ನಮ್ಮ ಪೂರ್ವಜರು ಮರಕ ಸಂಕ್ರಾಂತಿ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡ್ತಾಯಿದ್ರು. ಆದ್ರೆ, ಮಾರ್ಡನ್ ಹಾಗೂ ಅನ್ ಲೈನ್ ಯುಗದಲ್ಲಿ ಸಂಕ್ರಾಂತಿ ಹಬ್ಬದ ಕಳೆ ಮರಿಚುಕ್ಕಿಯಾಗ್ತಾಯಿದೆ. ಆದ್ರೂ ಸಹ ಗಂಡುಮಟ್ಟಿನ ನಾಡಿನಲ್ಲಿ ಹಳೇ ಸಂಪ್ರದಾಯವನ್ನು ಮೆಲುಕು ಹಾಕಲಾಗಿದೆ. ಆ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಹಾಗಾದ್ರೆ ನೀವು ಒಂದು ಸಾರಿ ನೋಡಿ ಆ ಒಂದು ಝಲಕ್…
ಇಳಕಲ್ ಸೀರೆ ತೊಟ್ಟು ರಗಡ್ ಲುಕ್ ನಲ್ಲಿರೋ ಹೆಣ್ಣು ಮಕ್ಕಳು.. ಅದಿಕ್ ನಾವ್ ಏನ್ ಕಮ್ಮಿ ಅಂತಾ ಜುಬ್ಬಾ ಧೋತಿ ತೊಟ್ಟಿರೋ ನಮ್ಮ ಗಂಡ್ ಹೈಕ್ಳು.. ಮತ್ತೊಂದೆಡೆ ಚಿಕ್ಕ ಮಕ್ಕಳ ಆಟ್.. ಎಸ್ ಇಂತೆದೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ. ಅಂದಹಾಗೇ ಹುಬ್ಬಳ್ಳಿ ತಾಲೂಕು ಬಣಜಿಗ ಸಮೂದಾಯ ಇಂತಹದೊಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಸಂಕ್ರಾತಿ ಹಬ್ಬದ ಪ್ರಯುಕ್ತ ತಮ್ಮ ಜನಾಂಗಕ್ಕೆ ದೇಶಿ ಸೋಗಡನ್ನ ತೋರಿಸೋ ಸದುದ್ದೇಶದ ಜೊತೆಗೆ ಗ್ರಾಮೀಣ ಭಾಗದಲ್ಲಿ ಪುರಾಥನ ಕಾಲದಲ್ಲಿ ಸಂಕ್ರಾತಿ ಹಬ್ಬವನ್ನ ಯಾವ ರೀತಿ ಆಚರಿಸುತ್ತಾರೆ ಎನ್ನೋದನ್ನ ತಮ್ಮ ಸಮೂದಾಯ ಹಾಗೂ ಯುವ ಜನಾಂಗಕ್ಕೆ ತಿಳಿಸೋ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹೀಗಾಗಿ ತಾಲೂಕಿನ ಗ್ರಾಮೀಣ ಪ್ರದೇಶದ ಜನರಲ್ಲದೇ, ಹುಬ್ಬಳ್ಳಿ ನಗರದ ನೂರಾರು ಕುಟುಂಬಗಳು ಕೂಡಾ ಈ ಹಳ್ಳಿ ಹಬ್ಬದಲ್ಲಿ ಭಾಗವಹಿಸಿ ಫುಲ್ ಏಂಜಾಯ್ ಮಾಡಿದ್ರು. ಮಹಿಳೆಯರು, ಪುರುಷರು ಹಾಗೂ ಚಿಕ್ಕಮಕ್ಕಳಿಗೂ ಗ್ರಾಮೀಣ ಸೊಬಗಿನ ಕ್ರೀಡೆ ಹಾಗೂ ಚಟವಟಿಕೆಗಳನ್ನ ಮಾಡಿಸಿದ್ರು. ಇದಕ್ಕೆ ಹೆಂಗೆಳೆಯಿರಿಂದಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಕಾರ್ಯಕ್ರಮದಲ್ಲಿ ಭಾಹವಹಿಸಿ ಫುಲ್ ಏಂಜಾಯ್ ಮಾಡಿದ್ರು…
ಈ ಸಂಕ್ರಾತಿ ಹಬ್ಬದಲ್ಲಿ, ನಾನಾ ಕ್ರೀಡೆ ಹಾಗೂ ಮನರಂಜನೆಯ ದೇಶಿ ಹಾಗೂ ಗ್ರಾಮೀಣ ಭಾಗದ ಸೊಗಡಿ ಆಟಗಳನ್ನ ಆಯೋಜನೆ ಮಾಡಲಾಗಿತ್ತು. ಮಹಿಳೆರಾಗಿ ಹಗ್ಗ ಜಗ್ಗಾಟ, ಕಪ್ಪೆ ಜಿಗಿತ,ರನ್ನಿಂಗ್, ಎತ್ತಿನ ಬಂಡಿ ಓಟ. ಜೊತೆ ಹಾಸ್ಯ ಕಾರ್ಯಕ್ರಮ ಕೂಡಾ ಆಯೋಜನೆ ಮಾಡಲಾಗಿತ್ತು. ಅಲ್ಲದೇ, ಮತ್ತೊಂದು ವಿಶೇಷವೆಂದ್ರೆ ಕನ್ನಡ ಕೋಗಿಲೆ ಖ್ಯಾತಿ ಅರ್ಜುನ್ ಇಟಗಿ ಈ ಕಾರ್ಯಕ್ರಮದಲ್ಲಿ ಭಾಗಿ ತಮ್ಮ ಎಂದಿನ ಮೋಹಕ ಹಾಡಿನ ಝಲಕ್ ಉಣ್ಣಬಡಿಸಿದ್ರು. ಹೀಗಾಗಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವವರೆಗೂ ಕೂಡಾ ಫುಲ್ ಏಂಜಾಯ್ ಮಾಡಿದ್ರು…
: ಕೇವಲ ಸಂಕ್ರಾಂತಿ ಸಂಭ್ರಮ ಭಾಷಣ ಸಿನಿಮಾ ಹಾಡುಗಳಿಗೆ ಸೀಮಿತವಾಗುತ್ತಿತ್ತು. ಆದ್ರೇ, ಈ ಭಾರಿ ಮಾತ್ರ ದೇಶಿ ಸೋಗಡನ್ನ ತಮ್ಮ ಮುಂದಿನ ಪೀಳಿಗೆಗೆ ಪರಿಚಸೋ ಉದ್ದೇಶದಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದರಂತೆ. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಫುಲ್ ಏಂಜಾಯ್ ಮಾಡಿ ಹಬ್ಬ ಆಚರಣೆ ಮಾಡಿದ್ರು. ಒಟ್ನಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಕ್ರಮ ಸಂಭ್ರಮ ಮುಗಿಲುಮುಟ್ಟಿತ್ತು