ಸೊಲ್ಲಾಪುರ.
. ಹೌದು ಈಗಿನ ಕಾಲದ ಸಾವಿತ್ರಿಬಾಯಿಪುಲೆ ಎಂದೇ ಹೆಸರಾದ ಇಲ್ಲೇ ಶಿಕ್ಷಕಿ ರಾಜಶ್ರೀ ಕಲ್ಯಾಣ್ ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ನಾಗಣಸೂರ ಜಿಲ್ಲಾ ಪರಿಷತ್ ಶಾಲೆ ಮಕ್ಕಳು ಇವತ್ತಿನ ಕಾಲದಲ್ಲಿ ಇಂಗ್ಲಿಷ್ ಎಂಬ ಕಬ್ಬಿಣದ ಕಡಲೆಯಾಗಿರುವ ಇಲ್ಲಿನ ವಿದ್ಯಾರ್ಥಿಗಳು ಜಿಲ್ಲಾ ಪರಿಷತ್ ಶಾಲೆಯ ಮಕ್ಕಳು ಮುತ್ತು ಉದುರಿದಂತೆ ಮಾತನಾಡುತ್ತಾರೆ.
ವಿದ್ಯಾರ್ಥಿಗಳು ಪ್ರತಿನಿತ್ಯ ಎರಡು ಕಿಲೋಮೀಟರ್ ಹೊರಗೆ ನಡೆದುಕೊಂಡು ಶಾಲೆಗೆ ಬರುತ್ತಾರೆ .ಇಂಗ್ಲಿಷ್ ಭಾಷೆ ಶಬ್ದಗಳನ್ನು ನೀರು ಕುಡಿದಷ್ಟು ಸುಲಭವಾಗಿ ಮಾತನಾಡುತ್ತಾರೆ..
ನಾಗಣಸೂರ ಸುತ್ತಮುತ್ತ ಎಂಟಕ್ಕೂ ಅಧಿಕ ಶಾಲೆಗಳಿದ್ದು ಅದರಲ್ಲಿ ಈ ( ಲಿಂಬಿತೋಟೆ ) ಶಾಲೆ ವಸತಿ ಶಾಲೆ ವಿದ್ಯಾರ್ಥಿಗಳೆಂದರೆ ಇಂಗ್ಲಿಷ್ ಮೀಡಿಯಂ ಶಾಲೆ ವಿದ್ಯಾರ್ಥಿಗಳ ಗಿಂತಲೂ ಇಂಗ್ಲಿಷ್ನಲ್ಲಿ ಒಂದು ಹೆಜ್ಜೆ ಮುಂದೆ ಇಡುತ್ತಾರೆ.
ಒಂದೇ ದಿನದಲ್ಲಿ 100 ಹೆಚ್ಚು ಇಂಗ್ಲಿಷ್ ಪದಗಳನ್ನು ಬಾಯಿಪಾಟ ಮಾಡುತ್ತಾರೆ.
ಈ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದಿದ ಮಕ್ಕಳು 15 ದಿನಗಳಲ್ಲಿ ಇಂಗ್ಲಿಷ್ ಮಾತನಾಡುತ್ತಾರೆ.
ಈ ಶಿಕ್ಷಕಿಯ ಸತತವಾಗಿ ಕಿರುಪರೀಕ್ಷೆ ತೆಗೆದುಕೊಳ್ಳುವ ಪ್ರಯತ್ನದಿಂದ ಇಲ್ಲಿ ಎರಡನೆಯ ವರ್ಗದ ವಿದ್ಯಾರ್ಥಿಗಳು ಎರಡು ಸಾವಿರಕ್ಕಿಂತ ಹೆಚ್ಚು ಇಂಗ್ಲಿಷ್ ಶಬ್ದಗಳನ್ನು ಹೇಳುತ್ತಾರೆ. ಅದರಂತೆ 300 ಇಂಗ್ಲಿಷ್ ವಾಕ್ಯಗಳನ್ನು ಮಕ್ಕಳು ತಯಾರಿಸುತ್ತಾರೆ . ಶಾಲೆಯ ಶಿಕ್ಷಕಿಯಾಗಿ 1000 ಅನುದಾನದಿಂದ ಕೆಲಸ ಮಾಡಿಕೊಂಡು ಮುಂದುವರೆದ
ನಾಗಣಸೂರ ಸಮೀಪದಲ್ಲಿರುವ ವಸತಿ ಶಾಲೆ ಕಲಿಯುತ್ತಿರುವ ಮಕ್ಕಳು ಶಿಕ್ಷಕಿ ರಾಜಶ್ರೀ ಕಲ್ಯಾಣ ಮೂಲತ ನಾಗಣಸೂರ ಊರಿನವರಾದ ಇಲ್ಲಿಯ ಶಿಕ್ಷಕಿ ರಾಜಶ್ರೀ ಕಲ್ಯಾಣ್ ಅವರ ಜಗತ್ತಿನಲ್ಲಿ ನಮ್ಮ ವಿದ್ಯಾರ್ಥಿಗಳು ಹಿಂದೆ ಉಳಿಯಬಾರದು 18 ತಾಸು ಅಭ್ಯಾಸ ಮಾಡಿ ವಿದ್ಯಾರ್ಥಿಗಳಿಗೆ ಪಾಠ ನೀಡುತ್ತಾರೆ
.
ಪ್ರತಿಯೊಂದು ವಿದ್ಯಾರ್ಥಿಗಳು 95 ಸಂಖ್ಯೆ ಎಲ್ಲಿರುವ ಅಂಕಗಣಿತದ ಸಂಖ್ಯೆಗಳ ಎಣಿಕೆ ಸೂತ್ರವನ್ನು ಧಾರಾಳವಾಗಿ ಹೇಳಬಲ್ಲರು (ಉದಾಹರಣೆಯಾಗಿ ಬಿಡಿ ಹತ್ತು ನೂರು ಸಾವಿರ ಲಕ್ಷ ಮುಂತಾದವುಗಳು ಹೇಳುತ್ತಾರೆ).
ಶಿಕ್ಷಕಿ 2014ರಲ್ಲಿ ಜಿಲ್ಲಾಪರಿಷತ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಶಿಕ್ಷಕಿ ಅವರಿಗೆ ಹಳೆ ಬ್ಯಾನರ್( ಪ್ಯಾಕ್ಸ್ ) ಅದರ ಮೇಲೆ ಕೂಡ ಶಿಕ್ಷಕಿ ಬರೆದುಕೊಂಡು ಬಂದು ಮಕ್ಕಳಿಗೆ ಪಾಠ ಹೇಳುತ್ತಾರೆ.
ಇವರಿಗೆ ಹಳೆಯ ಬಾಕ್ಸ್ ( ರಟ್ಟಿನ ಡಬಿ ) ಕೂಡಾ ಇವರು ವೇಸ್ಟ್ ಮಾಡುವುದಿಲ್ಲ ಅದರ ಮೇಲೆ ಕೂಡ ಶಿಕ್ಷಕಿ ಬರೆದಿರುವ
ಶಬ್ದಗಳು ಸಿಗುತ್ತವೆ .
ವಿಶೇಷ ಎಂದರೆ ಶಿಕ್ಷಕಿ ಮನೆಯ ತುಂಬಾ ಶಬ್ದ ಸಂಗ್ರಹವೇ ಅವರ ಮನೆಯ ಮೇಲೆ ಆಂಟಿ ಸಿಕೊಂಡಿದ್ದಾರೆ ಮನೆಯಲ್ಲಿರುವ ಗೋಡೆಮೇಲೆ ಬಾಗಲ ಮೇಲೆ ಕಿಟಕಿ ಮೇಲೆ ಪ್ರತಿಯೊಂದು ಮೂಲೆಯಲ್ಲಿ ಅಂಟಿಸಿರುವ ಶಬ್ದಗಳನ್ನು ಕಾಣಬಹುದು
ಸ್ವಂತ ಹಣದಿಂದ ಪ್ರತಿ ರವಿವಾರ ನಡೆಯುತ್ತಿರುವ ಸಂತೆ ಎಲ್ಲಿಯ ಕಾಯಿಪಲ್ಲೆ ಯನ್ನು ತಂದು ಪ್ರತಿಯೊಂದು ಇಂಗ್ಲಿಷ್ನಲ್ಲಿ ಮಕ್ಕಳಿಗೆ ಹೇಳುತ್ತಾರೆ.
ಇದಕ್ಕೆಲ್ಲ ಅವರ ಪತಿ ( ಮಲ್ಲಿನಾಥ ಕಲ್ಯಾಣ್ )ಇದಕ್ಕೆ ತುಂಬಾ ಸಪೋರ್ಟ್ ಆಗಿ ನಿಂತುಕೊಳ್ಳುತ್ತಾರೆ.
ಇಲ್ಲಿ ವಿದ್ಯಾರ್ಥಿಗಳು ಶಿಕ್ಷಕಿಯ ಹುಟ್ಟುಹಬ್ಬ ನಿಮಿತ್ಯವಾಗಿ ಪೇಪರ್ ಮತ್ತು ಸ್ಕೆಚ್ ಪೆನ್ ತಂದುಕೊಡುತ್ತಾರೆ.
ಇಂಥ ಶಿಕ್ಷಕರು ಇನ್ನಷ್ಟು ಮುಂದೆ ಬೆಳೆಯಲಿ ಎಂದು ನಮ್ಮ ಆಶಯ