Breaking News

ಸುಳೇಭಾವಿಯಲ್ಲಿ ನೂತನ ‘ಬನಶ್ರೀ ಭವನ’ ಉದ್ಘಾಟನೆ; ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲ

Spread the love

ಸುಳೇಭಾವಿ: ಗ್ರಾಮದ ಶ್ರೀ ಶಾಕಾಂಭರಿ ದೇವಸ್ಥಾನದ ಆವರಣದಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ‘ಬನಶ್ರೀ ಭವನ’ ವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.

ಗ್ರಾಮದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವ ಉದ್ದೇಶದಿಂದ ನಿರ್ಮಿಸಿರುವ ಈ ನೂತನ ಭವನವು ಸಾರ್ವಜನಿಕರಿಗೆ, ಗ್ರಾಮಸ್ಥರಿಗೆ ಹಾಗೂ ದೇವಸ್ಥಾನದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ನೆರವಾಗಲಿದೆ. ಸುಸಜ್ಜಿತ ಭವನ ನಿರ್ಮಾಣದಿಂದ ಗ್ರಾಮದಲ್ಲಿ ಧಾರ್ಮಿಕ ಸಮಾರಂಭಗಳು, ಸಭೆ-ಸಮಾರಂಭಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಉತ್ತಮ ಸ್ಥಳಾವಕಾಶ ದೊರಕಿದಂತಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಮೂಲಸೌಕರ್ಯಗಳ ನಿರ್ಮಾಣವು ಸಮುದಾಯದ ಒಗ್ಗಟ್ಟು, ಸಾಮಾಜಿಕ ಚಟುವಟಿಕೆಗಳು ಹಾಗೂ ಧಾರ್ಮಿಕ ಪರಂಪರೆಯನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬನಶ್ರೀ ಭವನ ಗ್ರಾಮಸ್ಥರ ಬಹುದಿನಗಳ ಅಗತ್ಯಕ್ಕೆ ಪೂರಕವಾಗಿದ್ದು, ಗ್ರಾಮದ ಅಭಿವೃದ್ಧಿಗೆ ಮತ್ತೊಂದು ಕೊಡುಗೆಯಾಗಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ದತ್ತಾ ಬಂಡಿಗಣಿ, ಲಕ್ಷ್ಮೀನಾರಾಯಣ ಕಲ್ಲೂರ್, ಮಹೇಶ ಸುಳೇಭಾವಿ, ಶಿವಲಿಂಗಪ್ಪ ಇಂಗಳೆ, ನಾರಾಯಣ ಹೊಸಕೋಟಿ, ಕಲ್ಲಪ್ಪ ಕಣಬರಗಿ, ಮನೋಹರ್ ಇಂಗಳೆ, ಲಕ್ಷ್ಮಣ ಬಕರಿ, ಮಹಾದೇವ್ ರಾಗಿ, ಗೋಪಾಲ ಪಿಟಗಿ, ಶ್ರೀಧರ್ ಕರೇಮನಿ, ಬಸವರಾಜ ಗೋಕಾವಿ, ರಮೇಶ್ ಹೊಸಕೋಟಿ, ಬಸವರಾಜ ಹುಲಮನಿ, ಉದಯ ವಠಾರಿ, ಬಸವರಾಜ ಇಂಗಳೆ, ವೀರಭದ್ರ ನೇಸರಗಿ, ಶಂಕರ ಇಂಗಳೆ ಹಾಗೂ ಬಾಬು ವಾಗೇರಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳಿಗೆ ಶಾಕ್‌ ಶಾಕ್‌ – 100ಕ್ಕೂ ಹೆಚ್ಚು ಮನೆಗಳ ಮೇಲೆ ಪೊಲೀಸರ ದಾಳಿ

Spread the loveಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ