾಸು ವಿಚಾರಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಕಾರು ಮಾರಾಟ ಮಾಡಿದ್ದ ಹಣ ಪಡೆಯಲು ಬಂದಿದ್ದ ಯಶವಂತ್, ಸಚಿನ್ ಜೊತೆ ಬೈಕಿನಲ್ಲಿ ಅಜ್ಜಂಪುರಕ್ಕೆ ಬಂದಿದ್ದ. ಈ ವೇಳೆಯೇ ಕೊಲೆ ಮಾಡಿದ್ದ ಎನ್ನಲಾಗಿದೆ.‌


Spread the love

About Laxminews 24x7

Check Also

ಡಿಸೆಂಬರ್ ಹೊತ್ತಿಗೆ ಕ್ವಿನ್ ಸಿಟಿಯಲ್ಲಿ 200 ಎಕರೆ ಸೆಮಿಕಂಡಕ್ಟರ್ ಪಾರ್ಕ್ ಆರಂಭ: ಎಂ.ಬಿ ಪಾಟೀಲ್

Spread the loveಬೆಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ಜಾರಿಗೆ ಬರಲಿರುವ 2026-2031ರ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯಲ್ಲಿ ಆಧುನಿಕ ಎಲೆಕ್ಟ್ರಾನಿಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ