Breaking News

RSS ಅವ್ರು ಪಾಕಿಸ್ತಾನದ ಏಜೆಂಟ್‌ಗಳು: ಪ್ರಿಯಾಂಕ್ ಖರ್ಗೆ

Spread the love

ಬೆಂಗಳೂರು: ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸದ ಲೆಕ್ಕ ಕೇಳಿದ್ದ ಬಿಜೆಪಿ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. RSS ಬಗ್ಗೆ ಪ್ರಸ್ತಾಪ ಮಾಡಿರೋ ಅವರು RSSನವರು ದೇಶದ್ರೋಹಿಗಳು ಅಂತ ಕಿಡಿಕಾರಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ವಿದೇಶಿ ಪ್ರಚಾದ ಬಗ್ಗೆ ಬಿಜೆಪಿ ಲೆಕ್ಕ ಕೊಟ್ಟರು. ಮೋದಿ ಅವರು ಸಾಮಾನ್ಯ ಕುಟುಂಬದಿಂದ ಬಂದವರು, ಫಕೀರ ಅಂತ ಕರೆಸಿಕೊಳ್ತಾರೆ. ಹಾಗಾದರೆ ಅವರು ಎಲ್ಲೆಲ್ಲಿಗೆ ಹೋಗಿದ್ರು ಅವರಿಗೆ ಎಲ್ಲಿಂದ ದುಡ್ಡು ಬಂತು? ಈಗ ಜನರ ದುಡ್ಡಲ್ಲಿ ಹೋಗ್ತಾರೆ. ಆಗ ಹೇಗೆ ವಿದೇಶಿ ಪ್ರವಾಸ ‌ಮಾಡಿದ್ರು ಎಂದು ಪ್ರಶ್ನಿಸಿದರು.

IT, ED ರಾಹುಲ್ ಗಾಂಧಿ ಮೇಲೆ ಬಿಟ್ಟಿದ್ದೀರಾ. ಮಾಹಿತಿ ತಗೊಳ್ಳಿ. ರಾಹುಲ್ ಗಾಂಧಿ ಕಾನೂನು ಉಲ್ಲಂಘನೆ ಮಾಡಿದ್ರೆ ಯಾಕೆ ಬಿಟ್ಟಿದ್ದೀರಾ? ಒಳಗೆ ಹಾಕಿಬಿಡಿ. 13 ವರ್ಷದಿಂದ ಅದೇ ಹಾಡು, ಅದೇ ಟೋಪಿ ಹಾಕ್ತೀರಾ. ರಾಹುಲ್ ಗಾಂಧಿ, ನೆಹರೂ ಕುಟುಂಬ ದೇಶದ್ರೋಹಿ ಅಂತೀರಾ ಸಾಬೀತು‌‌ ಮಾಡಿ. ನೀವು ಆಗ ಎಲ್ಲೆಲ್ಲಿ ಹೋಗಿದ್ರಿ ಮಾಹಿತಿ ‌ಕೊಡಿ. RSS ಅವರದ್ದು IT ಇದೆಯಾ? ID ಇದೆಯಾ? ಅವರು ರಿಜಿಸ್ಟರ್ ಆಗೇ ಇಲ್ಲ. RSS ಅವರಷ್ಟು ದೊಡ್ಡ ದೇಶದ್ರೋಹಿಗಳು ಇಲ್ಲ ಎಂದು ಆರೋಪಿಸಿದರು.

ಮೋದಿ ಅವರು ಆದಾಯ ತೆರಿಗೆ ಕಟ್ಟೋರು ದೇಶಪ್ರೇಮಿಗಳು ಅಂತಾರೆ‌. ಹಾಗಾದ್ರೆ RSS ಅವರು ಇನ್‌ಕಮ್ ಟ್ಯಾಕ್ಸ್ ಕಟ್ತಾರಾ? ಅವರು ರಿಜಿಸ್ಟರ್ ಆಗೇ ಇಲ್ಲ. RSSಗೆ ಇನ್‌ಕಮ್ ಎಲ್ಲಿಂದ ಬರುತ್ತದೆ. ಹೊಸಬಾಳೆ ಅಮೆರಿಕಾಗೆ ಹೋಗ್ತಾರೆ. ಜರ್ಮನಿ, ಇಂಗ್ಲೆಂಡ್‌ಗೆ ಹೋಗ್ತಾರೆ. ಅವರಿಗೆ ಯಾರು ದುಡ್ಡು ‌ಕೊಟ್ಟರು? ರಾಹುಲ್ ಗಾಂಧಿದು‌ ಕೇಳ್ತಾರೆ. ಇವರದ್ದು ಕೇಳಬೇಕು ಅಲ್ಲವಾ? ನೀಟ್ ಎಕ್ಸಾಂನಲ್ಲಿ A1 ಆರೋಪಿ RSS ಸಂಘಟನೆ ಅವನು. ಪೋಟೋ ‌ನೋಡಿದ್ದೀರಾ? ಇಲ್ಲ ಅಂದರೆ ಕಳಿಸಿಕೊಡ್ತೀನಿ. ನನಗೆ ಕೇಳೋ ಎಲ್ಲಾ ‌ಪ್ರಶ್ನೆ ಬಿಜೆಪಿ, RSSಗೆ ಕೇಳಿ ಎಂದರು.

ಪಾಕಿಸ್ತಾನದ ಜೊತೆಗಿನ ಮಾತುಕತೆಯ ಎಲ್ಲಾ ಬಾಗಿಲುಗಳನ್ನ ಮುಚ್ಚಬಾರದು ಎಂಬ ಹೊಸಬಾಳೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, RSS ಅವರು ಪಾಕಿಸ್ತಾನದ ಏಜೆಂಟ್‌ಗಳು. 2 ನೇಷನ್ ಥಿಯರಿ. ಭಾರತ- ಪಾಕಿಸ್ತಾನ ವಿಭಾಗ ಆಗಬೇಕು ಅಂತ ಮೊದಲು ಪ್ರಸ್ತಾಪ ಮಾಡಿದ್ದೇ RSS ನ ವಿ.ಡಿ.ಸಾವರ್ಕರ್. ಇತಿಹಾಸ ಮೊದಲು ಬಿಜೆಪಿ ಸರಿಯಾಗಿ ಓದಲಿ. ನಮ್ಮ ಯಾವ ಚಾಲೆಂಜ್ ಬಿಜೆಪಿ ಸ್ವೀಕಾರ ಮಾಡಿಲ್ಲ. ಸಾವರ್ಕರ್ ಬ್ರಿಟಿಷರ ಏಜೆಂಟ್. 60 ರೂಪಾಯಿ ಪೆನ್ಶನ್ ತಗೋತಾ ಇದ್ದರು. RSS ಅವರೆಲ್ಲ ಪಾಕಿಸ್ತಾನ ಏಜೆಂಟ್‌ಗಳೇ ಎಂದು ಕಿಡಿಕಾರಿದರು.

ನಾವು ಪಾಕಿಸ್ತಾನದ ಜೊತೆ ಮಾತಾಡಬಾರದು. ಕ್ರಿಕೆಟ್ ಆಡಬಾರದು ಅಂತ ಹೇಳ್ತೀವಿ. ಅವರು ಯಾಕೆ ಮಾಡ್ತಾ ಇದ್ದಾರೆ. ಪಾಕಿಸ್ತಾನದ ಜತೆ ಮಾತಾಡಬೇಕು ಅಂತ ಯಾಕೆ ಹೇಳ್ತಾ ಇದ್ದಾರೆ. ಬಿಜೆಪಿ ಅವರು ಬಾಯಿಗೆ ಬಂದ ಹಾಗೆ ತಾಲಿಬಾನ್ ಬಗ್ಗೆ ಮಾತಾಡ್ತಾರೆ. ನಿನ್ನೆ ಯಾರ ಜೊತೆ ಒಪ್ಪಂದ ಮಾಡಿಕೊಂಡರು? ತಾಲಿಬಾನ್ ಜೊತೆ ಮಾಡಿಕೊಂಡಿದ್ದಾರೆ. RSS, ಬಿಜೆಪಿ ಅವರಿಗೆ ಇದನ್ನ ಕೇಳಿ. ಉತ್ತರ ಕೊಡದೇ ಹೇಡಿ ರೀತಿ ಓಡಿ ಹೋಗೋದು RSS ಸಂಸ್ಕೃತಿ. ಅದರಿಂದ ಮೋದಿ ಬಂದಿರೋದು. ಅದಕ್ಕೆ ಯಾವುದೇ ಉತ್ತರ ಕೊಡಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಪತಿಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್‌

Spread the loveಬೆಂಗಳೂರು: ಪತಿಗಿಂತ  ಹೆಚ್ಚು ದುಡಿಯುವ ಪತ್ನಿಗೆ  ಜೀವನಾಂಶ ನೀಡಬೇಕಿಲ್ಲ ಎಂದು ನ್ಯಾ. ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ