Breaking News

ಸಿಸಿಬಿ ಪೊಲೀಸರ ದಾಳಿ: 3 ಲಕ್ಷ ಮೌಲ್ಯದ ಗಾಂಜಾ ಜಪ್ತಿ

Spread the love

ಬೆಳಗಾವಿ: ಕಾಕತಿ ಎನ್ಎಚ್-48 ರ ಸರ್ವಿಸ ಮಾರ್ಗದಲ್ಲಿರುವ ಚಿಗರಿ ಪ್ರಕೃತಿ ಶಿಬಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುವ ವೇಳೆ ಬೆಳಗಾವಿಯ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ  ಪಡೆದು ಗಾಂಜಾ ವಶಕ್ಕೆ ಪಡೆದಿದ್ದಾರೆ.

ಸೈಯ್ಯದ ನಿಸಾರ ತಂದೆ ಸೈಯ್ಯದ ಇಸಾಕ (40) ಬಂದಿತ ಆರೋಪಿ ಆರೋಪಿ ನಂ.2 ಗಜಾನನ, ಎಂಬಾತನಿಗೆ ಮಾರಾಟ ಮಾಡಲು ಬಂದಾಗ ಸಿಸಿಬಿ ವಿಭಾಗ ಪಿಐ. ಮಂಜುನಾಥ ನಾಯಕ, ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತನಿಂದ 3,05,000 ರೂ. ಮೌಲ್ಯದ 6 ಕೆಜಿ. 145 ಗ್ರಾಂ ನಷ್ಟು ಗಾಂಜಾ, 5000 ರೂ. ಮೌಲ್ಯದ ಮೋಬೈಲ್ ಹೀಗೆ ಒಟ್ಟು ರೂ.3,10,000 ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಂಡು ಆರೋಪಿತರ ವಿರುದ್ಧ ಕಾಕತಿ ಪೊಲೀಸ್ ಠಾಣೆ ಪ್ರ ಸಂ. 109/2026 ಕಲಂ.20(b),(ii)(B) ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.


Spread the love

About Laxminews 24x7

Check Also

ಬೆಳಗಾವಿಗೆ ಮೂರು ಹೋಸ ಎಕ್ಸ್‌ಪ್ರೆಸ್ ರೈಲುಗಳ ಆರಂಭ

Spread the loveದಕ್ಷಿಣ ಮಧ್ಯ ರೈಲ್ವೆಯು ಹೈದರಾಬಾದ್, ಸಿಕಂದರಾಬಾದ್ ಮತ್ತು ಚರ್ಲಪಲ್ಲಿಯನ್ನು ಬೆಳಗಾವಿಯೊಂದಿಗೆ ಸಂಪರ್ಕಿಸುವ ಮೂರು ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ